ಅಡಕೆ ಬೆಳೆಗೆ ಕೊಳೆರೋಗ
Team Udayavani, Aug 25, 2018, 5:37 PM IST
ಯಲ್ಲಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಗ್ರಾಮೀಣ ಭಾಗಗಳ ಅಡಕೆ ತೋಟದಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಅಡಕೆ ಮಿಡಿಗಳು ಉದುರುತ್ತಿರುವುದರಿಂದ ರೈತರು ಚಿಂತಿತರಾಗಿದ್ದಾರೆ.
ಮಳೆಗಾಲದ ಪ್ರಾರಂಭದಲ್ಲಿ ಅಡಕೆಗೆ ತಿಗಣೆ ಕಾಟದಿಂದ ಅಡಕೆ ಮುಗುಡು ಹಾಗೂ ಮಿಳ್ಳೆಗಳು ರಾಶಿ ರಾಶಿಯಾಗಿ ಉದುರಿ, ಉದುರಿದ ಅಡಕೆಯ ಒಳಗಡೆ ಬಿಳಿ ಬಣ್ಣದ ಸಣ್ಣ ಕ್ರಿಮಿಗಳು ಕಂಡು ಬಂದು ರೈತರ ಚಿಂತೆಗೆ ಕಾರಣವಾಗಿತ್ತು. ನಿರಂತರ ಮಳೆಯ ಕಾರಣದಿಂದ ಆರಂಭದಲ್ಲಿ ಕೆಲವು ಭಾಗದಲ್ಲಿ ಮಾತ್ರ ಬಯೋಫೈಟ್ ಸಿಂಪಡಿಸಿದ್ದು ಬಿಟ್ಟರೆ ಬಹುತೇಕ ರೈತರಿಗೆ ಔಷಧಿ ಸಿಂಪಡಿಸಲು ಸಾಧ್ಯವಾಗಿಲ್ಲ. ಎಡಬಿಡದೇ ಮಳೆ ಸುರಿಯುತ್ತಿದ್ದು, ತೋಟದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕೊಳೆರೋಗ ಕಾಣಿಸಿಕೊಂಡಿದೆ. ತಾಲೂಕಿನ ಬಾರೆ, ಮಲವಳ್ಳಿ, ಬೀಗಾರ, ಹೊನಗದ್ದೆ ಕಳಚೆ, ಮುಂತಾದ ಭಾಗಗಳಲ್ಲಿ ಕೊಳೆರೋಗ ವ್ಯಾಪಕವಾಗಿ ಹರಡಿದೆ. ಇದಕ್ಕೆ ಔಷಧಿ ಸಿಂಪಡಿಸಲೂ ಮಳೆ ತೊಡಕಾಗಿದೆ.
ತಾಲೂಕಿನ ಗ್ರಾಮೀಣ ಭಾಗದ ವಿವಿಧೆಡೆ ಅಡಕೆ ತೋಟಗಳಲ್ಲೆಲ್ಲಾ ಸಣ್ಣ ಅಡಕೆ ಮಿಳ್ಳೆಗಳು ರಾಶಿ ರಾಶಿಯಾಗಿ ಉದುರುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಗುರುವಾರದಿಂದ ಬಿಸಿಲು-ಮಳೆ ಮುಂದುವರಿದಿದ್ದು, ಕೊಳೆ ರೋಗ ಮತ್ತಷ್ಟು ವ್ಯಾಪಿಸಲು ಕಾರಣವಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಅಡಿಕೆ ತೋಟಗಳಲ್ಲಿ ಬೆಳೆಯ ಏರು-ಪೇರು ರೈತರನ್ನು ಹೈರಾಣಾಗಿಸಿದೆ. ಬರಗಾಲದ ಪರಿಣಾಮವಾಗಿ ಎರಡು ವರ್ಷ ಅಡಕೆಯ ಸಿಂಗಾರ ಒಣಗಿ ಹೋಗಿ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಕಳೆದ ಮೂರು ವರ್ಷಗಳಿಗೆ ಹೋಲಿಸಿದಾಗ ಈ ಬಾರಿ ಉತ್ತಮ ಬೆಳೆ ಬರಬಹುದೆಂಬ ನಿರೀಕ್ಷೆ ರೈತರಲ್ಲಿದ್ದರೂ ಕೂಡ ಕೊಳೆ ರೋಗದಿಂದಾಗಿ ನಿರೀಕ್ಷೆ ಹುಸಿಯಾಗಿದೆ.
ಈಗಾಗಲೇ ಶೇ.60 ರಷ್ಟು ಅಡಕೆ ಕೋಳೆ ರೋಗದಿಂದ ಹಾನಿಗೊಳಗಾಗಿದ್ದು, ಮುಂದಿನ ದಿನಗಳಲ್ಲಿ ಈ ಸಲದ ಬೆಳೆಯು ಸಂಪೂರ್ಣ ನಾಶವಾಗುವ ಮುನ್ಸೂಚನೆ ತೋರಿದೆ. ಕೊಳೆರೋಗಪಿಡಿತ ತಾಲೂಕೆಂದು ಪರಿಗಣಿಸಿ ತೋಟಿಗನಿಗೆ ನೇರವಾದ ಸಹಾಯಕ್ಕೆ ಸರಕಾರ ಮುಂದಾಗಬೇಕೆಂದು ಭಾರತೀಯ ಕಿಸಾನ್ ಸಂಘ ತಾಲೂಕ ಘಟಕ ಸರಕಾರವನ್ನು ಆಗ್ರಹಿಸಿದೆ.
ಕೊಳೆ ರೋಗದಿಂದಾಗಿ ಅಡಕೆ ವ್ಯಾಪಕ ಪ್ರಮಾಣದಲ್ಲಿ ಉದುರುತ್ತಿದೆ. ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಡಕೆ ಬೆಳೆಗಾರರ ನೆರವಿಗೆ ಧಾವಿಸಬೇಕು. ಕೊಳೆರೋಗದಿಂದ ನಷ್ಟ ಅನುಭವಿಸಿದ ಬೆಳೆಗಾರರಿಗೆ ಪರಿಹಾರ ನೀಡಬೇಕು.
.ರಾಮಕೃಷ್ಣ ಭಟ್ಟ ಬಾರೆ ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.