ಪ್ರತ್ಯೇಕ ಪಾಲಿಕೆಗಾಗಿ 22ರಿಂದ ಹೋರಾಟಕ್ಕೆ ನಿರ್ಧಾರ
ಧಾರವಾಡಕ್ಕೆ ಮಹತ್ವ ನೀಡದೇ ಹುಬ್ಬಳ್ಳಿಗೆ ಆದ್ಯತೆ ನೀಡುತ್ತಿರುವುದು ಬೇಸರದ ಸಂಗತಿ.
Team Udayavani, Feb 16, 2022, 5:53 PM IST
ಧಾರವಾಡ: ನಗರಕ್ಕೆ ಪ್ರತ್ಯೇಕ ಪಾಲಿಕೆಯ ಹೋರಾಟದ ಮೊದಲ ಹಂತವಾಗಿ ಫೆ. 22ರಂದು ಬೆಳಗ್ಗೆ 10 ಗಂಟೆಗೆ ಡಿಸಿ ಕಚೇರಿ ಎದುರು ಮೌನ ಹಾಗೂ ಸಾಂಕೇತಿಕ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ.
ಕವಿಸಂನಲ್ಲಿ ಮಂಗಳವಾರ ಸಂಜೆ ವಿವಿಧ ಸಂಘ-ಸಂಸ್ಥೆಗಳು, ಹಿರಿಯ ನಾಗರಿಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹೋರಾಟದ ರೂಪುರೇಷೆ ಕುರಿತು ಸಮಗ್ರವಾಗಿ ಚರ್ಚಿಸಿ ಫೆ.22ರಿಂದ ಹೋರಾಟ ಆರಂಭಿಸಲು ನಿರ್ಧರಿಸಲಾಯಿತು.
ಸ್ಮಾರ್ಟ್‌ಸಿಟಿ ಬರೀ ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿದೆ. ಧಾರವಾಡ ದಿನದಿಂದ ದಿನಕ್ಕೆ ಹಿಂದುಳಿಯುತ್ತಿದೆ. ಜಿಲ್ಲಾ ಕೇಂದ್ರ ಧಾರವಾಡ ಇದ್ದರೂ ಸಹ ಪಾಲಿಕೆ ವಿಷಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಾಜಕಾರಣಿಗಳು ಸಹ ಧಾರವಾಡಕ್ಕೆ ಮಹತ್ವ ನೀಡದೇ ಹುಬ್ಬಳ್ಳಿಗೆ ಆದ್ಯತೆ ನೀಡುತ್ತಿರುವುದು ಬೇಸರದ ಸಂಗತಿ. ಈ ಕಾರಣದಿಂದಲೇ ಪ್ರತ್ಯೇಕ ಪಾಲಿಕೆ ಬೇಕು ಎಂದು ಸಭೆಯಲ್ಲಿದ್ದವರು ಒತ್ತಾಯಿಸಿದರು.
ಸಭೆಯ ಕುರಿತು ನಿರ್ಣಯಗಳನ್ನು ಮಂಡಿಸಿದ ನ್ಯಾಯವಾದಿ ಬಸವ ಪ್ರಭು ಹೊಸಕೇರಿ, ಪ್ರತ್ಯೇಕ ಪಾಲಿಕೆ ಚಿಂತನೆ-ಹೋರಾಟವು ಹುಬ್ಬಳ್ಳಿ ಅಥವಾ ಅದರ ಅಭಿವೃದ್ಧಿ ವಿರುದ್ಧವಲ್ಲ. ಪ್ರತ್ಯೇಕ ಪಾಲಿಕೆ ಕುರಿತಂತೆ ಕಾನೂನಾತ್ಮಕವಾಗಿ ಚಿಂತನೆ ಮಾಡುವುದು, ಮೊದಲ ಹೋರಾಟವಾಗಿ ಫೆ. 22ರಂದು ಮಂಗಳವಾರ ಡಿಸಿ ಕಚೇರಿ ಎದುರು ಎರಡು ಗಂಟೆ ಮೌನ ಪ್ರತಿಭಟನೆ ಜೊತೆಗೆ ಪ್ರತಿ ಶನಿವಾರ ನಿರ್ದಿಷ್ಟ ಸಮಯಕ್ಕೆ ಹೋರಾಟಗಾರರು ಸೇರಿ ಮುಂದಿನ
ರೂಪುರೇಷೆ ಹಾಕುವುದು. ಸಾರ್ವಜನಿಕರು, ಹೋರಾಟಗಾರರನ್ನು ಒಗ್ಗೂಡಿಸಲು ಆಯಾ ವಾರ್ಡ್‌ಗಳಲ್ಲಿ ಗುಂಪುಗಳ ರಚನೆ, ಹೋರಾಟಕ್ಕೆ ದಿಕ್ಕು ತೋರಿಸಲು ವಾಟ್ಸ್ ಆ್ಯಪ್ ಗ್ರುಪ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಸಿಕೊಳ್ಳುವುದು ಹಾಗೂ ಹಂತ ಹಂತವಾಗಿ ಮಾಡಬೇಕಾದ ಕಾರ್ಯಗಳ ಬಗ್ಗೆ ಸಭೆ ಮಾಡುವುದನ್ನು ಸ್ಪಷ್ಟಪಡಿಸಿದರು. ಎಸ್.ವಿ. ಕುಲಕರ್ಣಿ, ಎಸ್.ಬಿ. ದ್ವಾರಪಾಲಕ, ಶಂಕರ ಹಲಗತ್ತಿ, ಮನೋಜ ಪಾಟೀಲ, ಕೆ.ಎಚ್. ನಾಯಕ, ವೀರಣ್ಣ ಒಡ್ಡೀನ ಮಾತನಾಡಿದರು.
