ಗುರುವಿನ ಮಹತ್ವ ತಿಳಿದು ನಡೆಯಲು ಸಲಹೆ
Team Udayavani, Nov 29, 2018, 5:31 PM IST
ಧಾರವಾಡ: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆ ವತಿಯಿಂದ ಡಾ| ಆರ್ .ಬಾಲಸುಬ್ರಮಣ್ಯಂ ಅವರ ರಚನೆಯ ‘ವಾಯ್ಸ ಪ್ರಾಮ್ ದಿ ಗ್ರಾಸರೂಟ್ಸ್’ ಪುಸ್ತಕ ಬಿಡುಗಡೆ ಸಮಾರಂಭ ನಗರದ ರಂಗಾಯಣದ ಸಾಂಸ್ಕೃತಿಕ ಸಭಾಭವನದಲ್ಲಿ ಬುಧವಾರ ಸಂಜೆ ಜರುಗಿತು.
ಪುಸ್ತಕ ಬಿಡುಗಡೆ ಮಾಡಿದ ನಿವೃತ್ತ ಜಂಟಿ ಲೇಬರ್ ಕಮೀಷನರ್ ಎಸ್.ಜಿ.ದೇಶಪಾಂಡೆ ಮಾತನಾಡಿ, ಹುಟ್ಟಿನಿಂದ ಕೊನೆಯವರೆಗೂ ಗುರುವಿನ ಮಹತ್ವವನ್ನು ತಿಳಿದು ನಡೆಯಬೇಕು. ದೇವರಿಲ್ಲದೆ ಬದುಕಬಹುದು. ಆದರೆ ಗುರು ರಕ್ಷೆ ಇಲ್ಲದೇ ಜೀವನ ನಡೆಸುವುದು ಕಷ್ಟ. ಅದರಲ್ಲೂ ನಾವು ಏನೇ ಸಾಧನೆ ಮಾಡಿದರೂ ಅದಕ್ಕೆ ತಕ್ಕ ಪ್ರಾಮಾಣಿಕತೆಯ ವ್ಯಕ್ತಿತ್ವ ಇರಬೇಕು. ಅಂದಾಗ ಮಾತ್ರ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಿದೆ ಎಂದರು.
ಪುಸ್ತಕ ಕುರಿತು ಮಾತನಾಡಿದ ಪ್ರಾಧ್ಯಾಪಕ ಮಂಜುನಾಥ ಹೀರೆಮಠ ಮಾತನಾಡಿ, ಪುಸ್ತಕ ಮೌನದ ಧ್ವನಿಯ ಬಗ್ಗೆ ಹೇಳುತ್ತದೆ. ಸರಗೂರು, ಬ್ರಹ್ಮಗಿರಿ ಸೇರಿದಂತೆ ಅಲ್ಲಿನ ಆದಿವಾಸಿ ವಾಸಿಸುವ ಜನಾಂಗ, ಗಿರಿ ಜನರು, ಕಾಡು ಕುರುಬ, ಜೇನು ಕುರುಬರು, ಹೇಗೆ ಇರುತ್ತಾರೆ. ಜೊತೆಗೆ ಅವರ ಬದುಕು ಪುಸ್ತಕದಲ್ಲಿ ಇದೆ ಎಂದರು.
ಪುಸ್ತಕದ ರಚನೆಕಾರ ಡಾ| ಆರ್.ಬಾಲಸುಬ್ರಣ್ಯಂ ಮಾತನಾಡಿ, ಇಂದಿನ ರಾಜಕೀಯ ವ್ಯವಸ್ಥೆ ಹಾಗೂ ನಾಯಕರಿಂದ ಸಾಧಾರಣ ವ್ಯಕ್ತಿಗಳ ಧ್ವನಿನೇ ಇಲ್ಲದಂತಾಗಿದ್ದು, ಅವರ ಧ್ವನಿ ಕೂಡ ಮೌನವಾಗಿದೆ. ಹೀಗಾಗಿ ಇಂತಹ ಧ್ವನಿಗಳ ಕುರಿತು ನೈಜವಾಗಿ ಹಾಗೂ ಅನುಭವದೊಂದಿಗೆ ಈ ಪುಸ್ತಕ ಬರೆದಿರುವೆ ಎಂದರು.
