ರಾಜ್ಯಾದ್ಯಂತ ವಹಿವಾಟು ಸ್ಥಗಿತಕ್ಕೆ ನಿರ್ಧಾರ
Team Udayavani, Jul 29, 2017, 12:40 PM IST
ಹುಬ್ಬಳ್ಳಿ: ರಾಜ್ಯ ಸರಕಾರ ಜಾರಿಗೊಳಿಸಿರುವ ಇ-ಪಾವತಿ ವಿರೋಧಿಸಿ ಆಗಸ್ಟ್ 5ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ವಹಿವಾಟು ಸ್ಥಗಿತಗೊಳಿಸಿ ಹೋರಾಟ ನಡೆಸಲು ಎಪಿಎಂಸಿ ವರ್ತಕರು ನಿರ್ಧರಿಸಿದ್ದಾರೆ.
ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಸಭಾಭವನದಲ್ಲಿ ಶುಕ್ರವಾರ ನಡೆದ ಇ-ಟೆಂಡರ್ ಹಾಗೂ ಇ- ಪಾವತಿ ಕುರಿತ ವರ್ತಕರ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವರ್ತಕರೆಲ್ಲ ಸರಕಾರದ ಇ-ಪಾವತಿ ವ್ಯವಸ್ಥೆಯನ್ನು ವಿರೋಧಿಸಿದರಲ್ಲದೆ, ತಮ್ಮ ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಹೋರಾಟ ನಡೆಸಲು ಒಕ್ಕೊರಲಿನ ನಿರ್ಣಯ ಕೈಗೊಂಡರು.
ಕೆಸಿಸಿಐ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಮಾತನಾಡಿ, ರಾಜ್ಯ ಸರಕಾರ ಜಾರಿಗೊಳಿಸಿದ ಇ-ಪಾವತಿ ಅವೈಜ್ಞಾನಿಕವಾಗಿದೆ. ಆದ್ದರಿಂದ ವ್ಯಾಪಾರಸ್ಥರು ಒಕ್ಕಟ್ಟಾದರೆ ಏನನ್ನಾದರೂ ಸಾಧಿಸಬಹುದು. ಇ-ಪಾವತಿ ವ್ಯವಸ್ಥೆ ರದ್ದುಪಡಿಸಬೇಕು. ದೇಶಾದ್ಯಂತ ಒಂದೇ ತೆರನಾದ ಸೆಸ್ ಜಾರಿಗೊಳಿಸಬೇಕೆಂಬ ಬೇಡಿಕೆಯಿಟ್ಟುಕೊಂಡು ನಿರಂತರ ಹೋರಾಟ ಮಾಡಬೇಕು.
ರಾಜ್ಯದಲ್ಲಿನ ಎಲ್ಲ ವ್ಯಾಪಾರಸ್ಥರ ಸಂಘ- ಸಂಸ್ಥೆಗಳು ಮುಖ್ಯಮಂತ್ರಿ, ಕೃಷಿ ಸಚಿವರು, ಕೆಸಿಸಿಐಗೆ ಮನವಿ ಸಲ್ಲಿಸಿದ ನಂತರ ಹೋರಾಟ ಆರಂಭಿಸೋಣ. ಅದಕ್ಕಾಗಿ ವರ್ತಕರಲ್ಲಿ ದೃಢ ನಿರ್ಧಾರ ಇರಬೇಕು ಎಂದರು. ಈ ವೇಳೆ ಅಭಿಪ್ರಾಯ ಹಂಚಿಕೊಂಡ ಹುಬ್ಬಳ್ಳಿ ಎಪಿಎಂಸಿ ಆಡಳಿತ ಮಂಡಳಿ ಸದಸ್ಯ ಜಗದೀಶಗೌಡ ಪಾಟೀಲ, ಇ-ಪಾವತಿ ಎಂಬುದೆ ಅವೈಜ್ಞಾನಿಕ ವ್ಯವಸ್ಥೆಯಾಗಿದೆ.
