ಧಾರವಾಡ: ಚನ್ನಮ್ಮ ಪಾರ್ಕ್ ಅವ್ಯವಸ್ಥೆ ಗೆ ಮೇಯರ್ ಆಕ್ರೋಶ
Team Udayavani, Jun 16, 2023, 12:37 PM IST
ಧಾರವಾಡ: ಕಿತ್ತೂರು ರಾಣಿ ಚನ್ನಮ್ಮ ಉದ್ಯಾನಕ್ಕೆ ಹು-ಧಾ ಮಹಾನಗರ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ವಾಯುವಿಹಾರಕ್ಕೆ ಬಂದ ಸಾರ್ವಜನಿಕರ ಅಹವಾಲು ಆಲಿಸಿದ ಮಹಾಪೌರರು, ಉದ್ಯಾನವನದ ಪಾದಚಾರಿ
ಮಾರ್ಗ, ಮರ ಮತ್ತು ಬಳ್ಳಿಗಳ ಪೋಷಣೆ ಕೊರತೆ, ಹಾಳಾದ ವಿದ್ಯುದ್ದೀಪಗಳ ಕಂಬ, ಅಲ್ಲಲ್ಲಿ ಕಸದ ಸಂಗ್ರಹ, ನೀರು ಕಾಣದ
ಶೌಚಾಲಯ, ಬೀದಿ ನಾಯಿಗಳ ತಿರುಗಾಟ ಇನ್ನಿತರೆ ಅವ್ಯವಸ್ಥೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮ ಉದ್ಯಾನವನ ನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಮಹಾಪೌರರು ಅಲ್ಲಿನ ಲೋಪಗಳತ್ತ ಗಮನ ಹರಿಸದ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ವಚ್ಛತೆ, ದೀಪಗಳ, ನೀರು ಸಂಗ್ರಹ ತೊಟ್ಟಿಗಳ ಹೂವಿನ ಬಳ್ಳಿಗಳ ನಿರ್ವಹಣೆಗೆ ಪ್ರತಿ ತಿಂಗಳು ಪಾಲಿಕೆ ಹಣ ಪಾವತಿಸುತ್ತಿದೆ. ಇನ್ನೊಂದೆಡೆ ಸಾರ್ವಜನಿಕರು ಉದ್ಯಾನವನ ಪ್ರವೇಶಕ್ಕೆ ಶುಲ್ಕ ಭರಿಸುತ್ತಿದ್ದಾರೆ. ಆದರೆ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಮತ್ತು ಉತ್ತಮ ವಾತಾವರಣ ಇಲ್ಲದಂತಾಗಿದೆ.
ಪಾಲಿಕೆ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರಿಂದ ಸಮರ್ಪಕ ಸೇವೆ ಪಡೆಯುವಲ್ಲಿ ಆಸಕ್ತಿ ತೋರಿಸದಿರುವುದು
ಸರಿಯಲ್ಲ. ಅ ಧಿಕಾರಿಗಳು ಉದ್ಯಾನವನ ಸೌಂದರ್ಯೀಕರಣಕ್ಕೆ ತುರ್ತಾಗಿ 25 ಲಕ್ಷ ರೂಪಾಯಿಗಳ ಅನುದಾನ ಕೋರಿ ಪ್ರಸ್ತಾವನೆ
ಸಲ್ಲಿಸಿದರೆ 2-3 ದಿನಗಳಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಉದ್ಯಾನವನದಲ್ಲಿ ಮೇಲ್ವಿಚಾರಣೆ ಅಧಿಕಾರಿಗಳ ಮೊಬೈಲ್ ನಂಬರ್‌ನ್ನು ಸಾರ್ವಜನಿಕರ ಸಂಪರ್ಕಕ್ಕೆ ಪ್ರಕಟಿಸುವಂತೆ
ಸೂಚಿಸಿದ ಮಹಾಪೌರರು, ಉದ್ಯಾವನ ನಿರ್ವಹಣೆಯಲ್ಲಿ ಲೋಪ ಎಸಗಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಅಧಿ
ಕಾರಿಗಳಿಗೆ ನಿರ್ದೇಶನ ನೀಡಿದರು.
