ಸಮಾಲೋಚನೆಗೆ ಡಿಸಿ ಬುಲಾವ್‌


Team Udayavani, Apr 14, 2018, 3:51 PM IST

14-April-20.jpg

ಅಣ್ಣಿಗೇರಿ: ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕಾಗಿ ಗೊತ್ತುಪಡಿಸಲಾದ ಭೂಮಿಗೆ ಪರಿಹಾರ ನೀಡುವಲ್ಲಿ ಅನ್ಯಾಯವಾಗಿದೆ ಎಂದು ಕಳೆದ ಏಳು ದಿನಗಳಿಂದ ಧರಣಿ ನಡೆಸುತ್ತಿದ್ದ ಸಂತ್ರಸ್ತರು, ಶುಕ್ರವಾರದಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಅವರು ಸಮಾಲೋಚನೆಗಾಗಿ ಜಿಲ್ಲಾ ಧಿಕಾರಿ ಕಚೇರಿಗೆ ಬರಲು ಧರಣಿ ನಿರತರಿಗೆ ಹೇಳಿದ್ದಾರೆ.

ಧರಣಿ ನಿರತ ಸ್ಥಳಕ್ಕೆ ತೆರಳಿ ಸಂತ್ರಸ್ತರ ಅಹವಾಲು ಆಲಿಸಿದ ನಂತರ ಡಿಎಸ್‌ಪಿ ಬಿ.ಪಿ. ಚಂದ್ರಶೇಖರ ಅವರು ಜಿಲ್ಲಾಧಿಕಾರಿ ಜೊತೆ ಮಾತನಾಡಿ ಸಮಾಲೋಚನೆಗಾಗಿ ಸಭೆ ಕರೆಯಲು ಕೋರಿದಾಗ, ಜಿಲ್ಲಾ ಧಿಕಾರಿಯವರು ಶನಿವಾರ ಮಧ್ಯಾಹ್ನ 12 ಗಂಟೆಗೆ ಸಂತ್ರಸ್ತರಿಗೆ ತಮ್ಮ ಕಚೇರಿಗೆ ಬರಲು ತಿಳಿಸಿದರು.

ಇದಕ್ಕೂ ಮೊದಲು ಉಪವಾಸ ಕೈ ಬಿಡುವಂತೆ ವಿನಂತಿಸಿದ ಡಿಎಸ್‌ಪಿ ಬಿ.ಪಿ. ಚಂದ್ರಶೇಖರ ಅವರು, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರಗಳನ್ನು ತಕ್ಷಣ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಚುನಾವಣೆ ಮುಗಿದ ನಂತರ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂಚೂಣಿಯಲ್ಲಿ ನಿಲ್ಲುವುದಾಗಿ ಹೇಳಿದರು. ಇದಕ್ಕೊಪ್ಪಿದ ಉಪವಾಸ ನಿರತರು ಅಲ್ಲಿಯವರೆಗೆ ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಹೆದ್ದಾರಿಯ ಯಾವುದೇ ಕಾಮಗಾರಿಗಳನ್ನು ಮಾಡುವಂತಿಲ್ಲ ಎಂದು ಕರಾರು ಹಾಕಿದಾಗ ಚಂದ್ರಶೇಖರ ನಿರುತ್ತರರಾದರು. ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಮಹೇಶ ಅಂಗಡಿ ಮಾತನಾಡಿ, ಹೆದ್ದಾರಿಗಾಗಿ ಗೊತ್ತು ಪಡಿಸಲಾದ ಭೂಮಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಹುಬ್ಬಳ್ಳಿಯಿಂದ ಶಿರಗುಪ್ಪಿ, ಗದಗನಿಂದ ದುಂದೂರ ಕ್ರಾಸ್‌ ವರೆಗೆ ಎಕರೆಗೆ 40 ಲಕ್ಷ ಪರಿಹಾರ ನೀಡಿದ್ದರೆ, ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಗೆ 8 ಲಕ್ಷ ನೀಡಲಾಗಿದೆ. ಅಲ್ಲದೇ ಅಭಿವೃದ್ಧಿ ಪಡಿಸಿದ ಭೂಮಿಗೆ ಗುಂಟೆಗೆ 13 ಲಕ್ಷ ನೀಡಿದರೆ, ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ 70 ಸಾವಿರ ನಿಗದಿ ಪಡಿಸಲಾಗಿದೆ. ಈ ತಾರತಮ್ಯ ಪ್ರಶ್ನಿಸಿದರೆ ಅಣ್ಣಿಗೇರಿ ಭಾಗದಲ್ಲಿ ಭೂಮಿ ಮೌಲ್ಯ ಕಡಿಮೆ ಇದೆ ಎಂದು ಹೇಳುತ್ತಾರೆ. ಭೂಮಿಯ ಮೌಲ್ಯವನ್ನು ಅದರ ಫಲವತ್ತತೆಯಿಂದ ಅಳೆಯಬೇಕೇಹೊರತು ಉದ್ಯಮ ಸ್ಥಾಪನೆಗಳ ಆಧಾರದಿಂದಲ್ಲ ಎಂದರು.

