Dharwad: ಆಸ್ತಿಗಾಗಿ ಸಂಬಂಧಿಕರಿಂದಲೇ ವೃದ್ದೆಯ ಬರ್ಬರ ಹತ್ಯೆ
Team Udayavani, Feb 6, 2024, 5:03 PM IST
ಧಾರವಾಡ: ಆಸ್ತಿ ವಿವಾದಕ್ಕೆ ವೃದ್ದ ಮಹಿಳೆ ಬಲಿಯಾಗಿದ್ದು, ದೇವಸ್ಥಾನಕ್ಕೆಂದು ಬಂದ ವೃದ್ದೆಯನ್ನು ಸಂಬಂಧಿಕರೇ ಹಾಡುಹಗಲೇ ಹತ್ಯೆ ಮಾಡಿದ ಮನಕಲಕುವ ಘಟನೆ ಇಲ್ಲಿಯ ನವಲೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಗ್ರಾಮದ ನಿವಾಸಿ ಕರೆವ್ವ ಇರಬಗೇರಿ (69) ಕೊಲೆಯಾದವರು. ಬೆಳಗಿನ ಜಾವ ದೇವಸ್ಥಾನಕ್ಕೆ ಹೊರಟಿದ್ದ ಕರೆವ್ವಳನ್ನು ದೇವಸ್ಥಾನದ ಪಕ್ಕದಲ್ಲಿಯೇ ಕೊಚ್ಚಿ ಕೊಲೆ ಮಾಡಲಾಗಿದೆ.
ಪತಿ ಮತ್ತು ಪುತ್ರನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ವೃದ್ದೆ ಕರೆವ್ವ ಪತಿಯ ಊರಾದ ನವಲೂರಿನಲ್ಲಿಯೇ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ಪತಿಯಿಂದ ಬಂದಿದ್ದ ಆರು ಎಕರೆ ಭೂಮಿಯಿದ್ದು, ಈ ಭೂಮಿ ವಿವಾದವೇ ಕರೆವ್ವಳ ಜೀವ ತೆಗೆದುಕೊಂಡಿದೆ ಎಂಬುದು ಸಂಬಂಧಿಕರ ಆರೋಪವಾಗಿದೆ.
ಇದನ್ನೂ ಓದಿ:Toxic: ರಾಕಿಂಗ್ ಸ್ಟಾರ್ ಯಶ್ ʼಟಾಕ್ಸಿಕ್ʼ ಸಿನಿಮಾದಲ್ಲಿ ಶಾರುಖ್ ಖಾನ್ ನಟನೆ?
ನವಲೂರಿನ ವಿಠ್ಠಲ ಮಂದಿರ, ಪಂಡರಪುರದ ಆಶ್ರಮಕ್ಕೆ ದೇಣಿಗೆ ಸೇರಿದಂತೆ ಸಾಕಷ್ಟು ದಾನ ಧರ್ಮ ಮಾಡುತ್ತಿದ್ದ ಕರೆವ್ವ ಅವರಿಗೆ ಪತಿಯಿಂದ ಬಂದಿದ್ದ ಆರು ಎಕರೆ ಭೂಮಿಯ ಬಗ್ಗೆ ಸಂಬಂಧಿಕರ ಮಧ್ಯೆ ವಿವಾದವಿತ್ತು. ಇದರಿಂದ ಸಾಕಷ್ಟು ಗಲಾಟೆಗಳು ನಡೆದರೂ ಸಹ ಹಿರಿಯರ ಮೂಲಕ ಸಂಧಾನವಲ್ಲದೇ ಕೋರ್ಟ್ ಮೂಲಕ ಕೂಡ ಬಗೆಹರಿಸಲಾಗಿತ್ತು. ಇಷ್ಟಾದರೂ ಸಹ ಸಂಬಂಧಿಕರೇ ಈಗ ದೇವಸ್ಥಾನಕ್ಕೆ ಹೋಗಿದ್ದ ಕರೆವ್ವನ್ನು ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿದ್ದಲ್ಲದೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.