ಸರಕಾರದ 200 ಕೋಟಿ ರೂ.ಗಳ ವಿಶೇಷ ಅನುದಾನದಡಿ ಉದ್ಯಾನವನ ಸಮಗ್ರ ಸೌಂದರ್ಯೀಕರಣಕ್ಕೆ ಅಂದಾಜು 2 ಕೋಟಿ
ರೂಪಾಯಿಗಳ ಅನುದಾನ ಪಡೆಯಲು ಪಾಲಿಕೆಯಿಂದ ಪ್ರಯತ್ನಿಸಲಾಗುತ್ತಿದೆ. ಅನುದಾನ ಸಿಗುವ ವಿಶ್ವಾಸವಿದೆ. ಅಲ್ಲದೇ
ಹಲವು ಬುಲೆಟ್ ಟ್ರೇನ್ ಇನ್ನಿತರೆ ಆಕರ್ಷಕ ಮಾದರಿಗಳನ್ನು ಉದ್ಯಾನವನದಲ್ಲಿ ಅಳವಡಿಸುವ ಸಂಬಂಧ ಚಿಂತನೆ ನಡೆದಿದೆ.
ಸರ್ವವಿಧದಲ್ಲೂ ಅಚ್ಚುಕಟ್ಟಾದ ಉದ್ಯಾನವನ ರೂಪಿಸಿ ಸಾರ್ವಜನಿಕರ ಅನುಕೂಲಕ್ಕೆ ನೀಡಲಾಗುವುದು ಎಂದರು.
ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ: ಉದ್ಯಾನ ವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ
ಪ್ರತಿಷ್ಠಾಪಿಸಲು ಪಾಲಿಕೆಯಲ್ಲಿ ಈಗಾಗಲೇ ಠರಾವು ಪಾಸು ಮಾಡಲಾಗಿದೆ. ಈ ಕುರಿತಂತೆ ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿ
ಕೂಡ ರಚನೆಯಾಗಿದ್ದು, ಇದಕ್ಕಾಗಿ ಸಮಿತಿ ಸದಸ್ಯರೊಂದಿಗೆ ಸ್ಥಳ ಪರಿಶೀಲನೆ ಕೂಡ ಮಾಡಿದ್ದೇವೆ. ಸೂಕ್ತ ಸ್ಥಳ ನಿರ್ಧರಿಸಿ
ಅಂತಿಮಗೊಳಿಸಲಾಗುವುದು ಎಂದರಲ್ಲದೇ ಮೂರ್ತಿ ಸ್ಥಾಪನೆಗೆ ಅಗತ್ಯವಿರುವ ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.
ಪಾಲಿಕೆ ಸದಸ್ಯರಾದ ಮಂಜುನಾಥ ಬಟ್ಟೆನ್ನವರ, ಶಂಭುಗೌಡ ಸಾಲಮನಿ, ವಲಯ ಅ ಧಿಕಾರಿಗಳಾದ ಗಿರೀಶ ತಳವಾರ, ಆರ್.ಎಂ. ಕುಲಕರ್ಣಿ, ಅಭಿವೃದ್ಧಿ ಅಧಿಕಾರಿ ದಶವಂತ, ತೋಟಗಾರಿಕಾ ವಿಭಾಗದ ನಿರೀಕ್ಷಕಿ ಪ್ರೀತಿ ವಾಡೇದ, ಕಿಶೋರ ದಾಮೋದರ, ಶಶಿ ಚಲ್ಲಾಳ, ಉಮೇಶ ಪೈ, ಅರವಿಂದ ಪಾಗದ, ಚಂದ್ರು ನಾಗಶೆಟ್ಟಿ ಹಾಗೂ ಸ್ಥಳೀಯ ನಾಗರಿಕರು
ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.