ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ


Team Udayavani, Nov 5, 2024, 6:04 PM IST

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

ಉದಯವಾಣಿ ಸಮಾಚಾರ
ಧಾರವಾಡ: ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕೆಲಗೇರಿ ಕೆರೆಗೆ ತ್ಯಾಜ್ಯ, ಕೊಳಚೆ ನೀರು ಸೇರ್ಪಡೆಯಾಗಿ ಕಪ್ಪು ಬಣ್ಣಕ್ಕೆ ತಿರುಗಿ ದುರ್ನಾತ ಬೀರುತ್ತಿದೆ, ಪಾಚಿ ಬೆಳೆದು ಅವಸಾನದಂಚಿಗೆ ತಲುಪಿದೆ. ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ನಿರ್ಮಿಸಿರುವ ಅವಳಿ ನಗರದ ಈ ಅಪರೂಪದ ಕೆರೆ ಒಂದು ಕಾಲದಲ್ಲಿ ಕುಡಿಯುವ ನೀರಿನ ಜಲ ಮೂಲವಾಗಿತ್ತು.ಆದರೆ ಈಗ ದನಗಳೂ ನೀರು ಕುಡಿಯದಷ್ಟು ಕಲುಷಿತಗೊಂಡಿದೆ. ದಿವ್ಯನಿರ್ಲಕ್ಷ್ಯಕ್ಕೊಳಗಾಗಿ ತನ್ನ ಖದರ್‌ ಕಳೆದುಕೊಂಡಿದೆ.

ವಾರ್ಡ್‌ ನಂ.1ರ ವ್ಯಾಪ್ತಿಗೆ ಬರುವ ಕೆಲಗೇರಿ ಕೆರೆ ಸುಮಾರು 170 ಎಕರೆ ವಿಸ್ತೀರ್ಣದಲ್ಲಿದೆ. ಇದರ ನಿರ್ವಹಣೆ, ಉಸ್ತುವಾರಿ ಎಲ್ಲವೂ ಕೃಷಿ ವಿವಿಗೆ ಸೇರಿದೆ. ಆದರೆ ಅನುದಾನ ಕೊರತೆಯಿಂದ ಕೆರೆ ಸ್ವಚ್ಛತೆ, ನಿರ್ವಹಣೆ ಮಾಡದೆ ಹಾಗೆ ಬಿಟ್ಟಿದೆ. ಇತ್ತ ಪಾಲಿಕೆ ಕೂಡ ಅಷ್ಟಕ್ಕಷ್ಟೇ ಎಂಬಂತೆ ನಿರ್ಲಕ್ಷ್ಯ ವಹಿಸಿದೆ. ಗಂಡ-ಹೆಂಡಿರ ನಡುವೆ ಕೂಸು ಬಡವಾಯ್ತು ಎಂಬಂತೆ ಪಾಲಿಕೆ-ಕೃಷಿ ವಿವಿ ನಡುವೆ ಅಪರೂಪದ ಹಾಗೂ ಐತಿಹಾಸಿಕ ಕೆರೆ ಕೊಳಚೆಯಿಂದ ತುಂಬಿ ತುಳುಕುತ್ತಿದೆ.

ಸೊಳ್ಳೆಗಳ ಕಾಟ: 170 ಎಕರೆ ಕೆರೆಯಲ್ಲಿ ಮುಕ್ಕಾಲು ಭಾಗ ಹೂಳು ತುಂಬಿದೆ. ದಂಡೆಯ ಸುತ್ತಲೂ ಪಾಚಿ ಬೆಳೆದಿದೆ. ಕೆರೆ ಪಕ್ಕದಲ್ಲೇ ಕೆಲಗೇರಿ, ಸಂಪಿಗೆ ನಗರ ಬೇಂದ್ರೆ ನಗರ ಸೇರಿದಂತೆ ಇತ್ತೀಚೆಗೆ ನಿರ್ಮಾಣಗೊಂಡ ಲೇಔಟ್‌ಗಳಲ್ಲಿ ಲಕ್ಷಾಂತರ ಜನ ವಾಸಿಸುತ್ತಿದ್ದಾರೆ. ಕೆರೆಯ ಕೊಳಚೆ ನೀರಿನ ದುರ್ವಾಸನೆ ಜತೆಗೆ ಸೊಳ್ಳೆಗಳ ಕಾಟದಿಂದ ಜನರು ಬೇಸತ್ತು ಹೋಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.

