ಆರೋಗ್ಯ ಸುಧಾರಣೆಗೆ ಯೋಗ ಮಾಡಿ
Team Udayavani, Jun 4, 2018, 5:25 PM IST
ತೇರದಾಳ: ಯೋಗಕ್ಕೂ ಆಯುರ್ವೇದಕ್ಕೂ ಅವಿನಾಭಾವ ಸಂಬಂಧವಿದೆ. ಆಯುರ್ವೇದ ಚಿಕಿತ್ಸೆಗಳು ಯೋಗದಲ್ಲಿ ನಿರತರಾದವರಿಗೆ ಸಂಪೂರ್ಣ ಫಲಕೊಡುತ್ತವೆ. ಯೋಗದಿಂದ ರೋಗಗಳ ಮುಕ್ತಿ ಸಾಧ್ಯವಿದೆ. ಯೋಗದಿಂದಲೆ ಹಿಂದಿನ ಕಾಲದಲೂ ಜಗತ್ತಿಗೆ ಯೋಗಾಭ್ಯಾಸದ ಮಹತ್ವ ಹೇಳಿಕೊಟ್ಟ
ಭಾರತ ರಾಷ್ಟ್ರವು ಯೋಗ ಗುರುವಾಗಿದೆ ಎಂದು ಡಾ| ಜೆ.ಬಿ. ಆಲಗೂರ ಹೇಳಿದರು. ಪಟ್ಟಣದ ಜೆವಿ ಮಂಡಳದ ಗ್ರಾಮೀಣ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವತಯಾರಿ ನಿಮಿತ್ತ ನಡೆದ ಉಚಿತ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಡಾ|ದೀಪಿಕಾ ಶಿರಗುಪ್ಪೆ ಮಾತನಾಡಿ, ಯೋಗದ ಪ್ರಯೋಜನದ ಬಗ್ಗೆ ಹೇಳಿದರು. ಶಿಲ್ಪಾ ಮಾಲಗಾರ ವಿಶ್ವಯೋಗ ದಿನಾಚಾರಣೆ ಪ್ರಾರಂಭವಾದ ಕುರಿತು ಮಾಹಿತಿ ನೀಡಿದರು. ಬಳಿಕ ಶಿಲ್ಪಾ. ಬಿ ಯೋಗಗಳ ಬಗ್ಗೆ ಹೇಳುತ್ತ ಶಿಬಿರ ನಡೆಸಿಕೊಟ್ಟರು. ಡಾ| ಜಿ.ಎಸ್. ಬೆಳ್ಳಂಕಿಮಠ, ಡಾ| ವಿಜಯ, ಡಾ| ಸಂಪೂರ್ಣ, ಡಾ| ಶಿವಲೀಲಾ, ಡಾ| ಛಾಯಾ ಹಾಗೂ ಇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ಸಂತೋಷ ಸ್ವಾಗತಿಸಿದರು. ಸಿಂಚನಾ, ಸಂತೋಷ, ಪವನ, ಅಲ್ತಾಫ್ ನಿರೂಪಿಸಿದರು. ಕಾಜಲ್ ವಂದಿಸಿದರು. ಇದಕ್ಕೂ ಮೊದಲು ಪ್ರಾತಃಕಾಲ ಧನ್ವಂತರಿ ಪೂಜೆ, ಪ್ರಾರ್ಥನೆ ಜರುಗಿತು.
ಯೋಗ ತರಬೇತಿ ಶಿಬಿರವನ್ನು ಕಾಲೇಜು ವತಿಯಿಂದ ಜೂ. 21ರವರೆಗೆ ಗುರುಕುಲ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 6ಗಂಟೆಯಿಂದ 7ರವರೆಗೆ ನಡೆಯಲಿದ್ದು, ಸಾರ್ವಜನಿಕರು ಸಹ ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಕಾಲೇಜಿನ ಕಾರ್ಯದರ್ಶಿ ಡಾ| ಜೆ.ಬಿ. ಆಲಗೂರ ಹಾಗೂ ಪ್ರಾಚಾರ್ಯ ಡಾ| ಲಿಂಗಾರಡ್ಡಿ ಬಿರಾದಾರ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.