ಜಾನಪದ ಸೊಗಡಿನ ಸಂಕ್ರಾಂತಿ


Team Udayavani, Jan 14, 2019, 11:15 AM IST

14-january-21.jpg

ಧಾರವಾಡ: ಆಧುನಿಕತೆ ಭರಾಟೆಯಲ್ಲಿ ದೇಸಿ ಹಬ್ಬಗಳ ಸಂಪ್ರದಾಯ, ಆಚರಣೆಗಳು ಮರೆಯಾಗುತ್ತಿರುವ ದಿನಮಾನದಲ್ಲಿ ಹಬ್ಬಗಳ ಆಚರಣೆಯ ಮಹತ್ವ ಬಿಚ್ಚಿಡುವ ವಿಶಿಷ್ಟ ಕಾರ್ಯಕ್ರಮ ನಗರದ ರಂಗಾಯಣದ ಆವರಣದಲ್ಲಿ ರವಿವಾರ ಜರುಗಿತು.ಜಾನಪದ ಕಲಾವಿದ ದಂಪತಿ ಬಸಲಿಂಗಯ್ಯ ಹಿರೇಮಠ ಹಾಗೂ ವಿಶ್ವೇಶ್ವರಿ ಹಿರೇಮಠ ಅವರ ಜಾನಪದ ಸಂಶೋಧನ ಕೇಂದ್ರದಿಂದ ರಂಗಾಯಣದಲ್ಲಿ ನಡೆದ ಸಂಕ್ರಮಣ ಹಬ್ಬ ಕಳೆ ಕಟ್ಟುವಂತೆ ಮಾಡಿತ್ತು.

ಸಂಕ್ರಮಣ ಹಬ್ಬವೆಂದರೆ ಅಡುಗೆ ಮಾಡಿ ಊಟ ಮಾಡುವುದಲ್ಲ. ಪರಸ್ಪರ ಪ್ರೀತಿ ಹಂಚಿಕೆ, ಸಂಬಂಧ ಗಟ್ಟಿಗೊಳಿಸುವಿಕೆ ಸೇರಿದಂತೆ ಜೀವನದೊಂದಿಗೆ ಹೊಂದಿಕೊಂಡಿರುವ ಹಬ್ಬಗಳ ಮಹತ್ವವೇನು ಎಂಬುದನ್ನು ಈ ಕಾರ್ಯಕ್ರಮ ಮನವರಿಕೆ ಮಾಡಿಕೊಟ್ಟಿತು. ಜಾನಪದ ಸಂಶೋಧನ ಕೇಂದ್ರ ಹಾಗೂ ಅಕ್ಕನ ಬಳಗದಿಂದ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮಹಿಳಾಮಣಿಗಳು ಗಮನ ಸೆಳೆದರು.

ಸಂಕ್ರಾಂತಿ ಅಡುಗೆ-ಉಡುಗೆ: ಸಾಂಪ್ರದಾಯಿಕ ಉಡುಗೆಗೆ ಹಬ್ಬದ ಅಡುಗೆ ಇನ್ನಷ್ಟು ಇಂಬು ನೀಡಿತು. ಸಜ್ಜಿ ರೊಟ್ಟಿ, ಬದನೆಕಾಯಿ ಪಲ್ಲೆ, ಶೇಂಗಾ ಚಟ್ನಿ, ಮಾದಲಿ, ಶೇಂಗಾ ಹೋಳಿಗೆ, ಚಿತ್ರಾನ್ನ ಸೇರಿದಂತೆ ನಾನಾ ಬಗೆಗೆ ಹಬ್ಬದೂಟ ನೀರೂರಿಸಿತು.

