ಲಾಕ್‌ಡೌನ್ ಬಿಸಿ ಮಧ್ಯೆ ಬಿತ್ತನೆಗೆ ಸಿದ್ಧತೆ
Team Udayavani, May 4, 2020, 5:34 PM IST
ಸಾಂದರ್ಭಿಕ ಚಿತ್ರ
ಧಾರವಾಡ: ಕೊರೊನಾ ಮಹಾಮಾರಿಯಿಂದ ಲಾಕ್‌ಡೌನ್ ಜಾರಿಯಾಗಿ ಬರೋಬ್ಬರಿ ಒಂದು ತಿಂಗಳಾಗುತ್ತ ಬಂದಿದ್ದು, ಅನ್ನದಾತರು ಲಾಕ್‌ಡೌನ್ ಮಧ್ಯೆಯೇ ಬಿತ್ತನೆಗೆ ಭೂಮಿ ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯ ಪ್ರಧಾನ ಬೆಳೆಗಳಾದ ಭತ್ತ, ಹೆಸರು, ಮೆಕ್ಕೆಜೋಳ, ಮತ್ತು ಸೋಯಾ ಅವರೆ ಬಿತ್ತನೆಗೆ ಅಗತ್ಯವಾದ ಉಳುಮೆಗೆ ಇಳಿದಿರುವ ರೈತರು ಭೂಮಿಯನ್ನು ಸ್ವತ್ಛಗೊಳಿಸಿ, ಬೀಜ ಮತ್ತು ಗೊಬ್ಬರ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿಯಂತೆ ಏಪ್ರಿಲ್ ತಿಂಗಳಿನಲ್ಲಿ ಸುರಿಯಬೇಕಿದ್ದ ಮಳೆ ಉತ್ತಮವಾಗಿಯೇ ಸುರಿದಿದ್ದು, ಎಲ್ಲ ತಾಲೂಕಿನಲ್ಲಿಯೂ ಕೃಷಿ ಹಂಗಾಮು ಜೋರಾಗಿ ಸಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ವಿಶೇಷವಾದ ಬೆಳೆಗಳಿದ್ದು, ಪಶ್ಚಿಮ ಭಾಗದಲ್ಲಿ ಭತ್ತ, ಗೋವಿನಜೋಳ ಪ್ರಧಾನ ಬೆಳೆಗಳಾದರೆ, ಪೂರ್ವ ಭಾಗದಲ್ಲಿ ಹೆಸರು, ಆಲೂಗಡ್ಡೆ, ಮೆಣಸಿನಕಾಯಿ ಮತ್ತು ಹತ್ತಿ ಬೆಳೆಗೆ ಪೂರಕವಾದ ಭೂಮಿ ಸಿದ್ಧತೆ ಆರಂಭಗೊಂಡಿದೆ.
ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆಗಳಿಗೆ ಯಾವುದೇ ಧಕ್ಕೆಯಾಗಿಲ್ಲ. ಬದಲಿಗೆ ಕೃಷಿ ಸಂಬಂಧಿ ಚಟುವಟಿಕೆಗಳು ಇನ್ನಷ್ಟು ಚುರುಕುಗೊಂಡಿವೆ. ಯಾಕೆಂದರೆ ರೈತರಿಗೆ ಇದೀಗ ಹೊಲ ಮತ್ತು ಮನೆ ಎರಡೇ ಅವಕಾಶಗಳಿದ್ದು, ಮೋಜು, ಮಸ್ತಿ, ಜಾತ್ರೆ, ನಗರ ಪರದಾಟ ಎಲ್ಲವೂ ನಿಂತು ಹೋಗಿದೆ. ಹೊಲದಲ್ಲಿನ ಕೃಷಿ ಸಂಬಂಧಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ.
2.40 ಲಕ್ಷ ಹೆಕ್ಟೇರ್ ಭೂಮಿ ಸಜ್ಜು: 2020ರ ಮುಂಗಾರಿ ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 2.40 ಲಕ್ಷ ಹೆಕ್ಟೇರ್ ಭೂಮಿ ಬಿತ್ತನೆಗೆ ಇದೀಗ ಸಜ್ಜಾಗಿದ್ದು, ಇನ್ನು 20 ಸಾವಿರ ಹೆಕ್ಟೇರ್ ನಷ್ಟು ಉಳುಮೆ ಕಾರ್ಯ ಬಾಕಿ ಉಳಿದಿದೆಯಷ್ಟೆ. ಏಪ್ರಿಲ್ ತಿಂಗಳಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದ ಭೂಮಿ ಸಿದ್ಧತೆ ಕಾರ್ಯ ಮುಗಿದಿರುವುದು ಲಾಕ್‌ಡೌನ್ ವಿಶೇಷ. ಧಾರವಾಡ ತಾಲೂಕಿನಲ್ಲಿ ಹೆಸರು ಮತ್ತು ಭತ್ತದ ಬೆಳೆಗೆ ಅಗತ್ಯವಾದ ಬೀಜ ಸಂಗ್ರಹಣೆಯಾಗಿದ್ದರೆ, ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕಿಗೆ ಮೆಣಸಿನಕಾಯಿ, ಹತ್ತಿ ಬೀಜ, ಗೋವಿನಜೋಳದ ಬೀಜದ ದಾಸ್ತಾನು ಮಾಡಿಕೊಳ್ಳಲಾಗಿದೆ. ರಾಸಾಯನಿಕ ಗೊಬ್ಬರ ಕಳೆದ ವರ್ಷಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ದಾಸ್ತಾನಾಗಿದ್ದು, ಲಾಕ್‌ಡೌನ್ ಮಧ್ಯೆಯೇ ರೈತರು ನಿಧಾನಕ್ಕೆ ಸಹಕಾರಿ ಸಂಘಗಳ ಮೂಲಕ ಗೊಬ್ಬರಕ್ಕೆ ಸರದಿ ಬರೆಸಿಕೊಂಡಿದ್ದಾರೆ.
