ಪ್ರಶಸ್ತಿ ನೀಡಿಕೆಯಲ್ಲೂ ವಿಭಜನೆ


Team Udayavani, Aug 24, 2018, 4:20 PM IST

24-agust-19.jpg

ಶಿರಸಿ: ಕಳೆದ ಆರೆಂಟು ತಿಂಗಳ ಹಿಂದಷ್ಟೇ ಕರ್ನಾಟಕ ಬಯಲಾಟ ಯಕ್ಷಗಾನ ಜಂಟಿ ಅಕಾಡೆಮಿಯಿಂದ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಲಾಯಿತು. ಆದರೆ, ಅಕಾಡೆಮಿ ವಿಭಾಗಿಸುವಾಗ ಕೇವಲ ಅಕಾಡೆಮಿ ಒಡೆಯಲಿಲ್ಲ. ಆಸ್ತಿಯಂತೆ ಜಂಟಿಯಾಗಿದ್ದಾಗ ಕೊಡುತ್ತಿದ್ದ ಪ್ರಶಸ್ತಿಗಳನ್ನು ಒಡೆದು ಹಿಸ್ಸೆ ಮಾಡಿದರು! ಇದರ ಪರಿಣಾಮ ಬಯಲಾಟಕ್ಕೆ ಐದು, ಯಕ್ಷಗಾನಕ್ಕೆ ಐದು ಪ್ರಶಸ್ತಿ ನೀಡಲು ಅನುಮತಿ ಪ್ರಕಟಿಸಲಾಯಿತು! ಇದರ ಪರಿಣಾಮ ಅಕ್ಷರಶಃ ಕನ್ನಡದ ಅಪ್ಪಟ ಕಲೆಯನ್ನು ಉಸಿರಾಗಿಸಿಕೊಂಡ, ಯಕ್ಷಗಾನ ಬಿಟ್ಟರೆ ಬೇರೇನೂ ಗೊತ್ತಿರದ ಕಲಾವಿದರನ್ನೂ ಅಕಾಡೆಮಿ ಗುರುತಿಸಲು ಕಣ್ಣಿದ್ದೂ ಕುರುಡಾಗುವಂತೆ ಆಯಿತು!

ಕನ್ನಡದ ಕಲೆ: ಬಹುತೇಕ ಕರ್ನಾಟಕವನ್ನು ವ್ಯಾಪಿಸಿಕೊಂಡ ಕಲೆ ಯಕ್ಷಗಾನ. ಇಂಥ ಕಲೆಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ನಿರಂತರ ಸಾಧನೆ ಮಾಡುತ್ತಿರುವ ಹಿರಿಯ, ಅಷ್ಟೇ ಅರ್ಹ ಕಲಾವಿದರಿದ್ದಾರೆ. ಒಂದು ಕಾಲಕ್ಕೆ ದಕ್ಷಿಣೋತ್ತರ ಕನ್ನಡ ಜಿಲ್ಲೆಗೆ ಸೀಮಿತವಾಗಿದ್ದ ಯಕ್ಷಗಾನ ಇಂದು ಅದರ ಗಡಿ ದಾಟಿದೆ. ಅನ್ಯ ಭಾಷೆಯ ಸೋಂಕಿಲ್ಲದೇ ಇರುವ ಯಕ್ಷಗಾನದ ಏಳ್ಗೆಗೆ
ಅನವರತ ಕಾರ್ಯ ಮಾಡಿದ, ಅದರ ಪೆಟ್ಟಿಗೆಗಳನ್ನೂ ಹೊತ್ತು ಹಳ್ಳಿಹಳ್ಳಿ ಕಾಲ್ನಡಿಗೆಯಲ್ಲಿ ಸುತ್ತಾಡಿದ, ಕೊಡುವ ಗೌರವ ಧನ ಕಡಿಮೆ ಇದ್ದರೂ ಕಲೆಯ ಪ್ರಚಾರದಲ್ಲಿ ತೊಡಗಿದ, ಕಲಿಸಿದ ಅನೇಕ ಕಲಾವಿದರು ಇನ್ನೂ ಎಲೆಮರೆಯ ಕಾಯಿಯೇ ಆಗಿದ್ದಾರೆ. ಶತ ಶತಮಾನಗಳ ಇತಿಹಾಸವುಳ್ಳ ಕಲೆಯ ಏಳ್ಗೆಗೆ, ಅದರಲ್ಲಿ ಕೆಲಸ ಮಾಡಿದ ಅನೇಕರನ್ನು ಗುರುತಿಸಲು ಸರಕಾರ ಪ್ರಶಸ್ತಿ ಮೊತ್ತ ಅಧಿಕ ಮಾಡಬೇಕಿತ್ತು.

