ಬೇಡಿಕೆ ಈಡೇರಿಸದಿದ್ದರೆ ಧರಣಿ ಎಚ್ಚರಿಕೆ
Team Udayavani, Jan 14, 2020, 10:57 AM IST
ಹುಬ್ಬಳ್ಳಿ: ರಾಜ್ಯ ಸರಕಾರವು ಕರ್ನಾಟಕ ರಾಜ್ಯ ಸರಕಾರಿ ದಿನಗೂಲಿ ನೌಕರರ ಮಹಾಮಂಡಲದ 22 ಬೇಡಿಕೆಗಳನ್ನು ಫೆ. 13ರೊಳಗೆ ಪರಿಹರಿಸದಿದ್ದರೆ ಮಾ. 11ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಂಡಲದ ಸದಸ್ಯರು ಎಚ್ಚರಿಸಿದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರು, ಕ್ಷೇಮಾಭಿವೃದ್ಧಿ ನೌಕರರು ಹಾಗೂ ದಿನಗೂಲಿಯಿಂದ ಕಾಯಂಗೊಂಡು ನಿವೃತ್ತರಾದ ನೌಕರರು ಧರಣಿ ನಡೆಸಿ ಹಕ್ಕೊತ್ತಾಯ ಮಂಡಿಸಿದರು. ಬೇಡಿಕೆಗಳನ್ನು ಮಂಡಲದ ಅಧ್ಯಕ್ಷ ಡಾ| ಕೆ.ಎಸ್. ಶರ್ಮಾ ಹಾಗೂ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪರಿಹರಿಸದಿದ್ದರೆ ರಾಜ್ಯದ ಮುಂಗಡ ಪತ್ರದ ಅಧಿವೇಶನದ ವೇಳೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ಕಿಮ್ಸ್ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸ ಬಳ್ಳಾರಿ, ಕಾರ್ಯದರ್ಶಿ ಭರತೇಶ ಆರ್.ಎಸ್., ಮಹೇಶ ಮನ್ನಿಕೇರಿ, ಕುಮಾರ ಭಂಡಾರಿ, ಮನು ದೇವರಪಾಟಿ, ಮಾರುತಿ ಬಳ್ಳಾರಿ, ಎಂ. ರಾಧಾಕೃಷ್ಣ, ಶ್ರೀನಿವಾಸ ಬೆಸ್ತ, ರಾಜೇಶ ಕತ್ರಿಮಲ್ , ಶಿವಾನಂದ ಪತ್ತಾರ, ನಾಗೇಶ ಸಾಲಿ, ಮಕು¤ಮಸಾಬ ನದಾಫ, ಪ್ರೇಮಾ ಹೊಸಮನಿ, ಗೀತಾ ಹರಿಜನ, ಸುಶೀಲಾ ಮಣ್ಣವಡ್ಡರ,ಬಿಬಿಆಶಾ ಟಾಕಿವಾಲೆ, ರೇಣುಕಾ ಧರ್ಮಾವರಂ, ನಾಗಮ್ಮ ಒಂಟಿಮನಿ, ವಿಜಯಲಕ್ಷ್ಮೀ ಪತಂಗೆ, ಈರಕ್ಕ ಚಿಂತಾಮಣಿ, ಮಹಾದೇವಿ ಚೌಗುಲೆ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.