ಜೀವನದಲ್ಲಿ ಯಶಸ್ವಿಗಿಂತ ಆತ್ಮತೃಪ್ತಿ ಮುಖ್ಯ
ಬದುಕಿನಲ್ಲಿ ರೋಗಿಗಳನ್ನು ದೇವರೆಂದು ಆರೈಕೆ ಮಾಡಿ
Team Udayavani, Feb 3, 2021, 3:12 PM IST
ಧಾರವಾಡ: ಜೀವನದಲ್ಲಿ ಯಶಸ್ಸಿಗಿಂತ ಹೆಚ್ಚಾಗಿ ಆತ್ಮತೃಪ್ತಿಯೇ ಮುಖ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿಯ ಸತ್ತೂರಿನ ಡಾ.|ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ ಡಿಎಂ ವೈದ್ಯಕೀಯ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆಯ 12ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಆನ್‌ಲೈನ್ ಮೂಲಕ ಮಾತನಾಡಿದ ಅವರು, ಪ್ರತಿಯೊಬ್ಬರೂ ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಯಾಂತ್ರಿಕವಾಗಿ ಯಶಸ್ಸು ಅಳೆಯುತ್ತಾರೆ. ಆದರೆ ಆತ್ಮತೃಪ್ತಿ ನಮ್ಮ ಆತ್ಮ, ಹೃದಯ ಅಳೆಯುವುದರಿಂದ ಅದು ನೀಡುವ ಸುಖವೇ ಪರಮಸುಖ ಆಗಿದೆ ಎಂದರು.
ಕೋವಿಡ್ ಕಾಲಘಟ್ಟದಲ್ಲಿ ತಮ್ಮ ವೈಯಕ್ತಿಕ ಸುಖ ಹಾಗೂ ಸುರಕ್ಷತೆಯನ್ನು ಬದಿಗೊತ್ತಿ ರೋಗಿಗಳ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯೇ ಯೋಧರು. ಈಗ ಪದವಿ ಪಡೆದ ಯುವ ವೈದ್ಯರು ತಮ್ಮ ಬದುಕಿನಲ್ಲಿ ರೋಗಿಗಳನ್ನು ದೇವರೆಂದು ಆರೈಕೆ ಮಾಡುವುದರ ಜತೆಗೆ ಸದಾ ಅಧ್ಯಯನ ಶೀಲರಾಗಬೇಕು ಎಂದರು.
ಕಳೆದ ವರ್ಷ ಕೊರೊನಾ ಬಹಳಷ್ಟು ಕಾಡಿದ್ದು, ಈ ವೇಳೆ ಅತ್ಯಾಧುನಿಕ ತಂತ್ರಜ್ಞಾನದಿಂದ ದೊಡ್ಡಮಟ್ಟದ ಜೀವಹಾನಿ ತಡೆಯಲಾಗಿದೆ. ಇದರ ಹೊರತಾಗಿಯೂ ಬಹಳ ಜನ ಈ ಸೋಂಕಿಗೆ ಬಲಿಯಾಗಿದ್ದು, ಈ ಕೋವಿಡ್‌ನಿಂದ ವೈದ್ಯರ ಸೇವೆ ಎಷ್ಟು ಮುಖ್ಯವಾಗಿದೆ ಎಂಬುದು ಜನರಿಗೆ ಅರಿವಾಗಿದೆ. ಹೀಗಾಗಿ ಈ ಸೇವೆಗೆ ಸೇರುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದರು.
ಎಸ್‌ಡಿಎಮ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ನಿರಂಜನ್‌ಕುಮಾರ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗವು ಮಾನವರ ಮೇಲೆ ಸಾಕಷ್ಟು ಸಕಾರಾತ್ಮಕ ಪ್ರಭಾವ ಬೀರಿದೆ. ಇದಕ್ಕೆ ಪೂರಕವಾಗಿ ಮಾಲಿನ್ಯ ಕಡಿಮೆ ಆಗಿದೆ, ಕುಟುಂಬದಲ್ಲಿನ ಪ್ರೀತಿ
ಮತ್ತು ವಿಶ್ವಾಸ ಹೆಚ್ಚಿಸಿದೆ ಎಂದರಲ್ಲದೇ ವೈದ್ಯರು ಯಾವಾಗಲೂ ರೋಗಿಗಳಿಗೆ ಲಭ್ಯವಿರಬೇಕು. ಕರ್ತವ್ಯ ನಿರ್ವಹಿಸಲು ಸಾಮರ್ಥಯ ಹೊಂದಿರಬೇಕು ಎಂದರು.
ಅತೀ ಹೆಚ್ಚು ಚಿನ್ನದ ಪದಕ ಪಡೆದು ಚಿನ್ನದ ಹುಡುಗನಾಗಿ ಹೊರಹೊಮ್ಮಿದ ಡಾ|ರಾಘವೇಂದ್ರ ಪಿ. ದೇಸಾಯಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಕೋವಿಡ್ ಸೋಂಕು ಹಾಗೂ ಅದು ಆವರಿಸಿದ ಪರಿ ನಾವು ಹಿಂದೆ ಎಂದಿಗೂ ಕಂಡಿಲ್ಲ. ಆದರೆ ಭವಿಷ್ಯದಲ್ಲಿ ಇದು ಮರುಕಳಿಸಬಹುದು. ಅದಕ್ಕಾಗಿ ನಾವೆಲ್ಲರೂ ಸಿದ್ಧರಾಗಿರಬೇಕು ಎಂದರು. ಉಪ ಕುಲಪತಿ ಡಾ| ನಿರಂಜನಕುಮಾರ, ಪದ್ಮಲತಾ ನಿರಂಜನಕುಮಾರ, ಎಸ್ ಡಿಎಂ ಸಿಇಟಿ ಕಾರ್ಯದರ್ಶಿ ಡಾ|ಜೀವಂಧರಕುಮಾರ, ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ|ರತ್ನಮಾಲಾ ದೇಸಾಯಿ, ಡಾ| ಕಿರಣ ಹೆಗಡೆ, ಪ್ರೊ|ಸಿ.ಎಂ. ಶೆಟ್ಟರ ಉಪಸ್ಥಿತರಿದ್ದರು.
ಓದಿ : ಸ್ವಗ್ರಾಮದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಚಾಮರಾಜನಗರ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.