ಬಹುರೂಪಿ ವಾತಾಪಿ (ಬಾದಾಮಿ) ಸಮಸ್ಯಾನಾಂ ಭಜೆ..


Team Udayavani, May 14, 2018, 4:56 PM IST

14-May-18.jpg

ಬಾದಾಮಿ: ಹೆಸರು ಬೀರಪ್ಪ, ನಾನು ಕುರಿ ಕಾಯೋನು, ನನಗೆ ರಾಜಕೀಯ ಗೊತ್ತಿಲ್ಲ. ಆದ್ರ ಯಾರರ ಗೆದಿಲಿ ನಾವು ಕೊಟ್ಟ ಓಟಿಗೆ ನಮ್ಮಂತಾ ಬಡವರ ಉಪಕಾರನ್ನ ಅವರು ನೆನಪಿಟ್ರ ಸಾಕು… ನನ್ನ ಹೆಸರು ಬಸವಂತಪ್ಪ ಹಿರೇಮನಿ. ನಾನು ಕೃಷಿ ಮಾಡಿ ಜೀವನಾ ಮಾಡಾತಿದ್ದೀನಿ. ಆದ್ರ ಜೀವನ ಪರ್ಯಂತ ಬ್ಯಾಂಕ್‌ ಬಡ್ಡಿ ತುಂಬಿರೋ ನಮಗೆ ರೈತರ ಸಾಲ ಮನ್ನಾ ಮಾಡಿದ್ರ ಅದೇ ಅವರು ನಮಗೆ ಮಾಡೋ ದೊಡ್ಡ ಉಪಕಾರ… ನನ್ನ ಹೆಸರು ಮಲ್ಲವ್ವ. ಯಪ್ಪಾ ಮೊದಲ ಕುಡಿಯಾಕ್‌ ನೀರ ಕೊಡ್ಲಿ ಸಾಕು….ನಾಲ್ಕ ಸಣ್ಣ ಮಕ್ಕಳನ್ನ ಕಟ್ಟಕೊಂಡು ನಮ್ಮಂತ ಹೆಣ್ಣುಮಕ್ಕಳು ಜೀವನಾ ಮಾಡೋದ ಹ್ಯಾಂಗ್‌…

ಹೌದು. ಹಕ್ಕು ಚಲಾವಣೆ ಬಳಿಕ ಇಲ್ಲಿನ ಮತದಾರ ಪ್ರಭುಗಳು ರಾಜಕೀಯ ನಾಯಕರಿಗೆ ಹೇಳುವ ಮಾತು ಒಂದೇ. ನೀವು ಯಾರಾದ್ರು ಗೆಲ್ಲರ್ರಿ. ಆದ್ರ ನಾವು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ನಮ್ಮ ಕಷ್ಟಗಳಿಗೆ ಸ್ಪಂದಿಸಿ ಸಾಕು ಎಂಬುದು. ಕುರಿ ಕಾಯುವ ಕುರುಬರು, ಕೂಲಿ ಮಾಡುವ ವಾಲ್ಮೀಕಿಗಳು, ಕೃಷಿ ಮಾಡುವ ರೈತರು ಒಟ್ಟಾರೆ ಬಡವರು…ಹೀಗೆ ಎಲ್ಲರದ್ದೂ ಒಂದೇ ಬೇಡಿಕೆ.
ನಮ್ಮ ಉಪಕಾರಕ್ಕೆ ಅಪಕಾರ ಮಾಡಿದಿದ್ದರೆ ಸಾಕು.. ಸಮಸ್ಯೆಗಳು ನೂರು: ಬಾದಾಮಿ ಕ್ಷೇತ್ರದಲ್ಲಿ ಸಮಸ್ಯೆಗಳ ಪಟ್ಟಿ ಮಾಡಿದರೆ ಅದು ತುಳಸಿಗೇರಿ ಹನುಮಂತನ ಬಾಲದಷ್ಟೇ ದೊಡ್ಡದಾಗಿ ಬೆಳೆಯುತ್ತದೆ. ಇಲ್ಲಿನ ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರು ಸರಿಯಾಗಿ
ಸಿಕ್ಕುತ್ತಿಲ್ಲ. ಮಲಪ್ರಭಾ ನದಿ ಪಕ್ಕದಲ್ಲಿಯೇ ಇರುವ ಗ್ರಾಮಗಳಲ್ಲಿ ಇಂದಿಗೂ ಬೇಸಿಗೆಯಲ್ಲಿ ನದಿಯಲ್ಲಿ ಮರುಳು ಕೆದರಿ ವರತೆ ನಿರ್ಮಿಸಿ ನೀರು ತುಂಬುವ ಸ್ಥಿತಿ ಇದೆ. ರಸ್ತೆಗಳ್ಳೋ ದೇವರಿಗೆ ಪ್ರೀತಿ. ಪಕ್ಕದಲ್ಲಿಯೇ ಸಿಕ್ಕುವ ಕಲ್ಲನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ರಸ್ತೆ,
ಒಳಚರಂಡಿ ಮತ್ತು ಸುಂದರ ವೃತ್ತಗಳನ್ನು ನಿರ್ಮಿಸಲು ಅವಕಾಶವಿದ್ದರೂ ಈವರೆಗೂ ಯಾವ ಸರ್ಕಾರಗಳು ಈ ಬಗ್ಗೆ ಗಮನಹರಿಸಿಲ್ಲ.

