ಹಿಂದುತ್ವ ಒಪ್ಪಿದರೆ ಕೈ ಪರವೂ ಸಂಘ ಪ್ರಚಾರ
ಭಾರತ ವಿಶ್ವ ಗುರು ಆಗಬೇಕೆಂಬುದೇ ಆಶಯ; ಜಾತ್ಯತೀತ ಎನ್ನುವವರಿಂದಲೇ ಜಾತಿ ಬಡಿದೆಬ್ಬಿಸುವ ಕೆಲಸ
Team Udayavani, Sep 5, 2022, 5:02 PM IST
ಧಾರವಾಡ: ಆರೆಸ್ಸೆಸ್ ವೈಚಾರಿಕ ವಿಚಾರಗಳಿಗೆ ಪೂರಕವಾಗಿ ಇರುವ ಬಿಜೆಪಿ ಪರ ಸಂಘವು ಸದಾ ನಿಲ್ಲುತ್ತದೆ. ಬಿಜೆಪಿ ಜತೆ ಸಂಘದ ವೈಚಾರಿಕ ಸಂಬಂಧವಿದ್ದು, ಈ ನಿಲುವನ್ನು ಕಾಂಗ್ರೆಸ್ ಪಕ್ಷ ತಾಳಿದರೂ ಅದರ ಪರ ಸಂಘ ನಿಲ್ಲುತ್ತದೆ ಎಂದು ಆರೆಸ್ಸೆಸ್ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಪ್ರಚಾರ ಪ್ರಮುಖ ಅರುಣ ಕುಮಾರ ಹೇಳಿದರು.
ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲೆಯ ಪ್ರಚಾರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಹಿಂದುತ್ವ ಸಿದ್ಧಾಂತ ಒಪ್ಪಿಕೊಳ್ಳುವುದಾಗಿ ಘೋಷಿಸಿದರೆ ಕಾಂಗ್ರೆಸ್ ಪರವಾಗಿಯೂ ಪ್ರಚಾರ ಮಾಡಲು ಸಂಘ ಸಿದ್ಧವಿದೆ. ಬಿಜೆಪಿ ಹಿಂದುತ್ವ ಸಿದ್ಧಾಂತ ಒಪ್ಪಿಕೊಂಡಿದ್ದರಿಂದ ನಮ್ಮ ಕಾರ್ಯಕರ್ತರು ಬಿಜೆಪಿ ಪರ ಪ್ರಚಾರ ಮಾಡುತ್ತಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿಯೂ ಕೆಲ ಕಾರ್ಯಕರ್ತರು ಪ್ರಚಾರ ಮಾಡಿದ ಉದಾಹರಣೆಗಳಿವೆ. ಇದಕ್ಕೆ ಸಂಘದಲ್ಲಿ ಯಾವುದೇ ವಿರೋಧವಿಲ್ಲ ಎಂದರು.
ಹಿಂದೂ ಸಂಸ್ಕೃತಿಯು ಬಗ್ಗಿಸಿದಾಗ ಬಗ್ಗಿದ್ದು, ಈ ಕಾರಣದಿಂದಲೇ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ಈ ಮಣ್ಣಿನ ಸತ್ವ, ಕಂಪು ಹಾಗೂ ಸಂಸ್ಕೃತಿಯ ಆಧಾರದ ಮೇಲೆಯೇ ವಿಕಾಸ ಆಗಬೇಕು. ಹೀಗಾಗಿ ಭಾರತ ಭಾರತವಾಗಿಯೇ ಬೆಳೆಯುವ ಮೂಲಕ ಜಗತ್ತಿಗೆ ಬೆಳಕು ನೀಡಬೇಕು. ಸಾಮಾಜಿಕ, ಆರ್ಥಿಕ, ನೈತಿಕ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಭಾರತ ವಿಶ್ವಗುರುವಾಗಬೇಕೆಂಬುದೇ ಸಂಘದ ಆಶಯ. ಇನ್ನು ಕೆಲ ಜನ ಚಡ್ಡಿಯಿಂದಲೇ ಸಂಘ ಗುರುತಿಸಿದ್ದು, ಅವಮಾನವೇ ಅಲ್ಲ. ಅಂತವರಿಗೆ ಚಡ್ಡಿಯನ್ನೂ ಹಾಕಿದ್ದೇವೆ ಎಂದು ಹೇಳಿದರು.