ಆದರೆ, ಆದದ್ದೇ ಬೇರೆ! ಆದರೆ, ಆದದ್ದೇ ಬೇರೆ. ಅಕಾಡೆಮಿಗಳನ್ನು ವಿಭಾಗಿಸುವ ಬಹುಕಾಲದ ಒತ್ತಾಯಕ್ಕೆ ಸ್ಪಂದಿಸಿದ ಸರಕಾರ ಪ್ರಶಸ್ತಿಯನ್ನೂ ವಿಭಾಗಿಸಿದೆ. ಅನುದಾನ ಲಭ್ಯತೆ ಹಾಗೂ ಇನ್ನಿತರ ಕಾರಣ ಇಟ್ಟು ಸರಕಾರ ತಲಾ ಐದು ಪ್ರಶಸ್ತಿ ನೀಡಲು ಅನುಮತಿ ನೀಡಿದೆ. ಇನ್ನೂ ಪ್ರಶಸ್ತಿ ಲಭಿಸದ, ಸರಕಾರದ ಯಾವುದೇ ಗೌರವಕ್ಕೂ ಭಾಜನರಾಗದ ಕಲಾವಿದರ ಸಮೂಹವೇ ಇದ್ದಾಗ ಈ ಬೆರಳೆಣಿಕೆಯ ಪ್ರಶಸ್ತಿ ಸಂಖ್ಯೆ ಇಕ್ಕಟ್ಟಿಗೆ ಸಿಲುಕಿಸುವಂತೆ ಆಗಿದೆ.

ಯಕ್ಷಗಾನ ಅಕಾಡೆಮಿ ಅಂದರೆ ಮೂಡಲಪಾಯ, ಯಕ್ಷಗಾನದಲ್ಲಿ ತೆಂಕು, ಬಡಗು, ಬಡಾಬಡಗು, ತಾಳಮದ್ದಲೆ, ಹಿಮ್ಮೇಳ, ಮುಮ್ಮೇಳ ಇದು ಸಮೂಹ ಕಲೆಯಾಗಿದ್ದರಿಂದ ಇಲ್ಲಿ ಬೆರಳೆಣಿಕೆಯ ಪ್ರಶಸ್ತಿ ಇಟ್ಟುಕೊಂಡು ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಅಕಾಡೆಮಿ ಈ ವರ್ಷದಿಂದೇ ಈ ಪ್ರಶಸ್ತಿ ಸಂಖ್ಯೆ ಹಾಗೂ ಮೊತ್ತ ಏರಿಕೆ ಮಾಡಬೇಕು. ಸಾಹಿತ್ಯ ಅಕಾಡೆಮಿ ಮಾದರಿಯಲ್ಲಿ ಪ್ರಶಸ್ತಿ ನಿಗದಿಗೊಳಿಸುವ ಆಗ್ರಹ ಕೂಡ ಕೇಳಿ ಬಂದಿದೆ.

