ದಲ್ಲಾಳಿ ಬದಲು ದಾನಿಗಳು ರೈತರಿಂದಲೇ ಖರೀದಿಸಲಿ..

ಲಕ್ಷ ಲಕ್ಷ ರೂ. ಖರ್ಚು ಮಾಡಿ ಬೆಳೆ ಬೆಳೆದ ರೈತನಿಗೆ ಅನುಕೂಲ  ದಾನ-ಸಹಾಯದ ರೂಪದಲ್ಲಿ ವಿತರಿಸುವವರು ರೈತರತ್ತ ಬರಲಿ

Team Udayavani, Apr 10, 2020, 11:36 AM IST

10-April-05

ಧಾರವಾಡ: ಕೊರೊನಾ ಲಾಕ್‌ ಡೌನ್‌ ಅಕ್ಷರಶಃ ಅನ್ನದಾತನನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮುಂಗಾರಿನಲ್ಲಿ ಅತಿವೃಷ್ಟಿಯ ಕಾಟದಿಂದ ಹೊರಬಂದು ಹಿಂಗಾರಿನಲ್ಲಿ ಹಣ್ಣು-ತರಕಾರಿ ಬೆಳೆದ ರೈತರಿಗೆ ಕೊರೊನಾ ಕಣ್ಣಿಗೆ ಕಾಣದಂತೆ ಬಂದು ಏಟು ಕೊಟ್ಟಾಗಿದೆ.

ಸದ್ಯಕ್ಕೆ ಅಕ್ಕಿ, ಗೋಧಿ, ಜೋಳ, ಕುಸುಬಿ, ಗೋವಿನ ಜೋಳವನ್ನು ರೈತರು ಕೊಂಚ ಕಾಯ್ದಿಟ್ಟುಕೊಂಡು ಮಾರಾಟ ಮಾಡಲು ಅವಕಾಶ ಇದೆ ಎನ್ನಬಹುದು. ಆದರೆ ಲಕ್ಷ ಲಕ್ಷ ಖರ್ಚು ಮಾಡಿ ಟನ್‌ ಲೆಕ್ಕದಲ್ಲಿ ಬೆಳೆದ ಹಣ್ಣು-ತರಕಾರಿ ಕೊಯ್ಯಲಾಗದೆ ಹೊಲದಲ್ಲಿಯೇ ಕೊಳೆಯುತ್ತಿದೆ. ಇನ್ನೊಂದೆಡೆ ಅದನ್ನು ಕೊಯ್ದು ತಂದರೂ ಮಾರಾಟ ಮಾಡುವುದು ಕಷ್ಟವಾಗುತ್ತಿದೆ. ಸರಿಯಾಗಿ ಬೇಸಿಗೆ ಸಂದರ್ಭಕ್ಕೆ ಫಸಲು ಬರುವಂತೆ ಬೆಳೆದ ಕಲ್ಲಂಗಡಿ, ಅನಾನಸ್‌, ಕರ್ಬೂಜಕ್ಕೆ ರೈತರು ಲಕ್ಷ ಲಕ್ಷ ಹಾಕಿದ ಖರ್ಚು ಮೈಮೇಲೆ ಬಂದಿದ್ದು, ಮಹಾಮಾರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇದಕ್ಕೇನು ಪರಿಹಾರ?: ಕೊರೊನಾದಿಂದ ರೈತರಿಗೆ ತೊಂದರೆಯಾಗಿರುವುದು ಗೊತ್ತಿರುವ ಸಂಗತಿ. ಹಾಗಿದ್ದರೆ ಇದಕ್ಕೇನು ಪರಿಹಾರವಿಲ್ಲವೇ? ಎನ್ನುವ ಪ್ರಶ್ನೆ ಕಾಡುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಮತ್ತು ರೈತಪರ ಕಾಳಜಿ ಇರುವ ಜನರು ಸದ್ಯಕ್ಕೆ ರೈತರ ಬೆನ್ನಿಗೆ ನಿಂತಿದ್ದು, ಕೆಲವೆಡೆ ರೈತರಿಂದ ಹಣ್ಣು ಮತ್ತು ತರಕಾರಿಗಳನ್ನು ಕೊಳ್ಳುವುದಕ್ಕೆ ನೇರವಾಗಿ ಮುಂದೆ ಬಂದಿದ್ದಾರೆ. ಇಂತಿಪ್ಪ ಜನರೇ ಇನ್ನೊಂದು ಹೆಜ್ಜೆ ಮುಂದಿಟ್ಟರೆ ಖಂಡಿತಾ ತರಕಾರಿ ಮತ್ತು ಹಣ್ಣು ಬೆಳೆದ ರೈತರನ್ನು ಈ ಸಂಕಷ್ಟದ ಸಂದರ್ಭದಿಂದ ಪಾರು ಮಾಡಬಹುದಾಗಿದೆ.

