ಯಾವುದೇ ಕಾರಣಕ್ಕೂ ಧರ್ಮ ಇಬ್ಭಾಗ ಬೇಡ


Team Udayavani, Mar 12, 2018, 12:13 PM IST

hub-1.jpg

ಹುಬ್ಬಳ್ಳಿ: ವೀರಶೈವ ಹಾಗೂ ಲಿಂಗಾಯತ ಎಂದು ಧರ್ಮವನ್ನು ವಿಭಜನೆ ಮಾಡದೇ ಎಲ್ಲರೂ ಒಂದಾಗಿರಬೇಕು ಎಂದು ಮುಂಡರಗಿ ಮಠದ ನಾಡೋಜ ಡಾ| ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು. 

ಹಾನಗಲ್ಲ ಶ್ರೀ ಕುಮಾರಸ್ವಾಮಿಯವರ 150ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು. ವೀರಶೈವ ಧರ್ಮ ಸೈದ್ಧಾಂತಿಕ ಧರ್ಮ. ವೀರಶೈವ-ಲಿಂಗಾಯತ ಬೇರೆಯಲ್ಲ. ವೀರಶೈವ ಪದದ ಅರ್ಥ ತಿಳಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಧರ್ಮ ಇಬ್ಟಾಗವಾಗ ಬಾರದು. ಒಂದೇ ಧರ್ಮವಾಗಿರುವುದರ ಮಹತ್ವವನ್ನು ಧರ್ಮ ಬಾಂಧವರು ಅರಿತುಕೊಳ್ಳಬೇಕು ಎಂದರು.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರು ವೀರಶೈವ ಮಹಾಸಭಾ ಆರಂಭಿಸುವ ಮೂಲಕ ಧರ್ಮ, ಸಭ್ಯತೆ, ಸಂಸ್ಕೃತಿ ತಿಳಿಸಿಕೊಟ್ಟರು. ಸಮಾಜಕ್ಕಾಗಿ ತಮ್ಮ ಜೀವನವನ್ನೇ
ಮುಡಿಪಾಗಿಟ್ಟವರು ಕುಮಾರ ಸ್ವಾಮೀಜಿ. ಅವರು ನಾಡಿಗೆ ಅಪಾರ ಶಿಷ್ಯ ಬಳಗವನ್ನು ನೀಡಿದ್ದಾರೆ ಎಂದು ಹೇಳಿದರು.
 
ಅಧ್ಯಕ್ಷತೆ ವಹಿಸಿದ್ದ ಕೋಡಂಗಲ್‌ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಸಮಾಜ ಉಳಿಯಲು ಮಠಗಳು
ಬೇಕು. ಮಠಗಳು ಉಳಿಯಲು ಸಮರ್ಥ ಸ್ವಾಮೀಜಿಗಳು ಬೇಕು. ಇಂಥ ನೂರಾರು ಸ್ವಾಮೀಜಿಗಳನ್ನು ರೂಪಿಸಿದವರು ಕುಮಾರ ಸ್ವಾಮೀಜಿ. ಗುಡಿ-ಗುಂಡಾರಗಳನ್ನು ಕಟ್ಟುವುದು ಸುಲಭ, ಆದರೆ ಸ್ವಾಮೀಜಿಗಳನ್ನು ರೂಪಿಸುವುದು ಕಷ್ಟ ಎಂದರು.

ಸಂಪತ್ತು, ಕೀರ್ತಿ ಬಯಸದ ದ್ವಿತೀಯ ಬಸವಣ್ಣ ಎಂದೇ ಪರಿಗಣಿಸಲ್ಪಟ್ಟಿರುವ ಕುಮಾರ ಸ್ವಾಮಿಗಳ ಬಗ್ಗೆ ಕೂಡ ಕೆಲವರು ಟೀಕೆ ಮಾಡುತ್ತಾರೆ. ಸಮಾಜ ಉಳಿಸಲು ಅವರು ಅವತಾರ ಪುರುಷರಾಗಿ ಬಂದರು. ವೈಭೋಗದ ಕಡೆಗೆ ನೋಡದೇ ಕಷ್ಟಗಳನ್ನು ಆಹ್ವಾನಿಸಿಕೊಂಡರು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ನಾಡಿನ
ಸ್ವಾಮೀಜಿಗಳಿಗೆ ಸಮಾಜ ಸುಧಾರಣೆಯ ದಾರಿ ತೋರಿಸಿಕೊಟ್ಟವರು ಕುಮಾರ ಶಿವಯೋಗಿಗಳು. ಸರಳ ಬದುಕು, ಆಹಾರ, ವಿಹಾರದ ಬಗ್ಗೆ ತಿಳಿಸಿಕೊಟ್ಟು ಸ್ವಾಮೀಜಿಗಳಿಗೆ ಮಾರ್ಗದರ್ಶನ ನೀಡಿದರು ಎಂದು ಹೇಳಿದರು.

ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ವಿವೇಕಾನಂದ ಭಾರತದ ಬೆಳಕಾಗಿದ್ದರೆ, ಕುಮಾರ ಸ್ವಾಮೀಜಿ ಕರ್ನಾಟಕದ ಕಾಂತಿ. ಅವರ ಹೆಸರನ್ನು ನಾಡಿನ ಮನೆ ಮನೆಗೆ ಮುಟ್ಟಿಸಬೇಕು. ಹಿಂದೂ ಮಹಾಸಭಾ ಆರಂಭಕ್ಕೆ ಮುನ್ನವೇ ಅಖೀಲ ಭಾರತ ವೀರಶೈವ ಮಹಾಸಭೆ ಮಾಡುವ ಮೂಲಕ ವೀರಶೈವರನ್ನು ಸಂಘಟಿಸಿದರು ಎಂದರು.

ಶ್ರೀ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ಅಂಧರು, ಅನಾಥರನ್ನು ಸಂಗೀತದ ಯೋಗಿ ಗಳಾಗಿಸಿದ ಕುಮಾರ
ಶಿವಯೋಗಿಗಳು ಬಸವಣ್ಣನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸಮಾಜ ಸೇವೆ ಮಾಡಿದರು ಎಂದರು.

ಶ್ರೀ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಕುಮಾರ ಶಿವಯೋಗಿ ಗಳಿಲ್ಲದೆ ಇರದಿದ್ದರೆ ನಾಡಿನಲ್ಲಿ ಕಾವಿಧಾರಿ
ಗಳು ಸಿಗುತ್ತಿರಲಿಲ್ಲ. ಅವರು ಶಿಕ್ಷಣ, ಸಂಗೀತ, ಯೋಗ, ಆಯುರ್ವೇದವಲ್ಲದೇ ಗೋರಕ್ಷಾ ಕಾರ್ಯದಲ್ಲಿಯೂ ತಮ್ಮನ್ನು
ತೊಡಗಿಸಿಕೊಂಡರು. ಎಲ್ಲರೂ ಅವರ ತತ್ವ ಪಾಲಿಸಬೇಕು ಎಂದರು. 

ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರಿದ್ದರು. ಜಿ.ಎಚ್‌. ಹನ್ನೆರಡುಮಠ ಅವರು ಕುಮಾರ ಶಿವಯೋಗಿಗಳ ಕುರಿತು ರಚಿಸಿದ “ಯುಗಪುರುಷ’ ಕೃತಿಯನ್ನು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು. ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸ್ವಾಗತಿಸಿದರು.

ಹಾವೇರಿಯ ಶ್ರೀ ಸದಾಶಿವ ಸ್ವಾಮೀಜಿ ವಂದಿಸಿದರು. ಮಾಜಿ ಸಚಿವ ಸಿ.ಎಂ. ಉದಾಸಿ, ವಿಧಾನ ಪರಿಷತ್‌
ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಪಾಲ್ಗೊಂಡಿದ್ದರು. 
 
ಧರ್ಮರಕ್ಷಣೆಗೆ ಚಿಂತನೆ ಸಮಾರಂಭದಲ್ಲಿ ಹಲವು ಮಠಾಧೀಶರು ತಮ್ಮ ಭಾಷಣದಲ್ಲಿ ವೀರಶೈವ-ಲಿಂಗಾಯತ
ಧರ್ಮ ಇಬ್ಭಾಗವಾಗುವುದಕ್ಕೆ ಅವಕಾಶ ನೀಡಬಾರದೆಂದು ಅಭಿಪ್ರಾಯಪಟ್ಟರು. ಧರ್ಮದ ಒಡೆಯುವುದಕ್ಕೆ ಆದ್ಯತೆ ನೀಡದೇ ಧರ್ಮರಕ್ಷಣೆ ಬಗ್ಗೆ ಚಿಂತನೆ ನಡೆಸಬೇಕೆಂದು ಸೂಚ್ಯವಾಗಿ ಹೇಳಿದರು. 

ವೀರಶೈವ ಧರ್ಮ ಸೈದ್ಧಾಂತಿಕ ಧರ್ಮ. ವೀರಶೈವ-ಲಿಂಗಾಯತ ಬೇರೆಯಲ್ಲ. ವೀರಶೈವ ಪದದ ಅರ್ಥ ತಿಳಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಧರ್ಮ ಇಬ್ಭಾಗವಾಗಬಾರದು. ಒಂದೇ ಧರ್ಮವಾಗಿರುವುದರ ಮಹತ್ವವನ್ನು ಧರ್ಮ ಬಾಂಧವರು ಅರಿತುಕೊಳ್ಳಬೇಕು.
 ಡಾ| ಅನ್ನದಾನೇಶ್ವರ ಸ್ವಾಮೀಜಿ, ಮುಂಡರಗಿ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.