Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Team Udayavani, Sep 28, 2024, 6:06 PM IST
ಧಾರವಾಡ: ಮುಡಾ ಹಗರಣ ಸಂಬಂಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸಿದ್ದರಾಮಯ್ಯನವರು ರಾಜೀನಾಮೆ ಕೊಡದೆ ಇದೊಂದು ಷಡ್ಯಂತ್ರ ಎನ್ನುತ್ತಲೇ ಹೊರಟಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದೇ ತನಿಖೆ ಎದುರಿಸುವುದಾದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ 2011 ರಲ್ಲಿ ಯಡಿಯೂರಪ್ಪನವರ ವಿರುದ್ಧ ದೂರು ದಾಖಲಾದಾಗ ಎಸ್‌ಪಿ ಅವರನ್ನು ನೇಮಕ ಮಾಡಿದವರು ಯಾರು ಎಂಬುದಾಗಿ ಸಿದ್ದರಾಮಯ್ಯ ಅವರೇ ಪ್ರಶ್ನಿಸಿದ್ದರು. ಇದಲ್ಲದೇ ಯಡಿಯೂರಪ್ಪನವರಿಗೆ ಈ ರೀತಿ ಪರಿಸ್ಥಿತಿ ಎದುರಾದಾಗ ಇದೇ ಸಿದ್ದರಾಮಯ್ಯ ಯಡಿಯೂರಪ್ಪನವರ ರಾಜೀನಾಮೆಗೆ ಒತ್ತಾಯಿಸಿದ್ದರು. ಈಗ ಇವರೇನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಈಗ ಸಿದ್ದರಾಮಯ್ಯನವರೇ ಅಧಿಕಾರದಲ್ಲಿದ್ದಾರೆ. ಅವರು ಅಧಿಕಾರದಲ್ಲಿದ್ದರೆ ತನಿಖೆ ಪಾರದರ್ಶಕವಾಗಿ ನಡೆಯುವುದಿಲ್ಲ. ಎಡಿಜಿಯನ್ನು ಯಾರು ನೇಮಕ ಮಾಡಿದ್ದಾರೆ ಎಂಬುದಾಗಿ ಸಿದ್ದರಾಮಯ್ಯನವರನ್ನು ಈಗ ನಾವು ಕೇಳುತ್ತಿದ್ದೇವೆ. ಸಿದ್ದರಾಮಯ್ಯನವರೇ ಅವರನ್ನು ನೇಮಕ ಮಾಡಿದ್ದಾರೆ. ಹೀಗಾಗಿ ಅವರು ಅಧಿಕಾರದಲ್ಲಿದ್ದರೆ ಪಾರದರ್ಶಕ ತನಿಖೆ ಸಾಧ್ಯವಿಲ್ಲ ಎಂದರು.
ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದುಕೊಂಡೇ ತನಿಖೆ ನಡೆಸುವುದಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಭ್ರಷ್ಟಾಚಾರ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಅವರ ಸೋಕಾಲ್ಡ್ ಹೈಕಮಾಂಡ್ ರಾಹುಲ್ ಗಾಂಧಿ ಬೇಲ್ ಮೇಲೆ ಇದ್ದಾರೆ. ಸೋನಿಯಾ ಗಾಂಧಿ ಬೇಲ್ ಮೇಲೆ ಇದ್ದಾರೆ. ರಾಬರ್ಟ ವಾದ್ರಾ ಬೇಲ್ ಮೇಲೆ ಇದ್ದಾರೆ. ಹಾಗೂ ಡಿಕೆಶಿ ಕೂಡ ಬೇಲ್ ಮೇಲೆಯೇ ಜೀವನ ನಡೆಸುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷಕ್ಕೆ ಹಿಂದಿನ ಬಾರಿ ಬಹುಮತ ಇರಲಿಲ್ಲ. ಆದರೂ ಜೆಡಿಎಸ್ ಜತೆಗೂಡಿ ಸರಕಾರ ಮಾಡಿದರೂ ಕಚ್ಚಾಟದಿಂದ ಸರಕಾರ ಬಿದ್ದಾಗ ನಾವು ಸರಕಾರ ರಚನೆ ಮಾಡಿದ್ದೇವೆ. ಈ ಸಲ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದ್ದು, ಹೀಗಾಗಿ ನಾವು ಯಾವ ಕಾರಣಕ್ಕೂ ಸರಕಾರ ಬೀಳಿಸುವ ಪ್ರಯತ್ನ ಮಾಡಲ್ಲ. ಅದರಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಕೊಟ್ಟಿಗಟ್ಟಲೇ ಹಣದ ಆಫರ್ ಕೊಟ್ಟಿದ್ದಾರೆ ಎಂಬುದೆಲ್ಲಾ ಸುಳ್ಳು. ನಾನು ಬಿಜೆಪಿಯ ಕೇಂದ್ರ ಸಚಿವನಾಗಿ ಬರೆದು ಕೊಡುತ್ತೇನೆ. ಯಾವ ಕಾಲಕ್ಕೂ ನಾವು ಸರಕಾರಕ್ಕೆ ತೊಂದರೆ ಕೊಡಲ್ಲ. ಸಿಎಂ ರಾಜೀನಾಮೆ ಕೊಡಲಿ ಎಂದ ಜೋಶಿ, ಬಿಜೆಪಿ ಪಕ್ಷಕ್ಕೆ ಮತ್ತೆ ಕೆ.ಎಸ್.ಈಶ್ವರಪ್ಪ ಬರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಏನೂ ಉತ್ತರಿಸಿದೆ ಹೊರಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.