Dharwad: ಸತ್ಯದ ಮೌಲ್ಯಗಳಿಗಾಗಿ ಶ್ರಮಿಸಿ- ನುಗಡೋಣಿ
ಬೇರೆ ಬೇರೆ ಸ್ತರಗಳ ಜನರ ಬವಣೆಗಳು ನಮ್ಮ ಕಥಾ ಸಾಹಿತ್ಯದಲ್ಲಿ
Team Udayavani, Nov 6, 2023, 1:14 PM IST
ಧಾರವಾಡ: ನಮ್ಮ ಸುತ್ತಲಿನ ಕೇಡುಗಳನ್ನು ಗುರುತಿಸುತ್ತ ಲೇಖಕರು ಕಥೆಗಳನ್ನು ಬಹಳ ಜವಾಬ್ದಾರಿಯಿಂದ ಬರೆಯಬೇಕು
ಎಂದು ಕಥೆಗಾರ ಡಾ|ಅಮರೇಶ ನುಗಡೋಣಿ ಹೇಳಿದರು. ಕಸಾಪ ಸಾಹಿತ್ಯ ಭವನದಲ್ಲಿ ಬೆಂಗಳೂರಿನ ವೀರಲೋಕ ಪ್ರಕಾಶನ
ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇಸಿ ಕಥಾ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ
ಅವರು ಮಾತನಾಡಿದರು.
ದೇಸಿಯತೆ ಎನ್ನುವುದು ಸ್ಥಳೀಯತೆ ಮತ್ತು ಜಾಗತಿಕತೆ ಈ ಎರಡನ್ನೂ ಒಳಗೊಂಡಿರುವುದನ್ನು ಇಂದಿನ ಹೊಸ ಲೇಖಕರು ತಿಳಿಯುವಂತೆ ಆಗಬೇಕು. ಸುಳ್ಳು ಹೇಳುವವರು ತಮ್ಮದೆ ಸರಿಯೆಂದು ವಾದಿಸುವ ಜಗತ್ತಿನಲ್ಲಿ ಸತ್ಯದ ಮೌಲ್ಯಗಳಿಗಾಗಿ ಬರಹಗಾರರು ಶ್ರಮಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದರು.
ಕಥೆಗಾರ ಹನುಮಂತ ಹಾಲಗೇರಿ ಮಾತನಾಡಿ, ಸಮಾಜದ ಬೇರೆ ಬೇರೆ ಸ್ತರಗಳ ಜನರ ಬವಣೆಗಳು ನಮ್ಮ ಕಥಾ ಸಾಹಿತ್ಯದಲ್ಲಿ ಅಭಿವ್ಯಕ್ತಿಯಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಕಥಾ ಕಮ್ಮಟದ ನಿರ್ದೇಶಕ ಡಾ| ಬಸು ಬೇವಿನಗಿಡದ, ಡಾ| ಅನಸೂಯಾ ಕಾಂಬಳೆ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಗೋಷ್ಠಿಯಲ್ಲಿ ಕನ್ನಡ ಕತೆಯ ಪ್ರಾದೇಶಿಕ ಹಾಗೂ ದೇಶಿ
ಚಹರೆಗಳ ಕುರಿತು ಚನ್ನಪ್ಪ ಅಂಗಡಿ, ಕಥೆ ಕಟ್ಟುವ ಬಗೆಯ ಬಗ್ಗೆ ಡಾ| ಪ್ರಜ್ಞಾ ಮತ್ತಿಹಳ್ಳಿ, ಮಕ್ಕಳ ಕತೆಗಳ ಕುರಿತು ಡಾ|
ಆನಂದ ಪಾಟೀಲ ಮಾತನಾಡಿದರು.
ಸುರೇಖಾ ಸುರೇಶ ಮತ್ತು ಶರಣಬಸವ ಚೋಳಿನ ಕೆಲ ಆಯ್ದ ಕಥೆಗಳ ಪ್ರಸ್ತುತಿ ಮಾಡಿದರು. ಶ್ರೀಧರ ಗಸ್ತಿ ಅಕ್ಕಮಹಾದೇವಿ ವಚನವನ್ನು, ಸುರಭಿ ಸುರೇಶ ಬೇಂದ್ರೆ ಭಾವಗೀತೆಯನ್ನು ಹಾಡಿದರು. ರಾಖಿ ಹಾನಗಲ್ ನಿರೂಪಿಸಿದರು. ಸುಮಾರು 50 ಜನ ಯುವ ಲೇಖಕರು ಶಿಬಿರದಲ್ಲಿ ಚರ್ಚೆ, ಸಂವಾದದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.