ಯಕ್ಷಶ್ರೀಗೆ ಪ್ರಸ್ತಾವನೆ: ಈಗಾಗಲೇ ಯಕ್ಷಗಾನ ಅಕಾಡೆಮಿ ಒಂದು ಲಕ್ಷ ರೂ. ಮೌಲ್ಯದ ಪಾರ್ತಿ ಸುಬ್ಬ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡುತ್ತಿದೆ. ಆದರೆ, ಕರ್ನಾಟಕ ಸರಕಾರ ಸಾಹಿತಿಗಳಿಗೆ, ಸಂಗೀತ ಕಲಾವಿದರುಗಳಿಗೆ, ಜಾನಪದ ಕ್ಷೇತ್ರದ ಸಾಧಕರಿಗೆ ನೀಡುವಂತ ಜಾನಪದಶ್ರೀ ಮಾದರಿಯಲ್ಲಿ ಯಕ್ಷಗಾನ ಕಲಾವಿದರಿಗೆ ಲಭಿಸುತ್ತಿಲ್ಲ. ಹೀಗಾಗಿ ಈ ವರ್ಷದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತ್ಯೇಕವಾಗಿ ಡಾ| ಶಿವರಾಮ ಕಾರಂತರ ಹೆಸರಿನಲ್ಲಿ ಯಕ್ಷಶ್ರೀ ಪ್ರಶಸ್ತಿ ನೀಡಬೇಕು ಎಂಬ ಪ್ರಸ್ತಾವನೆಯನ್ನು ಯಕ್ಷಗಾನ ಅಕಾಡೆಮಿ ಈಗಾಗಲೇ ಸರಕಾರಕ್ಕೆ ಸಲ್ಲಿಸಿದೆ ಎನ್ನುತ್ತಾರೆ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ.ಹೆಗಡೆ ದಂಟ್ಕಲ್‌.

ಇರುವ ಐದು ಪ್ರಶಸ್ತಿ ಏನಕ್ಕೂ ಸಾಲದು. ಅಕಾಡೆಮಿ ಅನುದಾನದಲ್ಲೇ ಕನಿಷ್ಠ 5 ಗೌರವ ಹಾಗೂ 10 ಸಾಮಾನ್ಯ ಪ್ರಶಸ್ತಿ ನೀಡಲು ಅನುಮತಿ ಒದಗಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
 ಪ್ರೊ| ಎಂ.ಎ. ಹೆಗಡೆ ದಂಟ್ಕಲ್‌,
ಅಧ್ಯಕ್ಷರು, ಯಕ್ಷಗಾನ ಅಕಾಡೆಮಿ

ಹಿಮ್ಮೇಳ, ಮುಮ್ಮೇಳ ಕಲಾವಿದರು, ವೇಷಭೂಷಣ ತಯಾರಕರು, ತಾಳಮದ್ದಲೆ ಅರ್ಥದಾರಿಗಳು ಸೇರಿದಂತೆ ಅರ್ಹರ ಗುರುತಿಸುವಿಕೆ ಕಾರ್ಯ ಆಗಬೇಕು. ಅದಕ್ಕಾಗಿ ಅಕಾಡೆಮಿ ಕನಿಷ್ಠ 10 ಗೌರವ ಪ್ರಶಸ್ತಿ ಹಾಗೂ 10 ಪ್ರಶಸ್ತಿಗಳನ್ನು ನೀಡಬೇಕು. 
ಕೇಶವ ಹೆಗಡೆ ಕೊಳಗಿ,
ಹಿರಿಯ ಭಾಗವತ

ರಾಘವೇಂದ್ರ ಬೆಟ್ಟಕೊಪ್ಪ 

ಟಾಪ್ ನ್ಯೂಸ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

BSY POCSO case: Dharwad High Court adjourns hearing to January 10

BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

ಹೊಸ ವರ್ಷದ ಕೊಡುಗೆ: ಬೈಸಿಕಲ್‌ ಉತ್ತೇಜನಕ್ಕೆ ಉಚಿತ ರೈಡ್‌

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.