ಧಾರವಾಡ: ಜೀವಕಳೆ ಕಳೆದುಕೊಳ್ಳುತ್ತಿದೆ ಕೆಲಗೇರಿ ಕೆರೆ
Team Udayavani, May 22, 2023, 2:35 PM IST
ಧಾರವಾಡ: ಹೈಟೆಕ್ ಸ್ಪರ್ಶ ಪಡೆದಿರುವ ಶತಮಾನ ಕಂಡ ಕೆಲಗೇರಿ ಕೆರೆಯ ಒಡಲಾಳದ ಸಂಕಟಕ್ಕೆ ಮಾತ್ರ ಮುಕ್ತಿ ಸಿಗದೇ ಜಲಕಳೆಯಿಂದ ಜೀವಕಳೆ ಕಳೆದುಕೊಳ್ಳುತ್ತಾ ಸಾಗಿದ್ದು, ಮೀನುಗಳು ಸಾವನ್ನಪ್ಪಿ ದಡ ಸೇರುತ್ತಿವೆ. ಹು-ಧಾ ಮಹಾನಗರ ಪಾಲಿಕೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಮಧ್ಯೆ ಇರುವ ಕೆರೆ ನಿರ್ವಹಣೆಯ ಗುದ್ದಾಟದಿಂದ ಕೆರೆಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದ್ದು, ಮೀನುಗಳ ಮರಣ ಮೃದಂಗ ಸಾಗಿದೆ.
ಕೆಲಗೇರಿ ಕೆರೆ ದಡದಲ್ಲಿ ಪುಟ್‌ಪಾತ್‌ದೊಂದಿಗೆ ಮಕ್ಕಳ ಆಟಿಕೆ, ವಾಯುವಿಹಾರಿಗಳ ವ್ಯಾಯಾಮಕ್ಕಾಗಿ ಜಿಮ್ ಮಾದರಿಯಲ್ಲಿ ಹೈಟೆಕ್ ಸ್ಪರ್ಶ ಪಡೆದಿತ್ತು. ಆದರೆ ಈಗ ಕೆರೆಯ ಒಡಲಾಳದ ಜಲಕಳೆಯೆಂಬ ಸಂಕಟ ಹಾಗೂ ಕೆರೆಗೆ ಚರಂಡಿ ನೀರು ಸೇರುತ್ತಿರುವುದರಿಂದ ಹೊರಗಡೆ ನೋಟಕ್ಕೆ ಹೈಟೆಕ್ ಸ್ಪರ್ಶ ಪಡೆದಿದ್ದರೂ ಒಳಗಡೆಯಿಂದ ಕೆರೆ ಗಬ್ಬೆದ್ದು ನಾರುವಂತಾಗಿದೆ. ಕೆರೆಯ ನೀರು ಕಲುಷಿತ ಆಗುತ್ತಿರುವುದು ಮೀನುಗಳ ಸಾವಿಗೆ ಕಾರಣವಾಗಿದೆ.
ಜಲಕಳೆಯ ಸಂಕಟ: ಕಳೆದ ಒಂದು ವಾರದಲ್ಲಿ ಚರಂಡಿ ನೀರು ಕೆರೆಗೆ ಅಧಿಕ ಪ್ರಮಾಣದಲ್ಲಿ ಸೇರಿರುವುದು ಮೀನುಗಳ ಸಾವಿಗೆ ಕಾರಣವಾದರೆ, ಚರಂಡಿ ನೀರು ಕೆರೆಗೆ ಸೇರುತ್ತಿರುವ ಕಾರಣದಿಂದ ಕೆರೆಯ ಜಲಕಳೆಯೆಂಬ ಸಂಕಟದಿಂದ ಮುಕ್ತಿ ಸಿಗದಂತಾಗಿದೆ. ಜನೇವರಿ ತಿಂಗಳಲ್ಲಿ ನಡೆದ ಯುವ ಜನೋತ್ಸವದ ಸಮಯದಲ್ಲಿ ಈ ಕೆರೆಯಲ್ಲಿಯೇ ಜಲಕ್ರೀಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ಬೇರೆ ರಾಜ್ಯಗಳಿಂದ ಬಂದಿದ್ದ ಯುವಪಡೆ ಜಲಕ್ರೀಡೆ ಆನಂದ ಪಡೆದರೂ ಕೆರೆಯ ಕಲುಷಿತ ನೀರು ಹಾಗೂ ಜಲಕಳೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಜಲಕಳೆಯಂತೂ ಅಧಿಕ ಪ್ರಮಾಣದಲ್ಲಿ ಕೆರೆಯನ್ನು ಆವರಿಸುತ್ತಲೇ ಸಾಗಿದ್ದು, ಇದು ಕೆರೆಯ ಜೀವಕಳೆಗೆ ಕಂಟಕಪ್ರಾಯವಾಗಿ ಹೊರಹೊಮ್ಮಿದೆ.
