ಬಿಆರ್ ಟಿಎಸ್ ಕಾರಿಡಾರಲ್ಲಿ ಚಿಗರಿ ಓಕೆ, ಸರ್ಕಾರಿ-ಬೇರೆ ಗಾಡಿ ಏಕೆ ?
Team Udayavani, Dec 22, 2018, 5:04 PM IST
ಹುಬ್ಬಳ್ಳಿ: ಬಿಆರ್‌ಟಿಎಸ್ ಪ್ರತ್ಯೇಕ ಕಾರಿಡಾರ್ ಚಿಗರಿ ಬಸ್ ಗಳ ಸಂಚಾರಕ್ಕೆ ಮಾತ್ರ ಎಂಬ ಅರಿವು ಸಾಮಾನ್ಯ ಜನರಿಗೆ ಮೂಡಿದೆ. ಆದರೆ, ಕೆಲ ಸರಕಾರಿ ಅಧಿಕಾರಿಗಳು ಮಾತ್ರ ಮನೆ ಹಾಗೂ ಕಚೇರಿಗೆ ಓಡಾಡುವುದಕ್ಕಾಗಿರುವ ಕಾರಿಡಾರ್ ಎಂದು ತಿಳಿದುಕೊಂಡಂತಿದ್ದು, ಇತರೆ ವಾಹನಗಳ ಬೇಕಾಬಿಟ್ಟಿ ಸಂಚಾರಕ್ಕೆ ಬಿಆರ್‌ಟಿಎಸ್ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ.
ಬಿಆರ್‌ಟಿಎಸ್ ಪ್ರತ್ಯೇಕ ಕಾರಿಡಾರ್‌ನಲ್ಲಿ ಚಿಗರಿ ಬಸ್ ಗಳನ್ನು ಹೊರತುಪಡಿಸಿ, ತುರ್ತು ಸೇವೆಗಳಾದ ಅಂಬ್ಯುಲೆನ್ಸ್, ಅಗ್ನಿಶಾಮಕ ವಾಹನ ಹಾಗೂ ವಿಶೇಷ ಸಂದರ್ಭದಲ್ಲಿ ಪೊಲೀಸ್ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ವಾಹನಗಳು ಈ ಕಾರಿಡಾರ್‌ನಲ್ಲಿ ಓಡಾಡುವಂತಿಲ್ಲ. ಆದರೆ ಹಲವು ಜನಪ್ರತಿನಿಧಿಗಳು, ಸರ್ಕಾರಿ ಇಲಾಖೆ ವಾಹನಗಳು ಹಾಗೂ ಸರಕಾರಿ ಸೇವೆಯಲ್ಲಿರುವ ಖಾಸಗಿ ವಾಹನಗಳು ಪ್ರತ್ಯೇಕ ಕಾರಿಡಾರ್‌ನಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿವೆ.
ಬೆಳಗ್ಗೆ -ಸಂಜೆ ಬೇಕಾಬಿಟ್ಟಿ
ಸರಕಾರಿ ನಾಮಫಲಕ ಹೊಂದಿರುವ ಕಾರುಗಳು ಬೆಳಗ್ಗೆ ಹಾಗೂ ಸಂಜೆ ವೇಳೆ ಎಗ್ಗಿಲ್ಲದೆ ಸಂಚಾರ ಮಾಡುತ್ತಿವೆ. ಹು-ಧಾ ನಡುವೆ ಓಡಾಡುವ ಅಧಿಕಾರಿಗಳು ತಮ್ಮ ಮನೆಯಿಂದ ಕಚೇರಿಗೆ ಸಂಚರಿಸಲು ‘ಪ್ರತ್ಯೇಕ ಕಾರಿಡಾರ್’ ಎಂಬಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರತ್ಯೇಕ ಕಾರಿಡಾರ್ ವ್ಯವಸ್ಥೆಯನ್ನು ಸಾರ್ವಜನಿಕರು ಪಾಲನೆ ಮಾಡುತ್ತಿದ್ದರೂ ಸರಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಇದು ತಮಗೆ ಅನ್ವಯಿಸುವುದಿಲ್ಲ ಎಂಬಂತೆ ಓಡಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕಾರಿನ ಗಾಜಿನ ಮೇಲೆ ಕಾಗದದಲ್ಲಿ ಬರೆದ ಒಂದು ಫಲಕ ಇದ್ದರೆ ಸಾಕು, ಪ್ರತ್ಯೇಕ ಕಾರಿಡಾರ್‌ನಲ್ಲಿ ಯಾವುದೇ ಅಳುಕಿಲ್ಲದೆ ಸಂಚರಿಸಬಹುದಾಗಿದೆ.
