Dharwad: ಇಂದಿನಿಂದ 23 ಅಸಂಘಟಿತ ವಲಯಕ್ಕೆ ಅಪಘಾತ ಪರಿಹಾರ ಸೌಲಭ್ಯ : ಸಚಿವ ಲಾಡ್
Team Udayavani, Aug 15, 2024, 3:49 PM IST
ಧಾರವಾಡ: ಅಂಬೇಡ್ಕರ ಸಹಾಯ ಹಸ್ತ ಯೋಜನೆಯಡಿ 23 ಅಸಂಘಟಿತ ವಲಯಗಳ ಕಾರ್ಮಿಕರಿಗೆ ಆ. 15 ರಿಂದ ಅಪಘಾತ ಪರಿಹಾರ ಹಾಗೂ ಸಹಜ ಮರಣ ಪರಿಹಾರ ಸೌಲಭ್ಯ ಕಲ್ಪಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ 23 ಅಸಂಘಟಿತ ವಲಯಗಳ ಕಾರ್ಮಿಕರನ್ನು ಕಡೆಗಣಿಸಲಾಗಿತ್ತು. ರಾಜ್ಯ ಸರಕಾರ ಕಾರ್ಮಿಕರ ಜೀವನ ಭದ್ರತೆಗೆ ಹೊಸ ಯೋಜನೆ ಜಾರಿಗೊಳಿಸಿದೆ. ಕಾರ್ಮಿಕರು ಅಪಘಾತಕ್ಕೀಡಾಗಿ ಮೃತಪಟ್ಟರೆ 1 ಲಕ್ಷ ರೂ. ಆಸ್ಪತ್ರೆ ವೆಚ್ಚ 50,000, ಸಹಜ ಮರಣವಾದರೆ 10,000 ರೂ. ನೀಡಲು ನಿರ್ಧರಿಸಲಾಗಿದೆ. ಇವರಲ್ಲಿ ಹಮಾಲರು, ಚಿಂದಿ ಆಯುವವರು, ಮನೆಗೆಲಸದವರು, ಟೈಲರ್, ಮೆಕ್ಯಾನಿಕ್, ಅಗಸರು, ಕ್ಷೌರಿಕರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ಮಿಕರು ಸೇರಿದ್ದು, ಅರ್ಹ ಕಾರ್ಮಿಕರಿಗೆ ಸೆಕ್ಯೂರಿಟಿ ಕಾರ್ಡ ವಿತರಿಸಲಾಗುವುದು ಎಂದರು
ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ಬಿಜೆಪಿಯವರು ರಷ್ಯಾದಲ್ಲಿ ಸಿಲುಕಿರುವ ಅಮಾಯಕ ಭಾರತೀಯರ ರಕ್ಷಣೆ ಮಾಡುವಂತೆ ತಮ್ಮ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಬೇಕು.
-ಸಂತೋಷ ಲಾಡ್, ಕಾರ್ಮಿಕ ಸಚಿವ.
ಇದನ್ನೂ ಓದಿ: ULFA: ಸ್ವಾತಂತ್ರೋತ್ಸವಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಅಸ್ಸಾಂನ 19 ಕಡೆ ಬಾಂಬ್ ಇಟ್ಟ ಉಲ್ಫಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.