ಕೊಲೆ ಮಾಡಿ ಅಪಘಾತದ ಕಥೆ; ಮೂವರ ಸೆರೆ
ಪ್ರಿಯತಮನ ಜತೆ ಸೇರಿ ಗಂಡನಿಗೇ ಸಂಚಕಾರ; ರಸ್ತೆ ಬದಿ ಶವ ಬಿಸಾಡಿ ಆ್ಯಕ್ಸಿಡೆಂಟ್ ಸನ್ನಿವೇಶ
Team Udayavani, Oct 23, 2022, 3:27 PM IST
ಧಾರವಾಡ: ಗಂಡನನ್ನೇ ಕೊಲೆ ಮಾಡಿದ ಪತ್ನಿ, ಆಕೆಯ ಪ್ರಿಯತಮ ಸೇರಿದಂತೆ ಮೂವರನ್ನು ಕುಂದಗೋಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಂದಗೋಳದ ಕಮಡೊಳ್ಳಿ-ಹಿರೇಹರಕುಣಿ ರಸ್ತೆಯ ಮಾರ್ಗ ಮಧ್ಯೆ ಅ.4ರಂದು ಶಿವಪ್ಪ ಉರ್ಫ್ ಸಿದ್ದು ಕಲ್ಲಪ್ಪ ಈಟಿ(38) ಬೈಕ್ ಮೇಲೆ ಹೋಗುವಾಗ ಬಿದ್ದು ಮೃತಪಟ್ಟಿರುವುದಾಗಿ ಪತ್ನಿ ಲಲಿತಾ ಈಟಿ ಹೇಳಿಕೆ ಅನ್ವಯ ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಈ ಸಾವಿನ ಬಗ್ಗೆ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಲಲತಾಳೇ ಪತಿ ಶಿವಪ್ಪನನ್ನು ತನ್ನ ಪ್ರಿಯತಮ ಹಾಗೂ ಇನ್ನೊಬ್ಬನನ್ನು ಸೇರಿಸಿಕೊಂಡು ಆಯುಧದಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಶವವನ್ನು ರಸ್ತೆ ಬದಿಯ ತೆಗ್ಗಿನಲ್ಲಿ ಬಿಸಾಡಿದ್ದರು. ಬಳಿಕ ಬೈಕ್ ಅನ್ನು ಕಲ್ಲಿನಿಂದ ಜಖಂಗೊಳಿಸಿ, ಶಿವಪ್ಪನ ದೇಹದ ಪಕ್ಕಕ್ಕೆ ತಳ್ಳುವ ಮೂಲಕ ಮೇಲ್ನೋಟಕ್ಕೆ ರಸ್ತೆ ಅಪಘಾತ ಎನ್ನುವ ರೀತಿಯಲ್ಲಿ ಮಾಡಲಾಗಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿತ್ತು.
ಮೂವರು ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಎಸ್ಪಿ ಲೋಕೇಶ ಜಗಲಾಸರ, ಡಿವೈಎಸ್‌ಪಿ ಎಂ.ಬಿ. ಸಂಕದ ಮಾರ್ಗದರ್ಶನದಲ್ಲಿ ಕುಂದಗೋಳ ಠಾಣೆ ಇನ್ಸ್‌ಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದ ತಂಡವು ಪ್ರಕರಣ ಬೇಧಿಸಿದ್ದು, ತಂಡದಲ್ಲಿ ಪಿಎಸ್‌ಐ ನರಸಿಂಹರಾಜು ಜೆ.ಡಿ., ಸಿಬ್ಬಂದಿ ಮಡಿವಾಳ ಜೋಡಗೇರಿ, ಬಸವರಾಜ ಶಿರಕೋಳ, ನಾಗರಾಜ ಹೊಸಕೇರಿ, ಪರಮೇಶ ಗೊಂದಿ, ಅಮರೇಶ ಬಳಗಾರ, ಚಂದ್ರು ಬಡಿಗೇರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..
Waqf; ಬಿಜೆಪಿ ಸರಕಾರದ ಅವಧಿಯಲ್ಲಿ ನೋಟಿಸ್ ನೀಡಿದ್ದರೂ ತಪ್ಪು: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.