ಚಾಲಕರಿಗೆ ತಲೆನೋವು
ಕೆಲವೊಂದು ನಿಲ್ದಾಣಗಳಲ್ಲಿ ಬಸ್‌ಗಳ ಸಂಚಾರಕ್ಕೂ ಸರಕಾರಿ ವಾಹನಗಳು ಸಮಸ್ಯೆಯುಂಟು ಮಾಡುತ್ತಿವೆ. ನಗರ ವ್ಯಾಪ್ತಿಯಲ್ಲಿ ಕಿರಿದಾದ ರಸ್ತೆಯಿರುವುದರಿಂದ ಬಸ್ ಗಳು ಸರಾಗವಾಗಿ ಸಂಚರಿಸುವುದು ಕಷ್ಟ. ಇಂತಹದರಲ್ಲಿ ಕಾರುಗಳು ಸಂಚರಿಸುತ್ತಿರುವುದರಿಂದ ನಮ್ಮ ಬಸ್‌ಗಳು ಓಡಾಡುವುದಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಕೆಲವೆಡೆ ಬೈಕ್‌ಗಳು ಅಡ್ಡಾದಿಡ್ಡಿಯಾಗಿ ಕಾರಿಡಾರ್‌ನಲ್ಲಿ ಸಂಚಾರ ಮಾಡುತ್ತಿದ್ದು, ಬಿಆರ್‌ಟಿಎಸ್ ಅಧಿಕಾರಿಗಳು ಅವುಗಳಿಗೆ ಕಡಿವಾಣ ಹಾಕಬೇಕಾಗಿದೆ ಎನ್ನುತ್ತಾರೆ ಬಸ್ ಚಾಲಕರು.
ಎಚ್ಚೆತ್ತುಕೊಳ್ಳುತ್ತೀರಾ?
ಈಗಾಗಲೇ ಸುಮಾರು 55 ಚಿಗರಿ ಬಸ್‌ಗಳು ರಸ್ತೆಗಿಳಿದಿದ್ದು, ಇನ್ನೊಂದೆರಡು ದಿನಗಳಲ್ಲಿ ಮತ್ತೆ 15 ಬಸ್ಸುಗಳು ಸೇರಿಕೊಳ್ಳಲಿವೆ. ಕಾರಿಡಾರ್‌ನಲ್ಲಿ ಓಡಾಡುವ ಬಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. 100 ಸಂಖ್ಯೆಯ ವೇಗದೂತ ಬಸ್ ಗಳು ತ್ವರಿತ ಸಾರಿಗೆ ಸೇವೆ ನೀಡುವ ನಿಟ್ಟಿನಲ್ಲಿ ಇತರೆ ಬಸ್‌ಗಳಿಗಿಂತ ಒಂದಿಷ್ಟು ವೇಗವಾಗಿ ಸಂಚರಿಸುತ್ತಿವೆ. ಇನ್ನೂ ನಗರ ಪ್ರದೇಶಗಳಲ್ಲಿ ಒಂದು ಭಾಗದ ರಸ್ತೆ ಕಿರಿದಾಗಿರುವ ಕಾರಣಕ್ಕೆ ಎದುರು ದಿಕ್ಕನಲ್ಲಿ ಯಾವುದೇ ಬಸ್ ಗಳು ಇರದಿದ್ದರೆ ತಪ್ಪು ಮಾರ್ಗದಲ್ಲಿ ವೇಗವಾಗಿ ಸಂಚರಿಸುತ್ತವೆ. ಹೀಗಾಗಿ ಪ್ರತ್ಯೇಕ ಕಾರಿಡಾರ್ ನಲ್ಲಿ ಸರಕಾರಿ ವಾಹನಗಳಿಗೆ ಬೇಕಾಬಿಟ್ಟಿಯಾಗಿ ಸಂಚರಿಸಲು ಅವಕಾಶ ನೀಡಿರುವುದು ಸರಿಯಲ್ಲ. ಮುಂದೆ ದೊಡ್ಡ ಅವಘಡ ಸಂಭವಿಸುವ ಮೊದಲು ಬಿಆರ್‌ಟಿಎಸ್ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
