ಹನ್ನೆರಡು ಮಠದ ಅಭಿವೃದ್ಧಿಗೆ ಬದ್ಧ
Team Udayavani, Dec 13, 2020, 12:53 PM IST
ಕಲಘಟಗಿ: ಹನ್ನೆರಡುಮಠದ ಸರ್ವಾಂಗೀಣ ಅಭಿವೃದ್ಧಿಗೆ ತಾವು ಕಟಿಬದ್ಧರಿರುವುದಾಗಿ ಶಾಸಕಸಿ.ಎಂ.ನಿಂಬಣ್ಣವರ ಘೋಷಿಸಿದರು. ಲಿಂ. ಶ್ರೀ ಮಡಿವಾಳ ಶಿವಾಚಾರ್ಯ ಸ್ವಾಮಿಗಳವರ 30ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿಪಟ್ಟಣದ ಹೊರ ವಲಯದಲ್ಲಿರುವ ಹನ್ನೆರಡು ಮಠದಲ್ಲಿ ಶನಿವಾರ ಜರುಗಿದ ಜನಜಾಗೃತಿ ಧರ್ಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರಳ ಸಾತ್ವಿಕತೆಗೆ ಹೆಸರಾದ ಲಿಂ| ಶ್ರೀ ಮಡಿವಾಳ ಶ್ರೀಗಳವರ ಪೂಜಾಶಕ್ತಿ, ಧಾರ್ಮಿಕ ಶ್ರದ್ಧೆ, ಭಕ್ತರ ಮೇಲಿಟ್ಟಿರುವ ಪ್ರೀತಿ-ವಾತ್ಸಲ್ಯ ಮರೆಯಲಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರತತ್ವ ಸಿದ್ಧಾಂತಗಳನ್ನು ಭಕ್ತ ಸಂಕುಲಕ್ಕೆ ಬೋಧಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಬಾಳಿ ಬದುಕಿದ ಈ ಪುಣ್ಯಕ್ಷೇತ್ರದ ಅಭಿವೃದ್ಧಿ ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಈಗಾಗಲೇ ಇಲ್ಲಿನ ಕಲ್ಯಾಣ ಮಂಟಪದ ಅಭಿವೃದ್ಧಿಗೆ 1ಲಕ್ಷ ರೂ.ಗಳ ಅನುದಾನ ಒದಗಿಸಲಾಗಿದ್ದು, ನೂತನವಾಗಿ ನಿರ್ಮಿಸಲಿರುವ ಹನ್ನೆರಡುಮಠ ಸಭಾಭವನಕ್ಕೆ 2 ಕೋಟಿ ರೂ.ಗಳ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಇಷ್ಟರಲ್ಲೇ ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ,ಶ್ರೀಗಳವರು ಅಗಲಿದರೂ ಅವರ ಶಕ್ತಿ ಇಂದಿಗೂ ನಮ್ಮೆಲ್ಲರನ್ನು ಕಾಪಾಡುತ್ತಿದೆಎಂದರು. ಅಖೀಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದಮುಕ್ತಿಮಂದಿರ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.
ಸುಳ್ಳ ಶಿವಸಿದ್ಧರಾಮೇಶ್ವರ ಶ್ರೀಗಳು, ಬ್ಯಾಹಟ್ಟಿ ಮರುಳಸಿದ್ಧ ಶ್ರೀಗಳು, ಬಂಕಾಪುರದ ರೇವಣಸಿದ್ಧ ಶ್ರೀಗಳು,ಹಣ್ಣಿಕೇರಿ ರೇವಣಸಿದ್ಧ ಶ್ರೀಗಳು, ದೇವಿಕೊಪ್ಪ ರಾಮಲಿಂಗೇಶ್ವರ ಶ್ರೀಗಳು, ಹನ್ನೆರಡುಮಠದ ಮರಿಸ್ವಾಮಿಗಳಾದ ನಾಗರಾಜ ದೇವರು ನುಡಿನಮನ ಸಲ್ಲಿಸಿದರು.
ಶ್ರೀಮಠದಲ್ಲಿ ಬೆಳಿಗ್ಗೆ ಅಯ್ನಾಚಾರ ಮತ್ತು ಲಿಂಗದೀಕ್ಷೆ ನೀಡಲಾಯಿತು. ಶ್ರೀ ವೀರಭದ್ರೇಶ್ವರ ಮಹಾಮಂಗಲ ಮೂರ್ತಿಗೆ ವೀರಗಾಸೆ ತಂಡದವರಿಂದ ಗುಗ್ಗಳ ಜನಮನಸೂರೆಗೊಂಡಿತು. ಜಾನಪದ ವಿದ್ವಾಂಸ ಮಲ್ಲಯ್ಯಸ್ವಾಮಿ ತೋಟಗಂಟಿ ಸಂಗಡಿಗರು ಹಾಗೂ ಬೇಗೂರ, ಆಲದಕಟ್ಟಿ ಕಲಾವಿದರಿಂದ ಸಂಗೀತ ಸುಧೆ ಹರಿದು ಬಂತು. ವಿ.ಎಸ್ .ನಾಗಲೋತಿಮಠ ನಿರೂಪಿಸಿದರು.
ನಂತರ ಅನ್ನಪೂರ್ಣಾ ತರಬೇತಿ ಸಂಸ್ಥೆ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.