ಸಂಗೀತ ಲೋಕಕ್ಕೆ ಧಾರವಾಡ ಕೊಡುಗೆ ಅಪಾರ; ಸಚಿವ ಅಶ್ವಿನಿ
ಸಾವಿರಾರು ಅಂಧರಿಗೆ ಸಂಗೀತ ದೀಕ್ಷೆ ಮೂಲಕ ಮಹತ್ವದ ಕಾರ್ಯ ಮಾಡಿದರು
Team Udayavani, Oct 12, 2022, 5:41 PM IST
ಹುಬ್ಬಳ್ಳಿ: ಸಂಗೀತ ಲೋಕಕ್ಕೆ ಧಾರವಾಡ ನೀಡಿದ ಕೊಡುಗೆ ಬಹುದೊಡ್ಡದಾಗಿದೆ. ಸಂಗೀತ ಕ್ಷೇತ್ರದಲ್ಲಿನ ಮೂವರು ಗಂಧರ್ವದಲ್ಲಿ ಇಬ್ಬರು ಗಂಧರ್ವರು ಧಾರವಾಡ-ಬೆಳಗಾವಿ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ. ಸಂಗೀತ ಪುಣ್ಯಭೂಮಿಗೆ ಬಂದಿರುವುದು, ಸವಾಯಿ ಗಂಧರ್ವರ ಸ್ಮರಣೆಯ ಅಂಚೆಚೀಟಿ ಬಿಡುಗಡೆ ಅತ್ಯಂತ ಸಂತಸ ಮೂಡಿಸಿದೆ ಎಂದು ಕೇಂದ್ರ ರೈಲ್ವೆ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಅಂಚೆ ಇಲಾಖೆ ಹೊರ ತಂದ ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಗೀತದ ಮೂಲಕ ಜಗತ್ತಿನಲ್ಲಿಯೇ ತಮ್ಮದೇ ಖ್ಯಾತಿ ಹೊಂದಿದವರು ಪಂಡಿತ ಭೀಮಸೇನ ಜೋಶಿಯವರು. ಅವರಿಗೆ ಗುರುವಾಗಿದ್ದವರು ಸವಾಯಿ ಗಂಧರ್ವರು. ಅವರ ಸ್ಮರಣೆಯ ಅಂಚೆಚೀಟಿ ಬಿಡುಗಡೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಭಾವಿಸಿದ್ದೇನೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಾನು ಅವರ ಆಪ್ತ ಕಾರ್ಯದರ್ಶಿಯಾಗಿದ್ದೆ. ಅವರು ಕುಮಾರ ಗಂಧರ್ವರ ಸಂಗೀತ ಇಷ್ಟ ಪಡುತ್ತಿದ್ದರು. ಪಂ|ಭೀಮಸೇನ ಜೋಶಿ, ಕುಮಾರ ಗಂಧರ್ವರ ಅಭಿಮಾನಿಗಳಲ್ಲಿ ನಾನು ಒಬ್ಬ. ಇದೊಂದು ಭಾವನಾತ್ಮಕ ಸಮಾರಂಭ ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸವಾಯಿ ಗಂಧರ್ವರು ಶ್ರೇಷ್ಠ ಸಂಗೀತಗಾರರಷ್ಟೇ ಅಲ್ಲ ಶ್ರೇಷ್ಠ ಸಂಗೀತ ಪರಂಪರೆಯ ಶಿಷ್ಯ ಬಳಗವನ್ನು ಹುಟ್ಟು ಹಾಕಿದರು. ಪಂ|ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರುರಂತಹ ಸಂಗೀತ ದಿಗ್ಗಜರು ಇವರ ಶಿಷ್ಯರಾಗಿದ್ದರು. ಸಂಗೀತ ತಪಸ್ವಿ ಎನಿಸಿದ್ದರು.
