ಜಮೀನಿಗೆ ಚರಂಡಿ ನೀರು: ಆತ್ಮ ಹತ್ಯೆ ಬೆದರಿಕೆ
Team Udayavani, Aug 20, 2018, 5:48 PM IST
ಕುಷ್ಟಗಿ: ಜಮೀನಿಗೆ ಕೊಳಚೆ ನೀರು ಹರಿಸಲು ಮುಂದಾದ ಪುರಸಭೆ ಕ್ರಮಕ್ಕೆ ಬೇಸತ್ತ ಜಮೀನು ಮಾಲೀಕ ವಿಷ ಸೇವಿಸಲು ಯತ್ನಿಸಿದ ಘಟನೆ ರವಿವಾರ ಪಟ್ಟಣದ 13ನೇ ವಾರ್ಡ್‌ನಲ್ಲಿ ನಡೆದಿದೆ. ಪಟ್ಟಣದ ಹೊರವಲಯದ ಹಳೆ ನಿಡಶೇಷಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. 201ರ 2 ಎಕರೆ ಪಟ್ಟಣದ ಮಹಮ್ಮದ್ ಅಫ್ತಾಬ್ ಅವರಿಗೆ ಸೇರಿದ್ದು, ಈ ಜಮೀನಿನಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳ ತ್ಯಾಜ್ಯದ ನೀರು ಸೇರುತ್ತಿದೆ.
ಈ ಹಿಂದೆ ಪುರಸಭೆ ಅವರು ಇವರ ಜಮೀನು ಒತ್ತುವರಿ ಮಾಡಿ ರಾಜಕಾಲುವೆ ನಿರ್ಮಿಸಿದ್ದಾರೆ. ಆದರೆ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಕಾಲುವೆ ನೀರು ಇವರ ಜಮೀನಿನಲ್ಲಿ ಸಂಗ್ರಹವಾಗುತ್ತಿದೆ. ಪಟ್ಟಣದ ಕೊಳಚೆ ನೀರು ಪ್ಲಾಸ್ಟಿಕ್ ತ್ಯಾಜ್ಯ ಸಮೇತ ಜಮೀನು ಸೇರದಂತೆ ರೈತ ಮಹ್ಮದ್ ಅಫ್ತಾಬ್ ಅವರು ಚರಂಡಿಗೆ ಮಣ್ಣಿನ ತಡೆಗೋಡೆ (ಒಡ್ಡು) ಹಾಕಿಕೊಂಡಿದ್ದರು. ಇದರಿಂದ ಚರಂಡಿ ನೀರು ಮುಂದೆ ಹರಿಯದೇ ಭರ್ತಿಯಾಗಿತ್ತು. ಮಳೆಯಾದರೆ ನೀರು ಮನೆ ನುಗ್ಗುವ ಅಪಾಯದ ಹಿನ್ನೆಲೆಯಲ್ಲಿ ಸ್ಥಳೀಯರು ಜಮೀನು ಮಾಲೀಕ ಹಾಕಿರುವ ಒಡ್ಡನ್ನು ತೆರವುಗೊಳಿಸುವಂತೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಪುರಸಭೆಯವರು ಜೆಸಿಬಿಯೊಂದಿಗೆ ಒಡ್ಡು ತೆರವುಗೊಳಿಸಿ, ಅವರ ಜಮೀನಿಗೆ ಕೊಳಚೆ ನೀರು ಹರಿಸಲು ಬಂದಿದ್ದರು. ಇದರಿಂದ ಆಕ್ರೋಶಗೊಂಡ ಮಹ್ಮದ್ ಅಫ್ತಾಬ್ ಒಡ್ಡು ತೆರವುಗೊಳಿಸಿದರೆ ವಿಷ ಸೇವಿಸುವುದಾಗಿ ಬೆದರಿಕೆಯೊಡ್ಡಿದ್ದರು. ಇದರಿಂದ ವಿಚಲಿತರಾದ ಪುರಸಭೆ ಸಿಬ್ಬಂದಿ ಜೆಸಿಬಿಯೊಂದಿಗೆ ವಾಪಸ್ಸಾದರು.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ವಿಷದ ಬಾಟಲಿ ವಶಕ್ಕೆ ತೆಗೆದುಕೊಂಡರು. ನಂತರ ಮಹ್ಮದ್ ಅಫ್ತಾಬ್ ಅವರನ್ನು ಪಿಎಸ್‌ಐ ವಿಶ್ವನಾಥ ಹಿರೇಗೌಡ್ರು ಠಾಣೆಗೆ ಕರೆಯಿಸಿಕೊಂಡು, ಸಮಾಧಾನಿಸಿ, ಸೊಮವಾರ ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಖುದ್ದು ಭೇಟಿ ನೀಡಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.