ಸಾವಯವ ಬೀಜಕ್ಕೂ ಮಾನ್ಯತೆ
ಕಳೆದ ಆರೇಳು ವರ್ಷಗಳಿಂದ ಜಿಲ್ಲೆಯಲ್ಲಿ ಸಾವಯವ ಕೃಷಿ ಕುರಿತು ಸಾಕಷ್ಟು ಪ್ರಚಾರ ಮತ್ತು ಜಾಗೃತಿ ನಡೆಯುತ್ತಿರುವ ಪರಿಣಾಮ
ಜಿಲ್ಲೆಯಲ್ಲಿ ಸಾವಯವ ಕೃಷಿ ಬೀಜಗಳ ಮಾರಾಟ ನೇರವಾಗಿ ರೈತರ ಮಧ್ಯೆ ನಡೆಯುತ್ತಿದೆ. ದೇಶಿ ಭತ್ತ, ಹೆಸರು, ಮೆಣಸಿನಕಾಯಿ, ದ್ವಿದಳ ಧಾನ್ಯಗಳು ಸೇರಿದಂತೆ ಸುಮಾರು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 2020ರಲ್ಲಿ ಸಾವಯವ ಬೀಜ ಬಿತ್ತನೆ ನಡೆಯುತ್ತದೆ ಎಂದು ಸಾವಯವ ಕೃಷಿ ಮಿಷನ್ ಕಾರ್ಯಕರ್ತರು ಅಂದಾಜು ಮಾಡಿದ್ದಾರೆ.
ಶೇ.3.6ಕ್ಕೂ ಅಧಿಕ ಜನ ಮರಳಿ ಹಳ್ಳಿಗಳತ್ತ
ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ನೌಕರಿ, ಕೂಲಿ ಮತ್ತು ಇತರೆ ಉದ್ಯೋಗಗಳನ್ನು ಅರಿಸಿಕೊಂಡು ಹೋಗಿದ್ದವರು ಇದೀಗ ಲಾಕ್‌ಡೌನ್
ಹಿನ್ನೆಲೆಯಲ್ಲಿ ಮರಳಿ ತಮ್ಮ ತಮ್ಮ ಹಳ್ಳಿಗಳಿಗೆ ಆಗಮಿಸಿದ್ದಾರೆ. ಹಳ್ಳಿಗೆ ಬಂದ ಮೊದಲ ವಾರ ಮನೆಯಲ್ಲಿದ್ದರು. ಆದರೆ ನಂತರ ಅವರೆಲ್ಲರೂ ತಮ್ಮ ಮನೆಯವರೊಂದಿಗೆ ಕೃಷಿ ಕಾಯಕಕ್ಕೆ ತೊಡಗಿಸಿಕೊಂಡಿದ್ದು ವಿಶೇಷ. ಹೀಗಾಗಿ ಇದೀಗ ಹಳ್ಳಿಗಳಲ್ಲಿನ ಹೊಲಗಳಲ್ಲಿ ಕೃಷಿ ಕೆಲಸಗಳು ಚುರುಕುಗೊಂಡಿದ್ದು, ಲಾಕ್ ಡೌನ್ ಆವರಿಸಿಕೊಂಡಿದ್ದ ಒಂದು ತಿಂಗಳಿನಲ್ಲಿ ಹೊಲದಲ್ಲಿ ಬಿತ್ತನೆಗೆ ಭೂಮಿ ಸಜ್ಜುಗೊಳಿಸುವ ಕೆಲಸಗಳು ನಡೆದವು. ಜಿಲ್ಲಾಧಿಕಾರಿಗಳ ಕಚೇರಿ ಮೂಲಗಳು ಹೇಳುವಂತೆ ಜಿಲ್ಲೆಯಿಂದ ಹೊರಗೆ ದುಡಿಯಲು ಹೋಗಿದ್ದ ಶೇ.3.6ಕ್ಕೂ ಅಧಿಕ ಜನರು ಮರಳಿ ಹಳ್ಳಿಗಳತ್ತ ಬಂದಿದ್ದಾರೆ.
ರೈತರಿಗೆ ಈವರೆಗೆ 1,200 ಗ್ರೀನ್ ಪಾಸ್ ವಿತರಣೆ
ಜಿಲ್ಲೆಯ ರೈತರ ಬಿತ್ತನೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಗ್ರೀನ್‌ಪಾಸ್ ವಿತರಿಸಲಾಗುತ್ತಿದ್ದು, ಈವರೆಗೂ 1,200ಕ್ಕೂ ಅಧಿಕ ರೈತರಿಗೆ ಈ ಪಾಸ್ ನೀಡಲಾಗಿದೆ. ಹೊಲಗಳ ಪಹಣಿ ಪತ್ರದ ಆಧಾರದ ಮೇಲೆ ಇದನ್ನು ನೀಡಲಾಗುತ್ತಿದೆ. ಈವರೆಗೂ ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತವಾಗಿದ್ದ ಪಾಸ್‌ವಿತರಣೆ, ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೂ ವಿಸ್ತರಣೆಯಾಗಲಿದೆ.
ರಾಜಶೇಖರ,
ಜಂಟಿ ನಿರ್ದೇಶಕ, ಕೃಷಿ ಇಲಾಖೆ
ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.