ಮಿಕ್ಸ್ ಟ್ರಾಫಿಕ್ ಲೈನ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಬಾರದು ಎನ್ನುವ ಕಾರಣಕ್ಕೆ ಕೆಲವೊಂದು ಕಡೆ ಪ್ರತ್ಯೇಕ ಕಾರಿಡಾರ್‌ನಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಪ್ರತ್ಯೇಕ ಕಾರಿಡಾರ್ ನೋಟಿಫಿಕೇಷನ್ ಆದ ನಂತರ ತುರ್ತು ಸೇವೆ ವಾಹನಗಳನ್ನು ಹೊರತುಪಡಿಸಿ ಇತರೆ ಯಾವುದೇ ವಾಹನಗಳಿಗೆ ಅವಕಾಶ ನೀಡುವುದಿಲ್ಲ.
ಬಸವರಾಜ ಕೇರಿ, ಡಿಜಿಎಂ, ಬಿಆರ್‌ಟಿಎಸ್
ಆರಂಭದಲ್ಲಿ ಯಾವುದೇ ವಾಹನಗಳಿಗೂ ಅವಕಾಶ ನೀಡುತ್ತಿರಲಿಲ್ಲ. ನಮ್ಮ ಮೇಲಿನ ಅಧಿಕಾರಿಗಳು ಸರಕಾರಿ ವಾಹನಗಳನ್ನು ಬಿಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಸರಕಾರಿ ಕಾರುಗಳಿಗೆ ಮಾತ್ರ ಅವಕಾಶ ನೀಡಿದ್ದೇವೆ. ಉಳಿದಂತೆ ಇತರೆ ಯಾವುದೇ ವಾಹನಗಳನ್ನು ಬಿಡುವುದಿಲ್ಲ. ಸ್ಥಳೀಯರು ಬೇಕಾಬಿಟ್ಟಿಯಾಗಿ ಕಾರಿಡಾರ್‌ನಲ್ಲಿ ಬೈಕ್‌ಗಳನ್ನು ಓಡಿಸುತ್ತಿದ್ದು, ಬಿಡದಿದ್ದರೆ ಬೆದರಿಕೆ ಹಾಕುತ್ತಿದ್ದಾರೆ.
ಹೆಸರು ಹೇಳಲಿಚ್ಛಿಸದ ಭದ್ರತಾ ಸಿಬ್ಬಂದಿ
ನಿಯಮಗಳನ್ನು ಪಾಲನೆ ಮಾಡಬೇಕಾದ ಸರಕಾರಿ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಸಂಚರಿಸುತ್ತಿರುವುದನ್ನು ನಿತ್ಯವೂ ನೋಡುತ್ತಿದ್ದೇವೆ. ಹು-ಧಾ ನಡುವೆ ಕಚೇರಿ ಹಾಗೂ ಮನೆಗಳಿಗೆ ಓಡಾಡುವುದಕ್ಕೆ ಮಾಡಿಸಿದಂತಾಗಿದೆ. ಅಧಿಕಾರಿಗಳು ಇಂತಹ ನಿಯಮ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು.
ಮಹಾಂತೇಶ ಸಣ್ಣಕ್ಕನವರ, ವಿದ್ಯಾನಗರ
ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.