ಅಣ್ಣಿಗೇರಿಯಿಂದ 3 ಕಿಮೀ ದೂರದ ಸೈದಾಪುರ ರಸ್ತೆಯಲ್ಲಿ ಆಶ್ರಯ ಬಡಾವಣೆ ನಿರ್ಮಾಣಕ್ಕೆ ಎಕರೆಗೆ 18 ಲಕ್ಷ ರೂ.ವನ್ನು ಸರಕಾರವೇ ನೀಡಿದೆ. ಆದರೆ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಕಿಮ್ಮತ್ತಿನ ಭೂಮಿಗೆ ಬರೀ 8 ಲಕ್ಷ ಪರಿಹಾರ ನೀಡುವುದು ಯಾವ ಲೆಕ್ಕ? ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ತೆಗೆದುಕೊಂಡ ಎಲ್ಲ ಕಡೆಯ ಭೂಮಿಗೆ ಹೆಚ್ಚಿನ ಮೌಲ್ಯದ ಒಂದೇ ಮಾನದಂಡ ಅನುಸರಿಸಬೇಕಾಗಿತ್ತು. ಅದು ಬಿಟ್ಟು ಅಣ್ಣಿಗೇರಿ ತಾಲೂಕಿಗೆ ಅನ್ಯಾಯ ಬಗೆಯುವುದು ಸರಿಯೇ. ಉತಾರದಲ್ಲಿ ಇನ್ನೂ ರೈತರ ಹೆಸರುಗಳೇ ಇವೆ. ಅವರ ಅನುಮತಿ ಇಲ್ಲದೇ ಏಕಪಕ್ಷೀಯವಾಗಿ ಕಾಮಗಾರಿ ಕೈಗೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ನಾಲ್ಕು ಹಳ್ಳಿಗಳಿಗೆ ಸಂಬಂಧಿಸಿದಂತೆ 250 ಸಂತ್ರಸ್ತರಿದ್ದಾರೆ ಎಂದರು.

ಶುಕ್ರವಾರದ ಸರದಿ ಉಪವಾಸದಲ್ಲಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಬಸವರಾಜ ಕುಬಸದ, ಪ್ರಕಾಶ ಅಂಗಡಿ, ಚಂಬಣ್ಣ ಸುರಕೋಡ, ಪ್ರಹ್ಲಾದ ಬೆಳಗಲಿ, ಸಂಜೀವರಡ್ಡಿ ಅಮಡ್ಲ, ಸಿ.ಜಿ. ಪಾಟೀಲ, ಮಹೇಶ ಅಂಗಡಿ, ಅರ್ಜುನ ಕಲಾಲ, ಶಿವಪ್ಪ ಬಾಳ್ಳೋಜಿ, ಅರುಣೋದಯ ಹೆಬಸೂರ ಪಾಲ್ಗೊಂಡಿದ್ದರು. ತಾಜುದ್ದೀನ ಸಾಹೇಬ ಕಾಗದ, ಭಗವಂತಪ್ಪ ಪುಟ್ಟಣ್ಣವರ, ಮಂಜುನಾಥ ಆಡಕಾವು ಸಿಪಿಐ ಐ.ಎಸ್‌. ಗುರುನಾಥ, ಪಿಎಸ್‌ಐ ವೈ.ಎಲ್‌. ಶೀಗಿಹಳ್ಳಿ ಮತ್ತಿತರ ಪ್ರಮುಖರು ಹಾಜರಿದ್ದರು.

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.