ಹೋರಾಟಕ್ಕೆ ಸಲಹೆಗಳು: ಕರಬಾಕಿ ಕಟ್ಟದೇ ಧರಣಿ ಮಾಡೋಣ ಎಂದು ಮಲ್ಲಿಕಾರ್ಜುನ ಚಿಕ್ಕಮಠ, ಹೈಕೋರ್ಟ್ ಮಾದರಿಯಲ್ಲಿ ಈ ಹೋರಾಟ ನಡೆಯಲಿ ಎಂದು ರಾಜ್ಯ ವಕೀಲರ ಪರಿಷತ್ ಸದಸ್ಯ ವಿ.ಡಿ. ಕಾಮರಡ್ಡಿ, ಧಾರವಾಡದ ಪಾಲಿಕೆ ಕಚೇರಿಗೆ ಬೀಗ ಹಾಕೋಣ ಎಂದು ಚನ್ನಬಸ್ಸು ಮಾಳಗಿ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕೋಣ ಎಂದು ಮಹಾದೇವ ದೊಡಮನಿ, ಆಡಳಿತದ ದೃಷ್ಟಿಯಿಂದ ಧಾರವಾಡ, ಹಾವೇರಿ, ಗದಗ ಜಿಲ್ಲೆ ಪ್ರತ್ಯೇಕ ಮಾಡಿದಂತೆ ಹುಬ್ಬಳ್ಳಿಯಿಂದ ಧಾರವಾಡ ಸಹ ಪ್ರತ್ಯೇಕ ಮಾಡಲು ಸರ್ಕಾರಕ್ಕೆ ಅವಕಾಶವಿದೆ ಎಂದು ಲಿಂಗರಾಜ ಸರದೇಸಾಯಿ ತಮ್ಮ ಅಭಿಪ್ರಾಯ ಪ್ರತಿಪಾದಿಸಿದರು.
ಕೆಎಂಸಿ ಕಾಯ್ದೆ ಪ್ರಕಾರ 4 ಲಕ್ಷ ಜನಸಂಖ್ಯೆ ಹೊಂದಿದ ನಗರಕ್ಕೆ ಮಹಾನಗರ ಪಾಲಿಕೆಯ ಅರ್ಹತೆ ಇದೆ. ಅದನ್ನು ಧಾರವಾಡ ಹೊಂದಿದೆ. ಸದ್ಯ 29 ಪಾಲಿಕೆ ಸದಸ್ಯರಿದ್ದಾರೆ. ಪ್ರತ್ಯೇಕ ಪಾಲಿಕೆಯಾದರೆ ಇನ್ನಷ್ಟು ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ಪ್ರತ್ಯೇಕ ಬಜೆಟ್ ಮಂಡಿಸಲು ಅವಕಾಶ ದೊರೆಯಲಿದ್ದು, ಧಾರವಾಡದ ಅಭಿವೃದ್ಧಿ ಸಾಧ್ಯವಾಗಲಿದೆ.
ವೆಂಕಟೇಶ ಮಾಚಕನೂರ,
ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿ ಸದಸ್ಯ
ಹುಬ್ಬಳ್ಳಿಯಲ್ಲಿ ಅಧಿಕಾರ, ರಾಜಕೀಯ ಎಲ್ಲವೂ ಕೇಂದ್ರೀಕೃತವಾಗಿದ್ದು ಅವರಿಂದ ಧಾರವಾಡ ಬಿಡಿಸಿಕೊಳ್ಳುವುದು ತುಸು ಕಷ್ಟ. ಆದ್ದರಿಂದ ಪ್ರತ್ಯೇಕ ಪಾಲಿಕೆ ಹೋರಾಟ ಜನಪರ ಚಳವಳಿಯಾಗಬೇಕು. ಈ ಹೋರಾಟಕ್ಕೆ ಧಾರವಾಡದ ಎಲ್ಲ ವಾರ್ಡ್ ಗಳ ಸದಸ್ಯರು, ಜನರ ಬೆಂಬಲ ಸಿಗಬೇಕು.
ಎಂ.ಬಿ. ಕಟ್ಟಿ, ಹೋರಾಟಗಾರ
931 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲವೂ ಹುಬ್ಬಳ್ಳಿಯಲ್ಲಿಯೇ ನಡೆಯುತ್ತಿವೆ. ಶೇ.78 ಅನುದಾನ ಹುಬ್ಬಳ್ಳಿಗೆ ಸೀಮಿತವಾಗಿದ್ದು ಬೇಸರದ ಸಂಗತಿ. ಭೌತಿಕ ಚಳವಳಿ ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಹಕ್ಕು ಪ್ರತಿಪಾದಿಸಬೇಕಿದೆ.
ರವಿ ಮಾಳಿಗೇರ, ಕವಿವಿ ಸಿಂಡಿಕೇಟ್ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.