ಮೈಸೂರು ಸಂಸ್ಥಾನದಲ್ಲಿದ್ದ ಅಬ್ದುಲ್ ಕರೀಂಖಾನ್ ಅವರು ಸವಾಯಿ ಗಂಧರ್ವರ ಸಂಗೀತ ಪ್ರತಿಭೆ ಗುರುತಿಸಿ ಅವರಿಗೆ ಗುರುವಾಗಿ ಕಲಿಸುವ ಮೂಲಕ ಜಾತಿ, ಜಾತಿ ಎಂದು ಬಡಿದಾಡುವವರಿಗೆ ಮಾನವೀಯತೆಯ ಉತ್ತರ ನೀಡಿದ್ದರು. ಉತ್ತರ ಕರ್ನಾಟಕ ಸಂಗೀತಕ್ಕೆ ತನ್ನದೇ ಕೊಡುಗೆ ನೀಡಿದೆ. ಗದುಗಿನ ಪಂ|ಪುಟ್ಟರಾಜ ಗವಾಯಿ ಸ್ವತಃ ಸಂಗೀತಗಾರರು ಆಗಿದ್ದರು. ಸಾವಿರಾರು ಅಂಧರಿಗೆ ಸಂಗೀತ ದೀಕ್ಷೆ ಮೂಲಕ ಮಹತ್ವದ ಕಾರ್ಯ ಮಾಡಿದರು. ಅಶ್ವಿನಿ ವೈಷ್ಣವ್ ಅವರದು ಅಹಂ ಇಲ್ಲದ ಸರಳ ವ್ಯಕ್ತಿತ್ವ. ಗಣಿ ಇಲಾಖೆಯಲ್ಲಿ ಸುಧಾರಣೆಗೆ ಮುಂದಾದಾಗ ಕಲ್ಲಿದ್ದಲು ಸಮಸ್ಯೆ ಎದುರಾದಾಗ ನನಗೆ ಅಗತ್ಯ ಸಹಕಾರ ನೀಡಿದವರು ಎಂದರು. ನೇತ್ರತಜ್ಞ ಡಾ| ಎಂ.ಎಂ.ಜೋಶಿ, ಚೀಫ್ ಫೋಸ್ಟ್ ಮಾಸ್ಟರ್ ರಾಜೇಂದ್ರ ಪ್ರಸಾದ, ನಾರಾಯಣ ಹಾನಗಲ್ಲ, ಸವಾಯಿ ಗಂಧರ್ವರ ಕುಟುಂಬಸ್ಥರು ಇದ್ದರು. ಪ್ರವೀಣ ಜೋಶಿ ಸ್ವಾಗತಿಸಿದರು. ಪ್ರಕಾಶ ಹಾನಗಲ್ಲ ವಂದಿಸಿದರು.
ಜೋಶಿ ನನ್ನ ರಾಜಕೀಯ ಗುರು
ಐಎಎಸ್ ಅಧಿಕಾರಿಯಾಗಿ ಸಂಸತ್ತಿನ ಗ್ಯಾಲರಿಯಲ್ಲಿ ಕಲಾಪ ವೀಕ್ಷಿಸಿದ್ದ ನಾನು ಸಂಸದನಾಗಿ, ಸಂಸತ್ತು ಪ್ರವೇಶಿಸಿದಾಗ ಅಲ್ಲಿನ ಕಾರ್ಯ ನಿರ್ವಹಣೆ, ಹೇಗೆ ಮಾತನಾಡಬೇಕು ಎಂಬುದನ್ನು ತಿಳಿಸಿಕೊಡುವ ಮೂಲಕ ಪ್ರಹ್ಲಾದ ಜೋಶಿ ಅವರು ನನಗೆ ಗುರುವಾಗಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಸಂಪುಟ ದರ್ಜೆ ಸಚಿವ ಎಂಬ ಸಣ್ಣ ಅಹಂ ಸಹ ಅವರಲ್ಲಿ ಇಲ್ಲವೇ ಇಲ್ಲ. ಅವರ ನಿವಾಸ, ಕಚೇರಿಗೆ ಆಡಳಿತ ಪಕ್ಷ ಇಲ್ಲವೆ ವಿಪಕ್ಷ ಸಂಸದರು ಯಾರೇ ಹೋದರೂ ಪ್ರೀತಿ ಪೂರ್ವಕ ಆತಿಥ್ಯ ಇದ್ದೇ ಇರುತ್ತದೆ ಎಂಬುದನ್ನು ಬಹುತೇಕ ಸಂಸದರ ಅನಿಸಿಕೆಯಾಗಿದೆ. ಮನೆಗೆ ಹೋದಾಗ ನನಗೂ ಸಹ ದಕ್ಷಿಣ ಭಾರತದ ಇಡ್ಲಿ, ದೋಸೆ, ಭೋಜನ ನೀಡಿ ಸತ್ಕರಿಸುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.