ಇದಕ್ಕೂ ಮುಂಚೆ ಬಸಲಿಂಗಯ್ಯ ಹಿರೇಮಠ ನೇತೃತ್ವದಲ್ಲಿ ಹಬ್ಬದ ಸೊಬಗು ಬಿಚ್ಚಿಡುವ ಜಾನಪದ ಹಾಡುಗಳು, ಕವಿಗಳ ಹಾಡುಗಳನ್ನು ಮಹಿಳೆಯರು ಹಾಡಿ ನಲಿದರು. ಹಬ್ಬದ ಆಚರಣೆ ಕುರಿತಂತೆ ಮಹಿಳೆಯರು ತಮ್ಮ ಅನುಭವ ಹಂಚಿಕೊಂಡರು. ಬೆಳಗ್ಗೆ ಆರಂಭವಾದ ಈ ವಿಶಿಷ್ಟ ಹಬ್ಬದ ಆಚರಣೆಯು ಸಂಜೆವರೆಗೂ ಸಾಗಿತು.

ಹೆಂಡ್ತಿ ಮರ್ತಿ: ಸಂಕ್ರಾಂತಿ ಹಬ್ಬವು ಹರುಷವ ತರಲೆಕ್ಕ, ವರ್ಷದ ಗಂಜಿ ನಮಗಕ್ಕ.. ಮಾದ್ಲಿ ಹಬ್ಬ ಬಂದೈತಿ, ಬರ್ತಾ ತಿಂದು ಹೆಂಡ್ತಿ ಮರ್ತಿ..! ಅಂತಹ ಹಲವು ಹಾಡುಗಳನ್ನು ಬಸವಲಿಂಗಯ್ಯ ಹಿರೇಮಠ ಅದ್ಭುತವಾಗಿ ಪ್ರಸ್ತುತಪಡಿಸಿದರು. ಇಳಕಲ್‌ ಸೀರೆ ತೊಟ್ಟು, ಬೋರಮಾಳ ಸರಾ, ಪಾಟಲಿ, ಬಿಲ್ವಾರ, ಲಾಲಿ, ಮೋಹನ ಮಾಳಿ, ಅವಲಕ್ಕಿ ಸರಾ ಸೇರಿದಂತೆ ಆಭರಣ ತೊಟ್ಟು ಗ್ರಾಮೀಣ ಸೊಬಗನ್ನು ಸೃಷ್ಟಿಸಿದ್ದ ಜಾನಪದ ಸಂಸ್ಥೆಯ ಸದಸ್ಯರು ಬಸವಲಿಂಗಯ್ಯ ಹಿರೇಮಠ ಅವರೊಂದಿಗೆ ಸಂಕ್ರಮಣದ ಜಾನಪದ ಹಾಡುಗಳಿಗೆ ಸಾಥ್‌ ನೀಡಿದರು.

ಈ ಬಾರಿ ವಿಶೇಷ ಅತಿಥಿಗಳಾಗಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಹೇಮಾ ಪಟ್ಟಣಶೆಟ್ಟಿ ಆಗಮಿಸಿದ್ದರು. ಬಸಲಿಂಗಯ್ಯನ ಹಾಡು ಕೇಳಿದ್ರ, ಹುಕ್ಕೇರಿ ಬಾಳಪ್ಪನ್ನ ನೋಡಿದಂಗ್‌ ಆಕೈತಿ. ಬಾಳಪ್ಪನೊಂದಿಗೆ ಗೀತೇಶ್ವರಿ ಇದ್ದರ, ಇವರೊಂದಿಗೆ ವಿಶ್ವೇಶ್ವರಿ ಇದ್ದಾರ. ಧಾರವಾಡದೊಳಗ ಇಂತಹ ಅದ್ಭುತ ಗಾಯಕ ಇದ್ದಿರುವುದು ನಾವೆಲ್ಲಾ ಸಂಭ್ರಮ ಪಡಬೇಕು ಎಂದು ಗ್ರಾಮೀಣ ಭಾಷೆಯಲ್ಲಿಯೇಹೇಳುತ್ತ ಸಂಕ್ರಮಣದ ಹಬ್ಬಕ್ಕೆ ಪಟ್ಟಣಶೆಟ್ಟಿ ಅವರು ಚಾಲನೆ ನೀಡಿದರು.