ಜಲಮೂಲವೇ ಬಂದ್‌: ಒಂದು ಕಾಲದಲ್ಲಿ ಕೆರೆಗೆ ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿತ್ತು. ಕಾಲಕಳೆದಂತೆ ಲೇಔಟ್‌ಗಳು ತಲೆ ಎತ್ತಿದ್ದರಿಂದ ಕೆರೆಗೆ ಹರಿದು ಬರುತ್ತಿದ್ದ ನೀರಿನ ಮೂಲವೇ ಬಂದ್‌ ಆಗಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಯಥೇಚ್ಛವಾಗಿ ಸೇರುತ್ತಿದೆ. ಆಗಾಗ ಸಾಮಾಜಿಕ ಕಾರ್ಯಕರ್ತರು ಸ್ವಚ್ಛಗೊಳಿಸುವ ಯತ್ನ ಮಾಡಿದರೂ ಕಸ ಮಾತ್ರ ಕಮ್ಮಿಯಾಗಿಲ್ಲ.

ಆಗದ ಸದುಪಯೋಗ: ಅಮೃತ್‌ ಯೋಜನೆಯ ಹಸಿರು ವಲಯ ಪ್ರದೇಶ ಅಭಿವೃದ್ಧಿ ಅಡಿ ಸುಮಾರು 2.01 ಕೋಟಿ ರೂ. ವೆಚ್ಚದಲ್ಲಿ ಕೆರೆಯ ದಡದಲ್ಲಿ ಕೆಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. 30 ಅಡಿ ಅಗಲದ ವಾಕಿಂಗ್‌ ಪಾಥ್‌, 4 ಅಡಿಯಲ್ಲಿ ಕಟ್ಟೆ ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಸೀಸಾ ಡಬಲ್‌, ಆರ್ಚ್‌ ಸ್ವಿಂಗ್‌, ಟು ವೇ ಸ್ಲೈಡ್‌, ಡಕ್‌ ಮೆರಿಗೋ ರೌಂಡ್‌ ಆಟದ ಪರಿಕರ ಅಳವಡಿಸಲಾಗಿದೆ. ಓಪನ್‌ ಜಿಮ್‌ನಲ್ಲಿ ಕ್ರಾಸ್‌ ವಾಲ್ಕರ್‌, ಲೆಗ್‌ ‌ಪ್ರೆಸ್‌, ಸೈಕಲ್‌ , ಸಿಟೆಡ್‌ ಚೆಸ್ಟ್‌ ಪ್ರೆಸ್, ಥೈ ಚೈ ವ್ಹೀಲ್‌, ಲೆಗ್‌ ಆ್ಯಂಡ್‌ ಥೈ ಎಕ್ಸ್‌ರಸೈಜ್‌, ಪುಲ್‌ ಅಪ್‌ ಚೇರ್‌ ಸೇರಿದಂತೆ ಇತರೆ ಪರಿಕರಗಳನ್ನು 2 ಸೆಟ್‌ಗಳಂತೆ ಅಳವಡಿಸಲಾಗಿದೆ.ಆದರೆ ಉತ್ತಮ ವಾತಾವರಣ ಇಲ್ಲದೇ ಇವುಗಳ ಸದುಪಯೋಗ ಆಗುತ್ತಿಲ್ಲ.

