ವಸತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹ
Team Udayavani, Apr 21, 2017, 3:12 PM IST
ಧಾರವಾಡ: ವೃತ್ತಿಪರ ವಸತಿ ನಿಲಯ ಖಾಸಗಿ ಕಟ್ಟಡದಲ್ಲಿದ್ದು, ಕಟ್ಟಡದ ಮಾಲೀಕರು ವಿದ್ಯಾರ್ಥಿಗಳನ್ನು ಹೊರಗಡೆ ಹಾಕಿದ್ದಾರೆ. ಹೀಗಾಗಿ ವಸತಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸುಮಾರು ಅರ್ಧ ಗಂಟೆಗೂ ಅಧಿಕ ಹೊತ್ತು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ವೃತ್ತಿಪರ ವಸತಿ ನಿಲಯ ಖಾಸಗಿ ಕಟ್ಟಡದಲ್ಲಿದ್ದು, ಕಟ್ಟಡದ ಮಾಲೀಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಂತ್ರಿಕ ಸಮಸ್ಯೆಗಳಿಂದ ನಿಲಯವನ್ನು ಏಕಾಏಕಿ ಸ್ಥಳಾಂತರಿಸಲಾಗಿದೆ ಎಂದು ದೂರಿದರು.
ಈ ಮೊದಲು ವಿದ್ಯಾರ್ಥಿ ನಿಲಯದ ಎಲ್ಲ ವಿದ್ಯಾರ್ಥಿಗಳು ಸಭೆ ಸೇರಿದಾಗ ಪರೀಕ್ಷೆ ಇರುವ ಕಾರಣದಿಂದ ವಿದ್ಯಾರ್ಥಿ ನಿಲಯದಅಧಿಕಾರಿಗಳು ಮಾಲೀಕರೊಂದಿಗೆ ಚರ್ಚಿಸಿ ಮೇ 31ರವರೆಗೂ ನಿಲಯದಲ್ಲಿ ಇರಲು ಅನುಮತಿ ಪಡೆದಿದ್ದರು. ಇದಕ್ಕೆ ಮಾಲೀಕರು ಸಹ ಒಪ್ಪಿಗೆ ಸೂಚಿಸಿದ್ದರು.
ಈಗ ಏಕಾಏಕಿ ಸ್ಥಳಾಂತರಿಸಲು ಕಾರಣವೇನು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು. ವೃತ್ತಿಪರ ವಸತಿ ನಿಲಯದಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ತರಾತುರಿಯಲ್ಲಿ ಕಡಿತಗೊಳಿಸಿ ಏಕಾಏಕಿ ನಿಲಯವನ್ನು ಆದರ್ಶ-1 ವಿದ್ಯಾರ್ಥಿ ನಿಲಯಕ್ಕೆ ವರ್ಗಾಯಿಸಲಾಗಿದೆ ಎಂದು ದೂರಿದ ವಿದ್ಯಾರ್ಥಿಗಳು, ಮೇ 31ರವರೆಗೆ ವಾರ್ಷಿಕ ಪರೀಕ್ಷೆಗಳಿದ್ದು, ಅವು ಮುಗಿಯುವ ತನಕ ನಿಲಯದಲ್ಲಿರಲು ವ್ಯವಸ್ಥೆ ಮಾಡಬೇಕು.
ಇದೀಗ ಆದರ್ಶ-1ರ ನಿಲಯಕ್ಕೆ ವರ್ಗಾಯಿಸಿದ ವೃತ್ತಿಪರ ವಸತಿ ನಿಲಯದ 100 ವಿದ್ಯಾರ್ಥಿಗಳಿಗೆ ಸುಮಾರು 18-20 ಪ್ರತ್ಯೇಕ ಕೊಠಡಿ ಕೊಡಬೇಕು. ಆದರ್ಶ ನಿಲಯದ ವಿದ್ಯಾರ್ಥಿಗಳು ನಮ್ಮ ನಿಲಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿದ್ದು, ಅಧಿಕಾರಿಗಳು ತಕ್ಷಣ ಅಂತಹ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾರದಾ ಕೋಲ್ಕರ್ ಮನವಿ: ವೃತ್ತಿಪರ ವಸತಿ ನಿಲಯದ ಬೋರವೆಲ್ ದುರಸ್ತಿಯಲ್ಲಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮುಖ್ಯವಾಗಿ ಆ ಕಟ್ಟಡ ತೆರವುಗೊಳಿಸಲು ನ್ಯಾಯಾಂಗದ ಆದೇಶವಿದೆ. ತಿಂಗಳ ಮಟ್ಟಿಗೆ ಆದರ್ಶ-1ರ ನಿಲಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ.
ಪರೀಕ್ಷೆ ಮುಗಿದು ವಾಪಸ್ ಬಂದ ನಂತರ ಹೊಸ ಕಟ್ಟಡದ ವ್ಯವಸ್ಥೆ ಮಾಡಲಾಗುತ್ತದೆ. ಉಪಾಹಾರ ಬಿಟ್ಟು ಪ್ರತಿಭಟಿಸುವ ಅಗತ್ಯವಿಲ್ಲ. ತಯಾರಿಸಿದ ಆಹಾರ ಹಾಳು ಮಾಡುವುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಶಾರದಾ ಕೋಲ್ಕಾರ್ ತಿಳಿಸಿದರು.
ಆದರ್ಶ ನಿಲಯದಲ್ಲಿ ವೃತ್ತಿಪರ ನಿಲಯದ ವಿದ್ಯಾರ್ಥಿಗಳಿಗೆ 18-20 ಕೊಠಡಿ ನೀಡಿದರೆ ಮಾತ್ರ ವಸತಿ ಉಳಿಯುವುದಾಗಿ ತಿಳಿಸಿದಾಗ ಸಮ್ಮತಿ ಸೂಚಿಸಿದ ಅಧಿಕಾರಿ ಕೋಲ್ಕಾರ್, ಆದರ್ಶ ನಿಲಯದ ವಾರ್ಡ್‌ನ ಮೇದಾರ ಅವರಿಗೆ 40 ಕೊಠಡಿಗಳ ಪೈಕಿ 18 ಕೊಠಡಿ ವೃತ್ತಿಪರ ವಿದ್ಯಾರ್ಥಿಗಳಿಗೆ ನೀಡುವಂತೆ ಸೂಚನೆ ನೀಡಿದರು. ಎಲ್ಲ ವಿದ್ಯಾರ್ಥಿಗಳು ಆದರ್ಶ ನಿಲಯಕ್ಕೆ ವರ್ಗವಾಗುವಂತೆ ತಿಳಿಸಿದಾಗ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.