ರೈತರ ಮನವಿ ಏನು?: ಸದ್ಯಕ್ಕೆ ಲಾಕ್‌ ಡೌನ್‌ ಏಪ್ರಿಲ್‌ ಅಂತ್ಯದವರೆಗೂ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಈತನಕ ಹೇಗೋ ದಿನಗಳನ್ನು ತಳ್ಳಿಕೊಂಡು ಬಂದ ರೈತರಿಗೆ ಲಾಕ್‌ಡೌನ್‌ ಮುಂದುವರಿಯುವುದು ಗಾಯದ ಮೇಲೆ ಮತ್ತೂಂದು ಬರೆ ಎಳೆದಂತಾಗುವುದು ನಿಶ್ಚಿತ. ಯಾಕೆಂದರೆ ತರಕಾರಿ ಮತ್ತು ಹಣ್ಣುಗಳ ಫಲದ ಅವಧಿಯೇ ಹೆಚ್ಚೆಂದರೆ ಎರಡು ತಿಂಗಳು. ಈ ಅವಧಿಯಲ್ಲಿ ಈಗಾಗಲೇ ಅರ್ಧ ಸಮಯ ಹೋಗಿದ್ದು, ಹಾಕಿದ ಬೀಜ ಗೊಬ್ಬರದ ಖರ್ಚು ಕೂಡ ಹೊರ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಮೇ ಮೊದಲ ವಾರದವರೆಗೂ ಲಾಕ್‌ಡೌನ್‌ ಮುಂದುವರಿದರೆ ಹಿಂಗಾರಿಯಲ್ಲಿ ತರಕಾರಿ ಮತ್ತು ಹಣ್ಣು ಬೆಳೆದ ರೈತರು ನೂರಕ್ಕೆ ನೂರರಷ್ಟು ಹಾನಿಗೊಳಗಾದಂತೆಯೇ.

ಹೀಗಾಗಿ ಇದೀಗ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ತಮ್ಮ ಹಣ್ಣು ತರಕಾರಿ ಕೊಳ್ಳುವುದು ಕಷ್ಟವಾಗುತ್ತಿದೆ. ಆದರೆ ಸಂಘ-ಸಂಸ್ಥೆಗಳು ಮತ್ತು ದಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಳೆದ ಒಂದು ವಾರದಿಂದ ಜನರಿಗೆ ಧಾನ್ಯ ಮತ್ತು ಕಿರಾಣಿ ದಿನಸಿ ವಸ್ತುಗಳನ್ನು ದಾನ ಮತ್ತು ಸಹಾಯದ ರೂಪದಲ್ಲಿ ಹಂಚುತ್ತಿದ್ದಾರೆ. ಇವರೆಲ್ಲರೂ ಕೂಡ ನೇರವಾಗಿ ರೈತರಿಂದಲೇ ತರಕಾರಿ ಮತ್ತು ಹಣ್ಣುಗಳನ್ನು ಕೊಂಡುಕೊಂಡರೆ ರೈತರಿಗೆ ನಿಜಕ್ಕೂ ಉಪಕಾರ ಮಾಡಿದಂತೆ ಆಗುತ್ತದೆ ಅನ್ನುತ್ತಿದ್ದಾರೆ ಸಂಕಷ್ಟದಲ್ಲಿರುವ ರೈತರು.