ಕಳೆದ ಮೂವತ್ತು ವರ್ಷಗಳ ಹಿಂದೆ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಹಿಂದೂ ವಿರೋಧಿ ನೀತಿ ಹೊಂದಿದ್ದರು. ಆದರೆ, ಕಾಲ ಬದಲಾದಂತೆ ಅದು ಬದಲಾಗಿದೆ. ಪ್ರಸ್ತುತದಲ್ಲಿ ಶೇ.90 ಪತ್ರಕರ್ತರು ಹಿಂದೂ ಪರ ನೀತಿ ಹೊಂದಿದ್ದಾರೆ. ಇನ್ನೂ ಕೇವಲ ಶೇ.10 ಪತ್ರಕರ್ತರು ಮಾತ್ರ ಅದೇ ನೀತಿ ಮುಂದುವರಿಸಿದ್ದು, ಅದು ಕೂಡ ಬದಲಾಗಲಿದೆ ಎಂದರು.
ಜಾತ್ಯತೀತರು ಎಂಬುದಾಗಿ ಹೇಳಿಕೊಂಡು ತಿರುಗುವ ನಾಯಕರೇ, ಜಾತಿಯನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ನಡೆಸಿದ್ದಾರೆ. ಅವರ ಪ್ರಯತ್ನಗಳು ವಿಫಲವಾಗಿ ಎಲ್ಲರೂ ಒಂದಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಮುನ್ನಡೆ ಯುತ್ತಿದ್ದಾರೆ. ಇದುವೇ ಹೊಸ ಭಾರತದ ಪರಿಕಲ್ಪನೆಯಾಗಿದೆ ಎಂದು ಹೇಳಿದರು.
ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದ್ದ ಹಲ್ಲೆಗಳು ಕಡಿಮೆಯಾಗಿವೆ. ಕಾಶ್ಮೀರ ಸೇರಿದಂತೆ ವಿವಿಧೆಡೆ ಏಕಕಾಲಕ್ಕೆ ಹತ್ತಾರು ಹಿಂದೂಗಳನ್ನು ಹತ್ಯೆ ಮಾಡಲಾಗುತ್ತಿತ್ತು. ಕಳೆದ 8-10 ವರ್ಷಗಳಲ್ಲಿ ಇಂತಹ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ಮಾನವ ವಿರೋಧಿ ಸಂಘಟನೆಗಳು ತಮ್ಮ ಅಸ್ತಿತ್ವ ತೋರಿಸುವುದಕ್ಕಾಗಿ ಆಗಾಗ ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿವೆ. ಆದರೆ ಎಲ್ಲ ಹಿಂದೂಗಳಿಗೆ ರಕ್ಷಣೆ ನೀಡುವುದು ಅವಶ್ಯಕ ಎಂದರು.
2023ರ ವಿಧಾನಸಭೆ ಚುನಾವಣೆ ಕುರಿತು ಆರೆಸ್ಸೆಸ್ ಸಮೀಕ್ಷೆ ನಡೆಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಸಂಘ ಯಾವುದೇ ಸಮೀಕ್ಷೆ ನಡೆಸಿಲ್ಲ. ಬಿಜೆಪಿಯ ವರ್ಚಸ್ಸು ಹೆಚ್ಚಿಸುವಂತೆ ಬಿಜೆಪಿ ಮುಖಂಡರು ಸಂಘಕ್ಕೆ ಮನವಿ ಮಾಡಿಕೊಂಡಿದ್ದಾರೆ ಎಂಬುದರಲ್ಲಿ ಹುರುಳಿಲ್ಲ ಎಂದು ಹೇಳಿದರು.