ಕೆರೆ ಸುಮಾರು 170 ಎಕರೆ ಜಾಗದಲ್ಲಿ ಹರಡಿಕೊಂಡಿದ್ದು, ಕೆಲ ವರ್ಷ ಹಿಂದಷ್ಟೇ ಮಹಾನಗರ ಪಾಲಿಕೆ ಕೆರೆ ದಂಡೆ ಸುತ್ತ ಒಂದಿಷ್ಟು ಅಭಿವೃದ್ಧಿ ಕಾರ್ಯ ನಡೆಸಿ ಬಾಹ್ಯ ಸೌಂದರ್ಯ ಹೆಚ್ಚಿಸಿದೆ. ಆದರೆ ಕೆರೆಗೆ ಮಲಿನ ನೀರು ಸೇರುವುದನ್ನು ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ವಿಪರ್ಯಾಸವಾಗಿದೆ. ಕೆರೆ ನಿರ್ವಹಣೆ ಜವಾಬ್ದಾರಿ ಹೊತ್ತ ಕೃಷಿ ವಿಶ್ವ ವಿದ್ಯಾಲಯ ಮಾತ್ರ ಈ ವಿಚಾರದಲ್ಲಿ ನಿರಾಸಕ್ತಿ ವಹಿಸಿದ್ದಲ್ಲದೆ, ಗಟಾರ ನೀರು ಸೇರುವುದನ್ನು ತಡೆಯುವ ಕೆಲಸ ನಮ್ಮದಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದೆ.
ಇಷ್ಟೆಲ್ಲ ಸಮಸ್ಯೆ ಇದ್ದರೂ, ಸಂಬಂಧಿಸಿದವರು ಮಾತ್ರ ಒಬ್ಬರ ಮೇಲೊಬ್ಬರು ಬೊಟ್ಟು ಮಾಡುತ್ತಲೇ ಕಾಲಹರಣ ಮಾಡುತ್ತಿರುವುದು ಅವರ ಪರಿಸರ ಕಾಳಜಿಗೆ ಸಾಕ್ಷಿ. ಇದನ್ನೆಲ್ಲ ಬಿಟ್ಟು ಕೂಡಲೇ ಶಾಶ್ವತ ಪರಿಹಾರಕ್ಕೆ ಮುಂದಾಗಲಿ ಎಂಬುದು ಜನರ ಆಗ್ರಹವಾಗಿದೆ.
ಕೆಲಗೇರಿ ಕೆರೆಗೆ ಹೈಟೆಕ್ ಸ್ಪರ್ಶ ಸಿಕ್ಕಿದ್ದು, ಅದು ಹೊರಗಡೆಯಿಂದ ಕಂಗೊಳಿಸುವಂತಾಗಿದೆ. ಕೆರೆಯ ಜಲಕಳೆಗೆ ಮುಕ್ತಿ ಸಿಗದ ಹೊರತು ಕೆರೆಯ ಅಭಿವೃದ್ಧಿ ಅಸಾಧ್ಯ. ಕೆರೆಗೆ ಹೊಲಸು ನೀರು ಸೇರಿ ಮೀನುಗಳ ಸಾವಿನ ಜತೆಗೆ ಜಲಕಳೆ ಬೆಳೆಯುತ್ತಿದೆ. ಸಂಬಂಧಿಸಿದವರು ಹೊಲಸು ನೀರು ಸೇರದಂತೆ ಶಾಶ್ವತ ಕಾಮಗಾರಿ ನಡೆಸುತ್ತಿಲ್ಲ. ಕೂಡಲೇ ಇದಕ್ಕೆ ಪರಿಹಾರ ನೀಡಬೇಕು.
ಮಂಜುನಾಥ ಹಿರೇಮಠ, ಪರಿಸರವಾದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.