![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Mar 18, 2020, 10:34 AM IST
ಧಾರವಾಡ: ಎರಡೂವರೆ ತಿಂಗಳೊಳಗೆ 14 ಜನರಲ್ಲಿ ಡೆಂಘೀ ದೃಢವಾಗಿದ್ದರೆ ಚಿಕೂನ್‌ಗುನ್ಯಾ ರೋಗ ಐವರಲ್ಲಿ ಖಚಿತವಾಗಿದೆ. ಇದರ ಜೊತೆಗೆ ಮಲೇರಿಯಾ ರೋಗ ಮೂವರಲ್ಲಿ ಕಂಡು ಬಂದಿದ್ದರೆ ಮಿದುಳು ಜ್ವರ ಖಚಿತವಾಗಿಲ್ಲ.
ಡೆಂಘೀ ಆತಂಕ: 2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿದೆ. ಸದ್ಯ ಈ ವರ್ಷದ ಮಾಚ್ 1ರಿಂದ 17ರೊಳಗೆ ಸಂಶಯ ಮೇರೆಗೆ 49 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 5 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಇನ್ನೂ ಈ ವರ್ಷದ ಜನೇವರಿಯಿಂದ ಮಾ. 17ರ ವರೆಗೆ 109 ಜನರ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಈ ಪೈಕಿ 106 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 14 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಈ ಪೈಕಿ ಕಲಘಟಗಿಯಲ್ಲಿ 1, ಕುಂದಗೋಳದಲ್ಲಿ 2, ನವಲಗುಂದದಲ್ಲಿ 2, ಧಾರವಾಡದ ಶಹರದಲ್ಲಿ 1 ಹಾಗೂ ಹುಬ್ಬಳ್ಳಿಯ ಶಹರದಲ್ಲಿ 8 ಜನರಲ್ಲಿ ಡೆಂಘೀ ಖಚಿತವಾಗಿದೆ.
ಚಿಕೂನ್‌ಗುನ್ಯಾ ಗುನ್ನ: 2015ರಲ್ಲಿ 17, 2016ರಲ್ಲಿ 6, 2017ರಲ್ಲಿ 11, 2018ರಲ್ಲಿ 85, 2019 ರಲ್ಲಿ 121 ಜನರಲ್ಲಿ ಚಿಕೂನ್‌ಗುನ್ಯಾ ಕಾಣಿಸಿಕೊಂಡು ತೊಂದರೆ ಉಂಟು ಮಾಡಿತ್ತು. ಈ ವರ್ಷ ಕಳೆದ ಎರಡೂವರೆ ತಿಂಗಳಲ್ಲಿ 34 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಪೈಕಿ ಐವರಲ್ಲಿ ರೋಗ ದೃಢಪಟ್ಟಿದೆ. ಧಾರವಾಡ ಗ್ರಾಮೀಣದಲ್ಲಿ 2, ಕಲಘಟಗಿ, ಕುಂದಗೋಳ, ನವಲಗುಂದಲ್ಲಿ ತಲಾ ಒಬ್ಬರಲ್ಲಿ ರೋಗ ದೃಢಪಟ್ಟಿರುವುದು ಗ್ರಾಮೀಣದಲ್ಲಿ ಆತಂಕ ಮನೆ ಮಾಡಿದೆ.
ಮಲಗಿದ ಮಲೇರಿಯಾ: 2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25, 2019ರಲ್ಲಿ 17 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ ರೋಗವು 2020 ರ ಎರಡೂವರೆ ತಿಂಗಳಲ್ಲಿ 3 ಜನರಲ್ಲಿ ದೃಢಪಟ್ಟಿದೆ. ಜಿಲ್ಲೆಯ ನವಲಗುಂದ ತಾಲೂಕಿನಲ್ಲಿಯೇ 3 ಜನರಿಗೆ ಇದು ಬಂದಿದೆ. ವರ್ಷದಿಂದ ವರ್ಷಕ್ಕೆ ಇದರ ಪ್ರಭಾವ ಕಡಿಮೆ ಆಗುತ್ತಲಿದೆ. ಇದರ ಜೊತೆಗೆ ಮೆದುಳು ಜ್ವರವು 2016, 2017, 2019ರಲ್ಲಿ ಕಂಡು ಬಂದಿಲ್ಲ. ಆದರೆ 2018ರಲ್ಲಿ ಈ ಜ್ವರಕ್ಕೆ ಜಿಲ್ಲೆಯಲ್ಲಿ ಓರ್ವ ಮೃತಪಟ್ಟಿದ್ದ. ಆದರೆ ಈ ವರ್ಷ ಮೆದುಳು ಜ್ವರದ ಲಕ್ಷಣಗಳು ಕಂಡು ಬಂದ ಮೂವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಮೆದುಳು ಜ್ವರ ಇಲ್ಲದಿರುವುದು ದೃಢಪಟ್ಟಿದೆ.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
You seem to have an Ad Blocker on.
To continue reading, please turn it off or whitelist Udayavani.