ಅಭಿವೃದ್ಧಿ ಯಾರ ಸ್ವತ್ತಲ್ಲ, ಎಲ್ಲರೂ ಸೇರಿ ಸಹಕಾರದಿಂದ ಮಾಡಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಸರಕಾರವೇ ಮಾಡಬೇಕು ಎಂಬುದಾಗಿ ಯಾರೂ ಕುಳಿತುಕೊಳ್ಳಬಾರದು. ಇನ್ನೂ ಧಾರವಾಡದ ಜಿಲ್ಲೆಯ ಕೆಲವರು ಬಿಆರ್‌ಟಿಸಿ ಯೋಜನೆಯೇ ಒಂದೇ ಅಭಿವೃದ್ಧಿ ಎಂಬಂತೆ ಹೇಳಿಕೊಳ್ಳುತ್ತಾರೆ. ಆದರೆ ಆ ಯೋಜನೆ ಮಾತ್ರ ಇನ್ನೂ ಸರಿಯಾಗಿ ಪೂರ್ಣಗೊಂಡಿಲ್ಲ. ಅದರ ಕುರಿತು ಜಿಲ್ಲೆಯ ಜನರು ಧ್ವನಿ ಎತ್ತಿಲ್ಲ, ಹೀಗಾಗಿ ಇದನ್ನೇ ಅವರು ದೊಡ್ಡ ಸಾಧನೆ ಎನ್ನುವಂತಾಗಿದೆ ಎಂದರು.
ಹಳ್ಳಿಯಲ್ಲಿ ಕುಳಿತು ಧ್ವನಿ ಎತ್ತಿದರೆ ದೆಹಲಿಗೆ ಕೇಳಿಸಬೇಕು. ಅಂದಾಗ ಅಭಿವೃದ್ಧಿ ಆಗುತ್ತದೆ. ಅದನ್ನು ಬಿಟ್ಟು ಇನ್ನೊಬ್ಬರ ಮೇಲೆ ದೂರುವುದು ಬೇಡ. ಅಲ್ಲದೇ ಸರಕಾರವನ್ನು ನಂಬಿ ಯಾವತ್ತು ಕುಳಿತುಕೊಳ್ಳಬಾರದು. ಪರಿಹಾರ ನಮ್ಮಿಂದ ಆಗಬೇಕೇ ಹೊರತು ಇನ್ನೊಬ್ಬರಿಂದ ಪರಿಹಾರ ನಿರೀಕ್ಷೆ ಮಾಡಬಾರದು ಎಂದರು. ಕಾನೂನು ವಿದ್ಯಾಲಯದ ಪ್ರಾಧ್ಯಾಪಕ ಸಿ.ಎಸ್ ಪಾಟೀಲ ಮಾತನಾಡಿದರು. ಕೆ.ಎಸ್.ಜಯಂತ ಸ್ವಾಗತಿಸಿದರು. ಶ್ರೀರಕ್ಷಾ ಮತ್ತು ಶ್ರೀನಿಧಿ ಪ್ರಾರ್ಥಿಸಿದರು.
ಅಭಿವೃದ್ಧಿ ವಿಷಯದಲ್ಲಿ ಇನ್ನೊಬ್ಬರನ್ನು ನಾವು ಯಾಕೇ ದೂರಬೇಕು? ಎಂಬುದನ್ನು ಬಿಟ್ಟು ಸಮಸ್ಯೆ ಕುರಿತು ನಾವು ಮೊದಲು ಧ್ವನಿ ಎತ್ತಬೇಕೇ ಹೊರತು ಮೌನವಾಗಿ ಇರುವುದಲ್ಲ. ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುವುದಷ್ಟೆ ಅಭಿವೃದ್ಧಿಯಲ್ಲ.
. ಡಾ| ಆರ್.ಬಾಲಸುಬ್ರಣ್ಯಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.