ಧಾರವಾಡ: ನವದುರ್ಗೆಯರ ಆರಾಧನೆಗೆ ಭಕ್ತ ಗಣ ಸಜ್ಜು
ಈ ವರ್ಷ ಒಂದೇ ಜಂಬೂಸವಾರಿ ಉತ್ಸವ: ಹುಣಸಿಮರದ
Team Udayavani, Sep 25, 2022, 3:28 PM IST
ಧಾರವಾಡ: ಪ್ರತಿವರ್ಷ ಪ್ರತ್ಯೇಕ ದಿನಗಳಲ್ಲಿ ಎರಡು ಜಂಬೂ ಸವಾರಿ ಉತ್ಸವ ನಡೆಯುತ್ತಿತ್ತು. ಈಗ ಎರಡು ಬಣ ಒಗ್ಗೂಡಿ ಒಂದೇ ಉತ್ಸವ ಮಾಡಲು ಅಣಿಯಾಗಿವೆ ಎಂದು ಧಾರವಾಡ ದಸರಾ ಜಂಬೂಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 4ರಂದು ಜಂಬೂ ಸವಾರಿ ನಡೆಯಲಿದ್ದು, ಅಂದು ಮಧ್ಯಾಹ್ನ 2:30 ಗಂಟೆಗೆ ಗಾಂಧಿನಗರದ ಬಂಡೆಮ್ಮ ದೇವಸ್ಥಾನದಿಂದ ಆರಂಭಗೊಳ್ಳಲಿದೆ. ಮಸಲಗಾರ ಓಣಿ, ಮಾರುತಿ ದೇವಸ್ಥಾನ, ರಾಯರಮಠ, ರಾಮ ಮಂದಿರ, ಹೊಸಯಲ್ಲಾಪುರ, ಗಾಂಧಿಚೌಕ್ ಮಾರ್ಗವಾಗಿ ಕಲಾಭವನದಲ್ಲಿ ಸಂಪನ್ನಗೊಳ್ಳಲಿದೆ.
ಐದು ಆನೆ, ಕುದುರೆಗಳು, ಕಲಾತಂಡ, ದಸರಾ ಬೊಂಬೆ ಕುಣಿತ, ಕರಡಿ ಮಜಲು, ಜಗ್ಗಲಿಗೆ ಮೇಳ ಸೇರಿ 25 ಸ್ಥಳೀಯ, 10 ಹೊರಜಿಲ್ಲೆ ಒಟ್ಟು 35 ಕಲಾತಂಡಗಳು ಮೆರಗು ತುಂಬಲಿವೆ. ಅ.5ರಂದು ರಾತ್ರಿ 9:30 ಗಂಟೆಗೆ ದೇವಿಮೂರ್ತಿ ವಿಸರ್ಜನೆ ಜರುಗಲಿದೆ ಎಂದರು.
26ರಿಂದ 5ರವರೆಗೆ ವಿವಿಧ ಕಾರ್ಯಕ್ರಮ: ದಸರಾ ಪ್ರಯುಕ್ತ ಸೆ.26ರಿಂದ ಅ. 5ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 26ರಂದು ಸಂಜೆ 6:30 ಗಂಟೆಗೆ ವಿದ್ಯಾಗಿರಿ ಗಣೇಶ ದೇವಸ್ಥಾನದಿಂದ ತರುವ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ, ಮಂಜುಳಾ ಮುಂಜಿ ಮೂರ್ತಿ ಸೇವೆ ನೀಡಲಿದ್ದು, ನಂತರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸೆ.27ರಿಂದ ಸೆ. 29ರವರೆಗೆ ನಿತ್ಯ ಬೆಳಗ್ಗೆ 8 ಗಂಟೆಗೆ ದೇವಿಮೂರ್ತಿಗೆ ಭಕ್ತರಿಂದ ವಿಶೇಷ ಪೂಜೆ, ಸಂಜೆ 4 ಗಂಟೆಗೆ ವಿವಿಧ ಭಜನಾ ಮಂಡಳ ಸದಸ್ಯರಿಂದ ಭಜನೆ, ದೇವಿಯ ಪುರಾಣ ಪಠಣದ ನಂತರ ಪ್ರಸಾದ ವಿತರಣೆ ನಡೆಯಲಿದೆ.
