Dharwad: ಶ್ರಾವಣ ಮನುಷ್ಯನ ಉದ್ಧಾರಕ್ಕೆ ಸಾಕ್ಷಿಯಾಗಲಿ-ಶಿವಾಚಾರ್ಯ ಸ್ವಾಮೀಜಿ
6ರಿಂದ 8 ಗಂಟೆವರೆಗೆ ಶಿವಾಲಯದಲ್ಲಿ ಶಿವನಿಗೆ ನಿರಂತರ ರುದ್ರಾಭಿಷೇಕ
Team Udayavani, Aug 18, 2023, 10:15 AM IST
ಧಾರವಾಡ: ಶ್ರಾವಣ ಮಾಸ ಮನುಷ್ಯನ ಉದ್ಧಾರಕ್ಕೆ, ಸಾರ್ಥಕತೆಗೆ ಸಾಕ್ಷಿಯಾಗಬೇಕು ಮತ್ತು ಜೀವನಕ್ಕೆ ಸನ್ಮಾರ್ಗ ತೋರಬೇಕು
ಎಂದು ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೊಪ್ಪದಕೇರಿ ಶಿವಾಲಯದಲ್ಲಿ ಶಿವಾಲಯ ಸೇವಾ ಸಮಿತಿಯು ಶ್ರಾವಣ ಮಾಸದ ನಿಮಿತ್ತ ಆಯೋಜಿಸಿರುವ ಆಧ್ಯಾತ್ಮಿಕ
ಪ್ರವಚನದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಧುನಿಕ ಜೀವನದಲ್ಲಿ ಮನುಷ್ಯ ಸಂಸ್ಕೃತಿ, ಸಂಸ್ಕಾರ, ಧರ್ಮದಿಂದ ವಿಮುಖನಾಗಿ, ವಿಕಾರವಾದ ಮನಸ್ಸು ಹೊಂದುತ್ತಿದ್ದಾನೆ. ಭಕ್ತರಿಂದ, ಧರ್ಮಾಧಿಕಾರಿಗಳಿಂದ ನಿರಂತರ ಧರ್ಮ ಸೇವೆ ನೆರವೇರಬೇಕು. ಧರ್ಮದಿಂದ ಮಾತ್ರ ಸಮಾಜ ಉಳಿಯಲು ಸಾಧ್ಯವಿದೆ. ಶ್ರಾವಣ ಮಾಸದಲ್ಲಿ ಆಲಿಸಿದ ಜ್ಞಾನ, ಆಚರಿಸಿದ ನೀತಿ, ಆಚಾರಗಳನ್ನು ಭಾದ್ರಪದ ಮಾಸದಲ್ಲಿ ಗಟ್ಟಿಗೊಳಿಸಿ, ವರ್ಷಪೂರ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿವಾಲಯ ಸೇವಾ ಸಮಿತಿ ಅಧ್ಯಕ್ಷ ಡಾ| ಎಸ್.ಆರ್.ರಾಮನಗೌಡರ ಪ್ರಾಸ್ತಾವಿಕ ಮಾತನಾಡಿ, ಶ್ರಾವಣ ಅಂಗವಾಗಿ ಶಿವಾಲಯ ಸೇವಾ ಸಮಿತಿಯಿಂದ ಪ್ರತಿದಿನ ಬೆಳಗ್ಗೆ 6ರಿಂದ 8 ಗಂಟೆವರೆಗೆ ಶಿವಾಲಯದಲ್ಲಿ ಶಿವನಿಗೆ ನಿರಂತರ ರುದ್ರಾಭಿಷೇಕ,
ಮಹಾಮಂಗಳಾರತಿ ಮಾಡಲಾಗುತ್ತದೆ.
ಆಧ್ಯಾತ್ಮಿಕ ಪ್ರವಚನ ನಿರಂತರವಾಗಿ ಒಂದು ತಿಂಗಳು ನಡೆಯುತ್ತದೆ ಎಂದು ತಿಳಿಸಿದರು. ಶಿವಾಲಯ ಸೇವಾಸಮಿತಿ ಕಾರ್ಯದರ್ಶಿ ಬಸವರಾಜ ಕೌಜಲಗಿ ಸ್ವಾಗತಿಸಿದರು. ಶಿವಾನಿ ಚೌಕಿಮಠ ಪ್ರಾರ್ಥಿಸಿದರು. ಶ್ರೀಕಾಂತ ಪುರ್ಲಿ ನಿರೂಪಿಸಿದರು. ಪ್ರೊ| ಬಸಯ್ಯ ಶಿರೋಳ ವಂದಿಸಿದರು. ಸಿ.ಎಸ್. ಪಾಟೀಲ, ಬಸವರಾಜ ಕಡಕೋಳ, ಬಸವರಾಜ ಕಂಚನಹಳ್ಳಿ, ಜಯಶ್ರೀ
ಪಾಟೀಲ, ಪ್ರೇಮಲತಾ ಸೇರಿದಂತೆ ಎಂ.ಬಿ. ನಗರ ಹಾಗೂ ಕೊಪ್ಪದಕೇರಿ ಗಣ್ಯರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.