ಧಾರವಾಡ ಹಿಂಗಾರಿ ನೀರಾವರಿ ಆಧಾರಿತವಾಗಿದೆ. ಇಲ್ಲಿನ ರೈತರು ಹಿಂಗಾರಿನಲ್ಲಿ ಹಣ್ಣು ಮತ್ತು ತರಕಾರಿಯನ್ನೇ ಪ್ರಧಾನ ಬೆಳೆಯನ್ನಾಗಿ ಮಾಡಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರೈತರು ಸಾಲದ ಸುಳಿಯಲ್ಲಿದ್ದು, ಬ್ಯಾಂಕಿನ ಕಂತುಗಳನ್ನು ಕಟ್ಟುವುದಕ್ಕೆ ತರಕಾರಿ ಬೆಳೆಯುತ್ತಾರೆ. ಲಾಕ್‌ಡೌನ್‌ ಇದಕ್ಕೆ ಅಡ್ಡಿಯಾಗಿದ್ದು, ಒಂದು ವೇಳೆ ದಾನಿಗಳು ನೇರವಾಗಿ ರೈತರಿಂದ ಹಣ್ಣು ಮತ್ತು ತರಕಾರಿ ಖರೀದಿಸಿದರೆ ರೈತರನ್ನು ಸಂಕಷ್ಟದಿಂದ ಮೇಲೆತ್ತಿದ್ದಂತೆ ಆಗುತ್ತದೆ. ಬರೀ ತರಕಾರಿ ಮಾತ್ರವಲ್ಲ ಹೂವು ಬೆಳೆದಿದ್ದ ರೈತರು ಕೂಡ ಕಷ್ಟದಲ್ಲಿ ಇದ್ದಾರೆ. ಮಲ್ಲಿಗೆ, ಸೇವಂತಿ, ಚೆಂಡು ಹೂ, ಗುಲಾಬಿ ಹೂ ಬೆಳೆದ ರೈತರು ಕೂಡ ಕೊರೊನಾ ಕಾಟಕ್ಕೆ ನಲುಗಿ ಹೋಗಿದ್ದಾರೆ.

ತಾವು ಬೆಳೆದ ಬೆಳೆಯಲ್ಲಿ ಸ್ವಲ್ಪ ಭಾಗ ದಾನ ಮಾಡುತ್ತಲೇ ಬಂದ ರೈತರು ಕೊರೊನಾ ಲಾಕ್‌ಡೌನ್‌ನಿಂದ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರಕಾರವೇ ಖುದ್ದಾಗಿ ರೈತರಿಂದ ಹಣ್ಣು-ತರಕಾರಿ ಖರೀದಿಸಿ ಮಾರಬೇಕು. ಜತೆಗೆ ಸಂಘ-ಸಂಸ್ಥೆಗಳು ರೈತರಿಂದ ನೇರ ಖರೀದಿಗೆ ಮುಂದಾಗಬೇಕು.
 ಶಂಕರಪ್ಪ ಅಂಬಲಿ,
ರೈತ ಮುಖಂಡರು

ಮುಂಗಾರಿನ ನೆರೆ ಹಾವಳಿ ರೈತರನ್ನು ಪೀಡಿಸಿತ್ತು. ಇದೀಗ ಹಿಂಗಾರಿ ಮತ್ತು ತರಕಾರಿ ಬೆಳೆಗೆ ಕೊರೊನಾ ಕಾಟ ಶುರುವಾಗಿದೆ. ಹೀಗಾಗಿ ದಾನಿಗಳು ನೇರವಾಗಿ ರೈತರಿಂದಲೇ ಹಣ್ಣು, ತರಕಾರಿ ಖರೀದಿಸಿದರೆ ರೈತರಿಗೆ ಅನುಕೂಲ ಆಗಲಿದೆ.
 ಕಲ್ಲನಗೌಡ ಪಾಟೀಲ,
ರೈತ ಮುಖಂಡ, ಬ್ಯಾಡ ಗ್ರಾಮಸ್ಥರು

ಕೊರೊನಾ ಸಂಕಷ್ಟದಲ್ಲಿರುವ ಬಡವರಿಗೆ ಹಂಚಲು ಇನ್ನೊಂದೆಡೆ ಸಂಕಷ್ಟಕ್ಕೆ ಸಿಲುಕಿರುವ ರೈತರಿಂದಲೇ ಎಲ್ಲರೂ ಹಣ್ಣು-ತರಕಾರಿ ಖರೀದಿಸುವುದು ಸೂಕ್ತ. ಇದರಿಂದ ಒಂದು ಉತ್ತಮ ಕೆಲಸ ಇಬ್ಬರ ಪ್ರಾಣ ಉಳಿಸಲಿದೆ.
 ಅಮೃತ ಇಜಾರಿ,
ಹೋರಾಟಗಾರ, ಹುಬ್ಬಳ್ಳಿ

ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.