ಪಕ್ಷಿ ಸಂಕುಲಕ್ಕೆ ಕುತ್ತು
ಒಂದು ಕಾಲದಲ್ಲಿ ಕೆಲಗೇರಿ ಕೆರೆ ದಡದಲ್ಲಿ ಹಕ್ಕಿಗಳ ಕಲರವ ಕೇಳುತ್ತಿತ್ತು. ದೂರದೂರಿನಿಂದ ಬಂದ ಹಕ್ಕಿಗಳು ಕೆಲ ಕಾಲ ಇಲ್ಲೇ ಇದ್ದು, ವಾಪಸ್‌ ಹೋಗುತ್ತಿದ್ದವು. ಇವು ಪಕ್ಷಿ ಪ್ರಿಯರಿಗೆ ರಂಜನೆ ಜತೆಗೆ ಅಧ್ಯಯನಕ್ಕೂ ಅನುಕೂಲ ಕಲ್ಪಿಸಿದ್ದವು. ದ.ರಾ.ಬೇಂದ್ರೆ ಸೇರಿ ಹಲವು ಕವಿಗಳ ಕವಿತೆಗಳಿಗೆ ಸ್ಫೂರ್ತಿದಾಯಕ ತಾಣವಾಗಿತ್ತು. ಆದರೆ ಈಗ ಪಕ್ಷಿಗಳೂ ಇಲ್ಲ, ಕವಿಗಳೂ ಇತ್ತ ಸುಳಿಯುತ್ತಿಲ್ಲ.

ನಾವು ಸಣ್ಣವರಿದ್ದಾಗ ಕೆರೆಯಲ್ಲಿ ನೀರು ಕುಡಿಯುತ್ತಿದ್ದೆವು. ಆದರೀಗ ನಗರದ ಸುತ್ತಮುತ್ತಲಿನ ಮನೆಗಳಿಂದ ಕಲುಷಿತ ನೀರು ಹರಿದು ಬಂದು ಕೆರೆ ಹಾಳು ಮಾಡಿದೆ. ಸೂಕ್ತ ನಿರ್ವಹಣೆ ಇಲ್ಲದಂತಾಗಿದೆ. ಹರಿದು ಬರುವ ತ್ಯಾಜ್ಯ ನೀರನ್ನು ಬೇರೆಡೆಗೆ
ಹೋಗುವಂತೆ ಮಾಡಿ ಕೆರೆ ಉಳಿಸಿ ಕೊಡಬೇಕು. ಮತ್ತೆ ನಮ್ಮ ಕೆರೆಯಲ್ಲಿನ ನೀರು ಕುಡಿವಂತಾಗಬೇಕು.
● ಉಮೇಶ ಶಿರಹಟ್ಟಿಮಠ, ಕೆಲಗೇರಿ ನಿವಾಸಿ

ಕೆರೆ ತುಂಬೆಲ್ಲ ಹೂಳು ತುಂಬಿದ್ದು, ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಬೇಕು. ಸಂಜೆಯಾದರೆ ಸಾಕು ಕೆರೆಯ
ಹತ್ತಿರ ಕುಳಿತುಕೊಳ್ಳುವ ಹಾಗಿಲ್ಲ. ದೊಡ್ಡ ಗಾತ್ರದ ಸೊಳ್ಳೆಗಳು ಕಚ್ಚುತ್ತಿವೆ. ಇದರಿಂದ ಇಲ್ಲಿ ಓಡಾಡುವ ಸಣ್ಣ ಮಕ್ಕಳಿಗೆ, ವೃದ್ಧರಿಗೆ ಸಾಂಕ್ರಾಮಿಕ ರೋಗಗಳು ಹೆಚ್ಚುವ ಭೀತಿ ಉಂಟಾಗಿದೆ. ಸಂಬಂಧಪಟ್ಟವರು ಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು.
●ಬಸವರಾಜ ಹಿರೇಮಠ, ಕೆಲಗೇರಿ ನಿವಾಸಿ

■ ಸುನೀಲ ತೇಗೂರ್‌

ಟಾಪ್ ನ್ಯೂಸ್

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

BJP ಡಬಲ್‌ ಗೇಮ್‌; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್

siddaramaiah

Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ

siddaramaiah

Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್‌ ಹೋರಾಟ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್‌ ಗಂಡು ಸಿಂಹ’ ಆಗಮನ

4-kaup

ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.