![Champions Trophy: Hruday hits century despite pain](https://www.udayavani.com/wp-content/uploads/2025/02/towhid-415x224.jpg)
![Champions Trophy: Hruday hits century despite pain](https://www.udayavani.com/wp-content/uploads/2025/02/towhid-415x224.jpg)
Team Udayavani, Jan 30, 2025, 6:18 PM IST
ದಾವಣಗೆರೆ: ಮಾಜಿ ಸಚಿವ ಡಾ| ಕೆ. ಸುಧಾಕರ್ ಬ್ಲಾಕ್‌ಮೇಲ್, ಥರ್ಡ್ ಕ್ಲಾಸ್, ಐರನ್ ಲೆಗ್, ಕಮರ್ಷಿಯಲ್ ರಾಜಕಾರಣಿ… ಹೀಗೆಲ್ಲ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಸ್ಟರ್ ಸುಧಾಕರ್‌ಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಬ್ಬ ಹೊಸ ಯುವಕನ ವಿರುದ್ಧ ಗೆಲ್ಲಲಿಕ್ಕಾಗಲಿಲ್ಲ. ಆರೋಗ್ಯ ಸಚಿವನಾಗಿದ್ದ ನಿನ್ನ ಭಾಗದಲ್ಲಿ ಎಷ್ಟು ಸೀಟುಗಳನ್ನು ಗೆಲ್ಲಿಸಿದೆ. ಒಬ್ಬ ಹೊಸ ಯುವಕ ಪ್ರದೀಪ್ ಈಶ್ವರ್ ವಿರುದ್ಧ ಸೋತಿರಿ. ಆತನ ವಿರುದ್ಧ ಗೆಲ್ಲುವುದಕ್ಕೆ ನಿನ್ನಿಂದ ಆಗಲಿಲ್ಲ. ಆರೋಗ್ಯ ಸಚಿವನಾಗಿದ್ದ ನೀನೊಬ್ಬ ಬ್ಲಾಕ್ ಮೇಲ್ ರಾಜಕಾರಣಿ ಎಂದು ದೂರಿದರು.
ಕಮರ್ಷಿಯಲ್ ಆಗಿ ಎರಡು ಖಾತೆ ಕೇಳಿದ್ದ ನೀನೊಬ್ಬ ಕಚಡಾ ರಾಜಕಾರಣಿ. ಆರೋಗ್ಯ ಸಚಿವನಾಗಿ ಎಷ್ಟು ಜಿಲ್ಲೆಯಲ್ಲಿ ಏನು ದಬಾಕಿದೆ. ಬಿಜೆಪಿ ಶಾಸಕರಿಗೆ ಎಷ್ಟು ಸಮಯ ಮೀಸಲಿಟ್ಟಿದ್ದಿ, ಎಷ್ಟು ಜನ ಬಿಜೆಪಿ, ಕಾಂಗ್ರೆಸ್ ಶಾಸಕರ ಕರೆಗಳನ್ನು ಸ್ವೀಕರಿಸಿದ್ದಿ. ನೀನೊಬ್ಬ ಥರ್ಡ್ ಕ್ಲಾಸ್ ರಾಜಕಾರಣಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ವಿಲಾಸಿ ಜೀವನ ನಡೆಸುವುದಕ್ಕಾಗಿ ಎರಡು ಖಾತೆಗಳನ್ನು ತೆಗೆದುಕೊಂಡಿದ್ದಿ. ವಿಜಯೇಂದ್ರ ಬಗ್ಗೆ ಮಾತನಾಡುವ ನೈತಿಕತೆ ನಿನಗೇನಿದೆ. ನಿನ್ನ ಸ್ವಾರ್ಥಕ್ಕೋಸ್ಕರ ದಾವಣಗೆರೆಗೆ ಮಂಜೂರಾಗಿದ್ದ ಜಯದೇವ ಆಸ್ಪತ್ರೆಯನ್ನು ಬೇರೆಗೆ ಮಾಡಿದ್ದೆ. ಮಿಸ್ಟರ್ ಸುಧಾಕರ್ ನೀನು ಮಾಡಬಾರದ್ದನ್ನೆಲ್ಲಾ ಮಾಡಿದ್ದಿ. ನಿನ್ನ ಅವಾಂತರಗಳ ಬಗ್ಗೆ ನನ್ನ ಬಳಿ ರಾಶಿ ರಾಶಿ ಮಾಹಿತಿ ಇದೆ ಎಚ್ಚರ ಎಂದರು.
ರೀ ಮಿಸ್ಟರ್ ಸುಧಾಕರ್, ವಿಜಯೇಂದ್ರ ಬಗ್ಗೆ ಇನ್ನೊಂದು ಮಾತನಾಡಿದರೂ ನಿನ್ನ ಬಂಡವಾಳವನ್ನೇ ಬಿಚ್ಚಿಡುತ್ತೇನೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಲು ನಿಮ್ಮಂತವರೇ ಕಾರಣ. ಸುಧಾಕರ್ ನೀನೊಬ್ಬ ಐರನ್ ಲೆಗ್. ಕಮರ್ಷಿಯಲ್ ರಾಜಕಾರಣಿ. ನಿನ್ನ ಬಂಡವಾಳವನ್ನು ಶೀಘ್ರದಲ್ಲೇ ಬಿಚ್ಚಿಡುತ್ತೇನೆ ನೋಡುತ್ತಿರು ಎಂದು ನೇರವಾಗಿಯೇ ಎಚ್ಚರಿಸಿದರು.
MUDA ಸೈಟ್ ಹಿಂದಿರುಗಿಸಿದ ನಂತರ ಇ.ಡಿ ನೋಟಿಸ್ ಕೊಡಲಾಗದು: ಪಾರ್ವತಿ ಪರ ವಕೀಲ ಸಂದೇಶ ಚೌಟ
Davanagere: ಹೆಬ್ಬಾಳ್ಕರ್- ರವಿ ಪ್ರಕರಣದ ಬಗ್ಗೆ ನಾನೇನು ಹೇಳಲಾರೆ: ಸ್ಪೀಕರ್ ಖಾದರ್
Gadag: ಸಾಲ ನೀಡುವಾಗ ಗಿರವಿ, ಶ್ಯೂರಿಟಿ ಇಟ್ಟುಕೊಳ್ಳುವುದು ಅಪರಾಧ: ಡಿಸಿ ಸಿ.ಎನ್. ಶ್ರೀಧರ
Chikkamagaluru: ಕಾಫಿನಾಡಿನಲ್ಲಿ ಬೆಂಗಳೂರು ಮೂಲದ ಯುವಕ-ಯುವತಿ ನಿಗೂಢ ಸಾವು
ಅನ್ನಭಾಗ್ಯದಡಿ ಇನ್ನು ಅಕ್ಕಿ ಭಾಗ್ಯ; ಕೇಂದ್ರದಿಂದ ಅಕ್ಕಿ ಪೂರೈಕೆ ಕಾರಣ ರಾಜ್ಯದ ಈ ನಿರ್ಧಾರ
You seem to have an Ad Blocker on.
To continue reading, please turn it off or whitelist Udayavani.