ಕುಟುಂಬ ರಾಜಕಾರಣಕ್ಕೆ ಆರೆಸ್ಸೆಸ್ ವಿರೋಧವಿದೆ. ಆದರೆ ಒಮ್ಮಿಂದೊಮ್ಮೆಲೇ ಕುಟುಂಬ ರಾಜಕಾರಣ ನಿಲ್ಲಿಸಲು ಸಾಧ್ಯವಿಲ್ಲ. ಅದಕ್ಕೆ ಸಮಯ ಬೇಕು. ಖಂಡಿತವಾಗಿಯೂ ವಂಶಾಡಳಿತ ಮರೆಯಾಗುವುದು. ಒಂದೇ ದಿನದಲ್ಲಿ ಕಪ್ಪು ಇರುವುದನ್ನು ಬಿಳಿ ಮಾಡಲಾಗುವುದಿಲ್ಲ. ಅದು ಹಂತ ಹಂತವಾಗಿ ಶ್ವೇತ ಬಣ್ಣಕ್ಕೆ ಬಂದೇ ಬರುತ್ತದೆ. ಸಂಘ ಪರಿಶುದ್ಧವಿದ್ದು, ಭ್ರಷ್ಟಾಚಾರ ಯಾರೇ ಮಾಡಿದರೂ ತಪ್ಪು. ಬಿಜೆಪಿಯವರು ಭ್ರಷ್ಟಾಚಾರ ಮಾಡುತ್ತಿದ್ದರೆ ಸಂಘ ಅದನ್ನು ಬೆಂಬಲಿಸುವುದಿಲ್ಲ. ಯಾರೇ ಭ್ರಷ್ಟಾಚಾರದಲ್ಲಿ ಶಾಮೀಲಾದರೂ ಕ್ರಮ ಅಗತ್ಯ. ಅರುಣಕುಮಾರ, ಆರೆಸ್ಸೆಸ್ ಪ್ರಚಾರ ಪ್ರಮುಖರು
ಕಾಕತಾಳೀಯವೇ ಹೊರತು ರಾಜಕೀಯ ಪ್ರೇರಿತವಲ್ಲ
ಹು-ಧಾ ಮಹಾನಗರ ಪಾಲಿಕೆ ಮಾಲೀಕತ್ವದ ಈದ್ಗಾ ಮೈದಾನದಲ್ಲಿ ಒಂದು ಕೋಮಿನವರಿಗೆ ಅಷ್ಟೇ ಪ್ರಾರ್ಥನೆಗೆ ಅವಕಾಶ ಯಾಕೆ? ಇದು ಇನ್ನೊಂದು ಕೋಮಿನವರಿಗೆ ಅನ್ಯಾಯ ಮಾಡಿದಂತೆ. ಹೀಗಾಗಿ ಗಣೇಶೋತ್ಸವ ಆಚರಣೆ ಮೂಲಕ ಹಿಂದೂಗಳ ಭಾವನೆಗೆ ಬೆಲೆ ಸಿಕ್ಕಂತಾಗಿದ್ದು, ಖುಷಿ ತಂದಿದೆ. ಚುನಾವಣೆ ಸನ್ನಿಹಿತವಾಗಿರುವ ಈ ಸಮಯದಲ್ಲಿ ಇದು ಆಗಿದ್ದು, ಕಾಕತಾಳೀಯವೇ ಹೊರತು ರಾಜಕೀಯ ಪ್ರೇರಿತವಲ್ಲ. ಕಾಗೆ ಕುಳಿತುಕೊಳ್ಳುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸಾಟಿಯಾಗಿದೆ ಅಷ್ಟೇ ಎಂದು ಅರುಣಕುಮಾರ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಕಾಲಮಿತಿ ನಿಗದಿಪಡಿಸಲಾಗದು
ಅಖಂಡ ಭಾರತದ ಪರಿಕಲ್ಪನೆ ಸಂಘಕ್ಕಿದ್ದು, ಅದಕ್ಕೆ ಕಾಲವೂ ಕೂಡಿ ಬರಲಿದೆ. ಆದರೆ ಇದಕ್ಕೊಂದು ಕಾಲಮಿತಿ ನಿಗದಿಪಡಿಸಲು ಆಗದು. ಆದರೆ ಈ ಕಾರ್ಯದತ್ತ ಕಾರ್ಯವಂತೂ ಸಾಗಿದೆ. ಹೀಗಾಗಿ ಅಖಂಡ ಭಾರತ ನಿರ್ಮಾಣಕ್ಕೆ ಸಮಯ ಕೂಡಿ ಬರಲಿದೆ ಎಂಬ ವಿಶ್ವಾಸ ಸಂಘಕ್ಕಿದೆ ಎಂದು ಅರುಣುಕುಮಾರ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.