ಸ್ವಯಂ ಘೋಷಿತ ಲಾಕ್‌ಡೌನ್‌ಗೆ ನಿರ್ಧಾರ
ದಿನಸಿ ಖರೀದಿಗೆ ಕಿಕ್ಕಿರಿದು ಸೇರಿದ ಜನರು
Team Udayavani, May 20, 2021, 2:21 PM IST
ನವಲಗುಂದ: ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ವರ್ತಕರು ಹಾಗೂ ಪುರಸಭೆ ಸದಸ್ಯರು ಸ್ವಯಂ ಘೋಷಿತ ಲಾಕ್ ಡೌನ್ ನಿರ್ಧಾರ ಕೈಗೊಂಡಿದ್ದರಿಂದ ಬುಧವಾರ ಜನರು ಬೆಳಿಗ್ಗೆ 10 ಗಂಟೆಯವರಿಗೆ ಕಿರಾಣಿ, ಕಾಯಿಪಲ್ಲೆ, ದಿನಸಿ ಖರೀದಿಗೆ ಕಿಕ್ಕಿರಿದು ಸೇರಿದ್ದರು.
ಮೇ 20 ರಿಂದ 26ರವರೆಗೆ ಒಂದು ವಾರ ಕಾಲ ಪಟ್ಟಣದಲ್ಲಿ ಆಸ್ಪತ್ರೆ, ಹಾಲು, ಪತ್ರಿಕೆ, ಔಷಧ ಅಂಗಡಿ ಹೊರತು ಪಡಿಸಿ ಎಲ್ಲ ದಿನಸಿ ವ್ಯಾಪಾರ-ವಹಿವಾಟು ಬಂದ್ ಮಾಡಿ ಸ್ವಯಂ ಘೋಷಿತ ಲಾಕ್ ಡೌನ್ ಮಾಡುವಂತೆ ತಹಶೀಲ್ದಾರ್ ಗೆ ಮನವಿ ನೀಡಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ಟ್ರಾÂಕ್ಸ್, ದ್ವಿಚಕ್ರ ವಾಹನಗಳ ಮುಖಾಂತರ ಒಂದು ವಾರಕ್ಕೆ ಬೇಕಾಗುವಷ್ಟು ದಿನಸಿ ಖರೀದಿಸಲು ಅಂಗಡಿಗಳ ಮುಂದೆ ಮುಗಿ ಬಿದ್ದಿದ್ದರು.
ಎಪಿಎಮ್ ಸಿಯಲ್ಲೂ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ಜನರು ತರಕಾರಿ ವ್ಯಾಪಾರದಲ್ಲಿ ಮಗ್ನರಾಗಿದ್ದರು. ಪಟ್ಟಣದ ಬ್ಯಾಂಕ್‌ಗಳಲ್ಲೂ ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ರೇಷನ್ ಅಂಗಡಿಗಳ ಮುಂದೆಯೂ ಆಹಾರಧಾನ್ಯ ಪಡೆಯಲು ಯಾವುದೇ ನಿಯಮಗಳು ಪಾಲನೆ ಆಗಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.