ಜಿಲ್ಲಾಸ್ಪತ್ರೆಗೆ ಡಿಸಿ ದಿಢೀರ್ ಭೇಟಿ
Team Udayavani, Sep 5, 2018, 5:23 PM IST
ಧಾರವಾಡ: ಇಲ್ಲಿನ ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಮಂಗಳವಾರ ಬೆಳಗ್ಗೆ ಧಿಡೀರ್ ಭೇಟಿ ನೀಡಿ ಅಲ್ಲಿನ ವಸ್ತು ಸ್ಥಿತಿ, ಸೌಲಭ್ಯಗಳನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಸಿಗುತ್ತಿರುವ ಚಿಕಿತ್ಸಾ ಸೌಲಭ್ಯ ಮತ್ತು ವೈದ್ಯಕೀಯ ಸೇವೆಗಳ ಕುರಿತು ಪರಿಶೀಲಿಸಿದ ಅವರು, ಸಾಮಾನ್ಯ ವಾರ್ಡ್ ಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೊಂದಿಗೆ ಸಮಾಲೋಚಿಸಿ ವೈದ್ಯರ ಕಾರ್ಯವೈಖರಿ, ಜನರಿಗೆ ಸಿಗುತ್ತಿರುವ ಸ್ಪಂದನೆ, ಚಿಕಿತ್ಸೆ ಕುರಿತು ಅಭಿಪ್ರಾಯ ಪಡೆದರು.
ನಾಗರಿಕ ಸೌಲಭ್ಯ ಸಂಕೀರ್ಣ, ಕೆಎಂಎಫ್ ಹಾಲಿನ ಕೇಂದ್ರ, ಹಣ್ಣಿನ ಅಂಗಡಿ, ಚಿಕ್ಕಮಕ್ಕಳ ಚಿಕಿತ್ಸಾ ವಿಭಾಗ, ಪ್ರಸೂತಿ ವಿಭಾಗ, ಸ್ತ್ರೀರೋಗ ಚಿಕಿತ್ಸಾ ವಿಭಾಗ ಮತ್ತು ಹೊಸಪೇಟೆಯ ಜಿಂದಾಲ್ ಕಾರ್ಖಾನೆಯ ಸಿಎಸ್‌ಆರ್ ಚಟುವಟಿಕೆಯ ನೆರವಿನೊಂದಿಗೆ ಸ್ಥಾಪಿಸಿರುವ ರಕ್ತಸಂಗ್ರಹಣೆ, ರಕ್ತ ಭಂಡಾರ, ಮಿದುಳಿನ ಕೇಂದ್ರ, ಸಿಟಿ ಸ್ಕ್ಯಾನ್ ಸೆಂಟರ್ ಸೇರಿದಂತೆ ವಿವಿಧ ವಿಭಾಗಕ್ಕೆ ಭೇಟಿ ನೀಡಿದ ಡಿಸಿ ದೀಪಾ ಅವರು, ಸಾರ್ವಜನಿಕರು ಹಾಗೂ ಕರ್ತವ್ಯ ನಿರತ ವೈದ್ಯರಿಂದ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ದೀಪಾ, ಔಷಧ ವಿತರಣೆಗೆ ಪ್ರತ್ಯೇಕವಾಗಿ ಕೌಂಟರ್ ಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. ಎಲ್ಲ ಡಿಜಿಟಲ್ ಉಪಕರಣಗಳನ್ನು ಸಮರ್ಪಕವಾಗಿ ಬಳಸಬೇಕು. ತಾಯಿ ಮತ್ತು ಮಗುವಿನ ಚಿಕಿತ್ಸೆಗೆ ಹೆಚ್ಚು ಒತ್ತು ನೀಡುವ ಮೂಲಕ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಶ್ರಮಿಸಬೇಕು. ರಕ್ತಹೀನತೆಯಿಂದ ಬಳಲುತ್ತಿರುವ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸರ್ಕಾರದ ಸೌಲಭ್ಯಗಳು ಸೇರಿದಂತೆ ಮಾತೃಪೂರ್ಣ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಭೇಟಿ ಸಂದರ್ಭದಲ್ಲಿ ಕೆಲವು ಸಾರ್ವಜನಿಕರು ಆಸ್ಪತ್ರೆಯಲ್ಲಿ 108 ತುರ್ತು ಚಿಕಿತ್ಸಾ ವಾಹನ ಹಾಗೂ ಅಂಬ್ಯುಲೆನ್ಸ್ ಸೇವೆಗಳನ್ನು ಉತ್ತಮ ಪಡಿಸಲು ಮನವಿ ಮಾಡಿದರು. ಹೆರಿಗೆ ಸಂದರ್ಭದಲ್ಲಿ ಸಂಭವಿಸಿದ ಸಾವಿನ ಪ್ರಕರಣವೊಂದರ ಕುರಿತು ಜಿಲ್ಲಾಧಿಕಾರಿ ಗಮನವನ್ನು ರೋಗಿಯ ಸಂಬಂಧಿಕರು ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ದೀಪಾ, ಸಾರ್ವಜನಿಕರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಹಾಗೂ ಪ್ರಸೂತಿ ವಿಭಾಗದ ಸೇವೆಗಳನ್ನು ಆದ್ಯತೆಯಡಿ ಸಮರ್ಪವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಗಿರಿಧರ ಕುಕನೂರ ಅವರು ಪ್ರಾತ್ಯಕ್ಷಿಕೆ ಮೂಲಕ ಜಿಲ್ಲಾಸ್ಪತ್ರೆಯ ಸೌಲಭ್ಯ, ಸಿಬ್ಬಂದಿ ಹಾಗೂ ಮೂಲಸೌಕರ್ಯಗಳ ಕುರಿತು ಜಿಲ್ಲಾಧಿಕಾರಿಗೆ ವಿವರಿಸಿದರು. ಸ್ಥಾನಿಕ ವೈದ್ಯಾಧಿಕಾರಿ ಡಾ|ಕಳಸಗೌಡರ, ಸ್ತ್ರೀರೋಗ ತಜ್ಞ ವೈದ್ಯ ಡಾ|ಗಾಬಿ, ಪತ್ರಾಂಕಿತ ಸಹಾಯಕ ಮಾನೆ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.