ರಾಷ್ಟ್ರೀಯ ಹೆದ್ದಾರಿಯಿಂದ ಬಾದಾಮಿ ಸಂಪರ್ಕಿಸುವ ಯಾವ ರಸ್ತೆಯೂ ಇನ್ನೂ ಪರಿಪೂರ್ಣ ಪ್ರಮಾಣದಲ್ಲಿ ಪೂರ್ಣಗೊಂಡಿಲ್ಲ. ಕೊಣ್ಣೂರು- ಗೋವನಕೊಪ್ಪ-ಹೆಬ್ಬಳ್ಳಿ-ಚೊಳಚಗುಡ್ಡ ಮೂಲಕ ಬಾದಾಮಿ ಸೇರುವ ರಸ್ತೆ ಕಥೆಯೂ ಅಷ್ಟೇ. ಇನ್ನು ಹುಳೇದಗುಡ್ಡ-ಬಾದಾಮಿ ರಸ್ತೆ ಸುಸ್ಥಿತಿಯಲ್ಲಿಲ್ಲ. ಕೆರೂರು, ಬಾದಾಮಿ ಮತ್ತು ಗುಳೇದಗುಡ್ಡದಂತಹ ದೊಡ್ಡ ಊರುಗಳ ಮೂಲ ಸೌಕರ್ಯಗಳ ಬಗ್ಗೆ
ಮಾತನಾಡುವಂತಿಲ್ಲ. ಎಲ್ಲೆಡೆಯೂ ಗಬ್ಬು ವಾಸನೆ, ಬಹಿರ್ದೆಸೆ ಕೊಮುಟು ವಾಸನೆ, ಎಲ್ಲೆಂದರಲ್ಲಿ ನೂಕಿ ಬಿಸಾಕಿರುವ ತಿಪ್ಪೆಗುಂಡಿಗಳು..ಬಾದಾಮಿಯ ಅಸಲಿ ಚಿತ್ರಣವನ್ನು ಬಿಚ್ಚಿಡುತ್ತವೆ.