ಖರೀದಿ ಮಾಡಿದ 24 ತಾಸಿನೊಳಗೆ ಹಣ ಪಾವತಿಸುವುದು ಎಂದರೆ ಎಂತಹ ಶ್ರೀಮಂತನಿಂದಲೂ ಆಗಲಾರದು. ಮಾರ್ಕೆಟಿಂಗ್ ಫೆಡರೇಶನ್‌ದವರು ರೈತರಿಂದ 3-4 ಚೀಲ ಖರೀದಿಸಿ, ಮಾರಾಟ ಮಾಡಿ ಈ ವ್ಯವಸ್ಥೆ ಯಶಸ್ವಿಯಾಗಿದೆ ಎಂದು ಸರಕಾರಕ್ಕೆ ತೋರಿಸಲು ಹೊರಟಿದೆ. ಆದ್ದರಿಂದ ರಾಜ್ಯ ಸರಕಾರವು ಈ ವ್ಯವಸ್ಥೆ ಹಿಂಪಡೆಯಬೇಕು ಎಂದರು.
ಮುಂಡರಗಿಯ ಬಸವನಗೌಡ, ರಾಣಿಬೆನ್ನೂರಿನ ಎಪಿಎಂಸಿ ಮಾಜಿ ಅಧ್ಯಕ್ಷ, ಬಾಗಲಕೋಟೆಯ ವೀರಣ್ಣ ಹಲಕುರ್ಕಿ, ಗಜೇಂದ್ರಗಡದ ಎಪಿಎಂಸಿ ಅಧ್ಯಕ್ಷ ಮಹಾಂತೇಶ, ಲಕ್ಷೇಶ್ವರದ ಓಂಪ್ರಕಾಶ ಜೈನ, ರಾಣಿಬೆನ್ನೂರಿನ ವೀರೇಶ ಮೋಟಗಿ, ಹಾವೇರಿಯ ಶೇಖಪ್ಪ ಗಚ್ಚಿನ, ಹುಬ್ಬಳ್ಳಿಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ, ಉಪಾಧ್ಯಕ್ಷ ಬಸವರಾಜ ಯಕಲಾಸಪೂರ,
ಎಪಿಎಂಸಿ ವರ್ತಕರ ಸಂಘದ ಸದಸ್ಯ ಚನ್ನು ಹೊಸಮನಿ, ಕೊಪ್ಪಳದ ಬಸವರಾಜ ದೇರಮನಿ, ಗದುಗಿನ ಶರಣಬಸಪ್ಪ ಗುಡಿಮನಿ, ಧಾರವಾಡದ ಶಿವಶಂಕರ ವಕ್ಕಣ್ಣವರ, ಗದುಗಿನ ಸಂಗಮೇಶ ದುಂದೂರ, ಕೊಪ್ಪಳದ ಎಸ್.ಎನ್. ಕರರಳ್ಳಿಮಠ, ವಿ.ಪಿ. ಲಿಂಗನಗೌಡರ, ಡಿ.ಎಸ್. ಗುಡ್ಡೋಡಗಿ, ಎಸ್.ಪಿ. ಸಂಶಿಮಠ , ಮಲ್ಲಿಕಾರ್ಜುನ ಅರಳಿ, ಜಿ.ಜಿ. ಹೊಟ್ಟಿಗೌಡರ, ಸಿ.ಎನ್. ಮೋಟಗಿ, ಬಸವರಾಜ ದೇವರಮನಿ, ಎಸ್.ಎನ್. ಹಂಪಣ್ಣವರ, ಜಿ.ಜಿ. ವೋರಾ ಮೊದಲಾದವರು ಮಾತನಾಡಿದರು.
ಕೆಸಿಸಿಐ ಅಧ್ಯಕ್ಷ ರಮೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗದಗ, ಬ್ಯಾಡಗಿ, ಬಳ್ಳಾರಿ, ಹಾವೇರಿ, ಹೊ ಳೆ-ಆಲೂರ, ಮಹಾ ಲಿಂಗಪುರ, ರಾಣಿಬೆನ್ನೂರ, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಬೈಲಹೊಂಗಲ, ಕುಷ್ಟಗಿ, ಕೊಪ್ಪಳ, ಕುಕನೂರ, ತಾಳಿಕೋಟಿ ಸೇರಿದಂತೆ 52 ಭಾಗ ಗದ 300ಕ್ಕೂ ಅಧಿಕ ವರ್ತಕರು ಸಭೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.