ಒಬ್ಬರಿಗೊಬ್ಬರು ಎಳ್ಳು-ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಷಯಗಳನ್ನು ಹೇಳಿದರು. ಲೀಲಾವತಿ ಕಳಸಪ್ಪನವರ, ಪ್ರಭಾ ನೀಲರಗಿ, ಕೈರುನ್ನಿಸಾ, ಜಯಶ್ರೀ ಗೌಳಿಯವರ, ಕಲಾವತಿ ಹೂಗಾರ, ಶೋಭಾ ದೇಶಪಾಂಡೆ, ಆಶಾ ಸೈಯದ, ಭಾರತಿ ಪರ್ವತೀಕರ, ಸುಜಾತಾ ಹಡಗಲಿ, ಸರಸ್ವತಿ ಭೋಸಲೆ, ಇಂದಿರಾ ಜಾತಿಕರ್ತ, ನೀಲಾ ಶಿಗ್ಲಿ, ಪ್ರಭಾ ಶಹಾಪುರ, ಮುಕ್ತಾ ಸೌದಿ, ಗೌರಮ್ಮ ನ್ಯಾಮತಿ, ಮಹಾಲಕ್ಷ್ಮೀ ಪೂಜಾರ, ಗಿರಿಜಾ ಚಿಕ್ಕಮಠ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಾದ ಸಾವಿತ್ರಿ ಕಡಿ, ಮಂಜುಳಾ, ಕವಿತಾ ಇನ್ನಿತರರಿದ್ದರು.

ರಂಗಾಯಣದ ಬಯಲಿನಲ್ಲಿ ಸಂಕ್ರಮಣ
ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ನೇತೃತ್ವದ ಜಾನಪದ ಸಂಶೋಧನಾ ಕೇಂದ್ರವು ಪ್ರತಿ ವರ್ಷ ಸಂಕ್ರಮಣ ಹಬ್ಬದ ಆಚರಣೆಯ ಮಹತ್ವವನ್ನು ಹಾಡು ಹಾಗೂ ನೃತ್ಯಗಳ ಮೂಲಕ ಅದ್ಭುತವಾಗಿ ಕಟ್ಟಿಕೊಡುತ್ತಿದೆ. ಕಳೆದ ಎರಡು ವರ್ಷಗಳ ಕಾಲ ಬೇಂದ್ರೆ ಅಜ್ಜನ ಬಾರೋ ಸಾಧನಕೇರಿ ಉದ್ಯಾನವನದಲ್ಲಿ ಅರ್ಥಪೂರ್ಣವಾಗಿ ಆಚರಣೆಯಾಗಿದ್ದ ಸಂಕ್ರಮಣ, ಕಳೆದ ವರ್ಷ ಜೆಎಸ್ಸೆಸ್‌ ಕಾಲೇಜು ಹಿಂಬದಿಯ ಮೈಲಾರಲಿಂಗ ಗುಡ್ಡದ ಮೇಲೆ ಯಶಸ್ವಿಯಾಗಿತ್ತು. ಇದೀಗ ರಂಗಾಯಣದ ಬಯಲಿನಲ್ಲಿ ನಡೆದ ಸಂಕ್ರಮಣ ಮತ್ತಷ್ಟು ಅರ್ಥಪೂರ್ಣವಾಗಿತ್ತು.

ದೀಪಾವಳಿ, ಯುಗಾದಿ, ಸಂಕ್ರಮಣದಂತಹ ಪ್ರಮುಖ ಹಬ್ಬಗಳೇ ಇಂದಿನ ದಿನಗಳಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಯಾವ ಹಬ್ಬದಲ್ಲಿ ಏನು ಆಚರಣೆ ಮಾಡಬೇಕೆಂದು ಈಗಿನವರಿಗೆ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಾನಪದ ಸಂಶೋಧನಾ ಸಂಸ್ಥೆಯು ಪ್ರತಿ ವರ್ಷ ಸಂಕ್ರಮಣ ಹಬ್ಬದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಎಲ್ಲರೂ ಕೂಡಿ ಸಂಕ್ರಮಣ ಆಚರಿಸುತ್ತೇವೆ. ಊಟವನ್ನು ಕೂಡಿಯೇ ಮಾಡುತ್ತೇವೆ.
 • ವಿಶ್ವೇಶ್ವರಿ ಹಿರೇಮಠ,
 ಜಾನಪದ ಕಲಾವಿದೆ

ಟಾಪ್ ನ್ಯೂಸ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.