ಸೆ.30ರಂದು ಬೆಳಗ್ಗೆ 8 ಗಂಟೆಗೆ ಭಕ್ತರಿಂದ ಪೂಜೆ, ಬೆಳಗ್ಗೆ 9 ಗಂಟೆಗೆ ಉತ್ಸವ ಸಮಿತಿ ಸದಸ್ಯರು ಹಾಗೂ ಗಾಂಧಿನಗರ ಯುವಜನ ಸಂಘದಿಂದ ದುರ್ಗಾ ಹೋಮ ನಡೆಯಲಿದೆ. ಸಂಜೆ 4 ಗಂಟೆಗೆ ಸಾಯಿ ಲಲಿತ ಭಜನಾ ಮಂಡಳಿಯಿಂದ ಕುಂಕುಮಾರ್ಚನೆ ಜರುಗಲಿದೆ ಎಂದು ತಿಳಿಸಿದರು.
ಸೆ.30ರಂದು ಯುವ ಜನೋತ್ಸವ-ಮಕ್ಕಳ ವಿವಿಧ ಸ್ಪರ್ಧೆಗೆ ಕವಿಸಂನಲ್ಲಿ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಾಗುತ್ತದೆ. ಅ.1ರಂದು ಸಂಗೀತ, ಹಾಸ್ಯ, ನೃತ್ಯ ನಡೆಯಲಿದೆ. ಬಾಡಿ ಬಿಲ್ಡರ್ಸ್ ಅಸೋಸಿಯೇಶನ್, ದಸರಾ ಉತ್ಸವ ಸಮಿತಿ ಸಹಯೋಗದಲ್ಲಿ ಅ.2ರ ಸಂಜೆ 4 ಗಂಟೆಗೆ “ದೇಹದಾರ್ಡ್ಯ ಸ್ಪರ್ಧೆ: ದಸರಾಶ್ರೀ-2020′ ನಡೆಯಲಿದೆ. ವಿಜೇತರಿಗೆ ಪ್ರಥಮ 7,500 ರೂ., ದ್ವಿತೀಯ 3,000 ರೂ. ಬಹುಮಾನ-ಟ್ರೋಫಿ ನೀಡಲಾಗುತ್ತದೆ.
ಇನ್ನು ಯುವಜನೋತ್ಸವ-ಮಕ್ಕಳ ಸ್ಪರ್ಧೆಗೆ ಭಾಗವಹಿಸಲು ಮೊ:7411131983 ಮತ್ತು 8050421364, ಮಹಿಳಾ ಸ್ಪರ್ಧೆಗೆ ಪಾಲ್ಗೊಳ್ಳಲು ಮೊ:9449049380 ಮತ್ತು 9448861500, ದೇಹದಾರ್ಡ್ಯ ಸ್ಪರ್ಧೆಗೆ ಭಾಗವಹಿಸುವವರು ಮೊ:9141028473ಕ್ಕೆ ಸಂಪರ್ಕಿಸಬಹುದು ಎಂದರು.
ಅ.1 ರಿಂದ 3ರವರೆಗೆ ಲಿಂಗಾಯತ ಭವನದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಅ.1 ರಂಗೋಲಿ ಮತ್ತು ಅಡುಗೆ ಸ್ಪರ್ಧೆ, ಅ.2 ನಾಡಗೀತೆ ಸಮೂಹ ಗಾಯನ ಮತ್ತು ದೇವಿ ನೃತ್ಯ ಸ್ಪರ್ಧೆ, ಅ.3ರಂದು ಫ್ಯಾಷನ್ ಶೋ, ಕಿರು ಆಟೋಟà ಸ್ಪರ್ಧೆ ಜರುಗಲಿದೆ. ಪ್ರತಿದಿನ ಸಂಜೆ 7 ಗಂಟೆಗೆ ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಜನಪದ ಗೀತೆ, ಕರೋಕೆ, ಪದ್ಮಶ್ರೀ ಪಂ| ವೆಂಕಟೇಶಕುಮಾರ ಸಂಗೀತೋತ್ಸವ, ಝೀ ಕನ್ನಡ ಕಾಮಿಡಿ ಕಿಲಾಡಿಗಳ ಹಾಸ್ಯೋತ್ಸವ, ನೃತ್ಯ, ವಿವಿಧ ಕಾರ್ಯಕ್ರಮಗಳು ದಸರಾ ಉತ್ಸವಕ್ಕೆ ಮೆರಗು ತುಂಬಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುಗೌಡ ಪಾಟೀಲ, ನಾರಾಯಣ ಕೋರ್ಪಡೆ, ವಿಲಾಸ ತಿಬೇಲಿ, ಯಶವಂತರಾವ್, ಭೀಮಣ್ಣ ಮಲ್ಲಿಗವಾಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.