ಪ್ರವಾಸೋದ್ಯಮವೆಲ್ಲಿ?: ನಂದಿಕೇಶ್ವರ, ಚೊಳಚಗುಡ್ಡ, ಬನಶಂಕರಿ, ಬಾದಾಮಿ 1500 ವರ್ಷಗಳ ಹಿಂದೆ ಸಂಪದ್ಭರಿತವಾಗಿದ್ದವು. ಆದರೆ ಇಂದು ಇಲ್ಲಿ ಮೂಲ ಸೌಕರ್ಯಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಗುಹಾಂತರ ದೇವಾಲಯ ಮತ್ತು ಇತಿಹಾಸ ಪ್ರಸಿದ್ಧ ರಾಜಮನೆತನದಿಂದಾಗಿ ವಿಶ್ವದ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಇಲ್ಲಿನ 10ಕ್ಕೂ ಹೆಚ್ಚು ಸ್ಥಳಗಳಿಗೆ ಇಂದಿಗೂ ಉತ್ತಮ ಸಂಪರ್ಕ ಕಲ್ಪಿಸುವ ರಸ್ತೆಗಳು ನಿರ್ಮಾಣಗೊಂಡಿಲ್ಲ. ಪ್ರವಾಸೋದ್ಯಮ ದೃಷ್ಠಿಯಿಂದಲೂ ಬಾದಾಮಿ, ಐಹೊಳೆ, ಪಟ್ಟದಕಲ್ಲು,
ಮಹಾಕೂಟದಲ್ಲಿ ಮೂಲ ಸೌಕರ್ಯಗಳಿಲ್ಲ.

ಐಹೊಳೆಯ ಪುನರ್‌ವಸತಿ ಸಮಸ್ಯೆಗೆ ದಶಕಗಳ ಕಾಲವಾದರೂ ಪರಿಹಾರ ಸಿಕ್ಕಿಲ್ಲ. ಇಲ್ಲಿನ ಇತಿಹಾಸದ ಕುರುಹುಗಳು ಜನ ಸಂದಣಿಗೆ ಸಿಲುಕಿ ಮನೆಯ ಗೋಡೆಯ ಕಲ್ಲುಗಳಾಗುತ್ತಿವೆ. ರಾಜಕೀಯ ಹಿತಾಸಕ್ತಿ, ಸ್ವಜನ ಪಕ್ಷಪಾತ ಇದನ್ನು ಪ್ರಶ್ನಿಸುತ್ತಿಲ್ಲ. ಹೀಗಾಗಿ
ಮುಂದಿನ ತಲೆಮಾರಿಗೆ ಇತಿಹಾಸ ಪರಿಚಯಿಸುವ ಮೂಲ ಕುರುಹುಗಳೇ ಇಲ್ಲಿ ಅಳಸಿ ಹೋಗುತ್ತಿವೆ.

ಕನ್ನಡದ ಸಾಮ್ರಾಜ್ಯವನ್ನು ನರ್ಮದಾ ನದಿ ತೀರದವರೆಗೂ ವಿಸ್ತರಿಸಿದ್ದ ವೀರಪುಲಿಕೇಶಿಯ ಬಾದಾಮಿ ಕ್ರಿ.ಶ. 5ನೇ ಶತಮಾನದಲ್ಲಿಯೇ ಸಂಪದ್ಬರಿತ ಕನ್ನಡ ರಾಜ್ಯ. ಚಿನ್ನದ ನಾಣ್ಯಗಳ ಚಲಾವಣೆ, ಮುತ್ತು ರತ್ನದ ವ್ಯಾಪಾರ, ಮಲಪ್ರಭೆಯ ಪರಿಶುದ್ಧ ನೀರು, ದೈತ್ಯ ಮರಗಳ ದಟ್ಟ ಕಾಡು, ಹೊಲಗಳಿಗೆ ನೀರು, ವ್ಯವಸಾಯಕ್ಕೂ ಹರಿದು ಬರುತ್ತಿದ್ದ ಅಂತರ್ಜಲ..ಇಂತಿಪ್ಪ ಸಾಮ್ರಾಜ್ಯದ ಕುರುಹು ಆಗಿರುವ ಇಂದಿನ ಬಾದಾಮಿ ಕ್ಷೇತ್ರ ಸದ್ಯಕ್ಕೆ ಕುಡಿಯುವ ನೀರು, ಉತ್ತಮ ರಸ್ತೆ, ನೈರ್ಮಲ್ಯದ ಕೊರತೆ ಜೊತೆಗೆ ಬಡತನ ಮತ್ತು ಅಪೌಷ್ಠಿಕತೆ ತಾಂಡವವಾಡುವ ತಾಲೂಕಾಗಿದ್ದು ವಿಪರ್ಯಾಸ. 

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.