ವಿರೋಧದ ನಡುವೆ ಇ-ಪಾವತಿಗೆ ಚಾಲನೆ‌


Team Udayavani, Jul 25, 2017, 12:07 PM IST

hub1.jpg

ಹುಬ್ಬಳ್ಳಿ: ಇಲ್ಲಿಯ ಅಮರಗೋಳದ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಜು.24ರಿಂದ ಇ-ಪಾವತಿ ಜಾರಿಯಾಗಿದ್ದು, ವರ್ತಕರು ಮಾತ್ರ ವಿವಿಧ ಕಾರಣಗಳೊಂದಿಗೆ ಇದನ್ನು ವಿರೋಧಿಸಿ ಯಾವುದೇ ಖರೀದಿ ಮಾಡದೇ ವಹಿವಾಟಿನಿಂದ ದೂರ ಉಳಿದರು. 

ಸರಕಾರದ ಆದೇಶದಂತೆ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಸೋಮವಾರದಿಂದ ಇ-ಪಾವತಿ ಕಾರ್ಯಾರಂಭಿಸಲಾಗಿದೆ. ಇದಕ್ಕೆ ಇಲ್ಲಿನ ವರ್ತಕರು ಅಸಹಕಾರ ವ್ಯಕ್ತಪಡಿಸಿದ್ದು ಅಲ್ಲದೆ ಜು.27ರಿಂದ ವಹಿವಾಟು ಬಂದ್‌ ಮಾಡಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಎಪಿಎಂಸಿಯ ಆಡಳಿತ ಮಂಡಳಿ ಸರಕಾರದ ಸೂಚನೆಯಂತೆ ಮಾರುಕಟ್ಟೆಗೆ ರೈತರು ತರುವ ಉತ್ಪನ್ನಗಳನ್ನು ಖರೀದಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ. 

ಸುಲಲಿತವಾಗಿ ಇ-ಪಾವತಿ ವ್ಯವಸ್ಥೆ ಜಾರಿ ಸಂಬಂಧ ಕೃಷಿ ಮಾರುಕಟ್ಟೆ ನಿರ್ದೇಶಕ ಜಿ.ಎನ್‌. ಶಿವಮೂರ್ತಿ, ಹೆಚ್ಚುವರಿ ನಿರ್ದೇಶಕ ಆರ್‌. ಎನ್‌. ಚಾಮರಾಜು ಅವರು ರವಿವಾರ ನಗರದ ಎಪಿಎಂಸಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದರು.

ಸೋಮವಾರ ಎಪಿಎಂಸಿ ಕಾರ್ಯದರ್ಶಿ ಎಚ್‌.ಸಿ. ಗಜೇಂದ್ರ ಅವರು ಎಪಿಎಂಸಿ ಅಧ್ಯಕ್ಷ, ಸದಸ್ಯರೊಂದಿಗೆ ಚರ್ಚೆ ನಡೆಸಿ ಇ-ಪಾವತಿ ಸಮರ್ಪಕ ಜಾರಿಗೆಗೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇ- ಪಾವತಿ ಜಾರಿಗಾಗಿ ರಾಜ್ಯದ ವಿವಿಧ ಭಾಗಗಳ ಎಪಿಎಂಸಿಗಳಿಂದ ಅಂದಾಜು 30ಕ್ಕೂ ಅಧಿಕ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ಕರೆಯಿಸಿಕೊಳ್ಳಲಾಗಿದ್ದು, ಯಾವುದೇ ಸಮಸ್ಯೆಯಿಲ್ಲ. ಹೊಸ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.

ಹುಬ್ಬಳ್ಳಿ ಎಪಿಎಂಸಿಯಿಂದಲೇ ರೈತರ ಕೃಷಿ ಉತ್ಪನ್ನಗಳನ್ನು ಇ ಟೆಂಡರ್‌ ಮೂಲಕ ಖರೀದಿಸುವಂತೆ ರಿಲಾಯನ್ಸ್‌ ಹಾಗೂ ಬಿಗ್‌ ಬಜಾರ್‌ ಕಂಪನಿಯ ಅಧಿಕಾರಿಗಳನ್ನು ಕೋರಲಾಗಿದ್ದು, ಅದಕ್ಕವರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ಗಜೇಂದ್ರ ತಿಳಿಸಿದರು. 

ಖರೀದಿಗೆ ಟಿಎಪಿಸಿಎಂ ನೇಮಕ: ಎಪಿಎಂಸಿಗೆ ರೈತರು ತರುವ ಉತ್ಪನ್ನಗಳನ್ನು ಖರೀದಿಸಲು ವರ್ತಕರು ಹಿಂದೇಟು ಮಾಡಿದರೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಸಂಸ್ಥೆಯಾಗಿ ನೇಮಿಸಿಕೊಳ್ಳಲು ಸರಕಾರ ಸೂಚಿಸಿದೆ.

ಅದರಂತೆ ಹುಬ್ಬಳ್ಳಿ ಎಪಿಎಂಸಿಯಲ್ಲಿ ಮಾರ್ಕೆಟಿಂಗ್‌ ಫೆಡರೇಶನ್‌ ಮುಖಾಂತರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘವನ್ನು ನೇಮಿಸಲಾಗಿದೆ. ಈ ಸಂಘದ ಮೂಲಕ ಸೋಮವಾರ ಹೆಸರು, ಸೋಯಾಬಿನ್‌ ಖರೀದಿ ಮಾಡಲಾಗಿದೆ ಎಂದು ಸಹಕಾರ ಸಂಘಗಳಿಂದ ಎಪಿಎಂಸಿಗೆ ಆಯ್ಕೆಯಾಗಿರುವ ರಘುನಾಥ ಕೆಂಪಲಿಂಗನಗೌಡರ ತಿಳಿಸಿದರು.   

ವರ್ತಕರ ಆಕ್ಷೇಪ: ಒಮ್ಮೇಲೆ ಇ-ಪಾವತಿ ವ್ಯವಸ್ಥೆ ಜಾರಿ ಮಾಡಿರುವುದರಿಂದ ವರ್ತಕರಿಗೆ ತುಂಬಾ ಅನಾನುಕೂಲವಾಗಿದೆ. ರೈತರಿಂದ ಉತ್ಪನ್ನ ಖರೀದಿಸಿದ ಮೇಲೆ ಒಂದೇ ದಿನದಲ್ಲಿ ಅವರಿಗೆ ಹಣ ಪಾವತಿ ಮಾಡಲು ಎಲ್ಲಿಂದ ಇಡಿಗಂಟು ತರಬೇಕು. ಇ-ಪಾವತಿ ಜಾರಿ ಮಾಡುವುದಾದರೆ ಜಿಎಸ್‌ಟಿ ರೀತಿ ರಾಜ್ಯಾದ್ಯಂತ ಜಾರಿಗೊಳಿಸಲಿ. 

ಅದನ್ನು ಬಿಟ್ಟು ಸರಕಾರವು ತನ್ನ ಪ್ರಯೋಗವನ್ನು ನಮ್ಮ ಮೇಲಷ್ಟೆ ಯಾಕೆ ಮಾಡಬೇಕು. ಈ ಭಾಗದ ರೈತರು ಬೇರೆ ಬೇರೆ ಎಪಿಎಂಸಿಗಳಿಗೆ ಹೋಗುತ್ತಾರೆ. ಆಗ ನಮಗಷ್ಟೇ ದೊಡ್ಡ ಹೊಡೆತ ಬೀಳುತ್ತದೆ. ಇದು ಸರಕಾರದ ನೀತಿಯೂ ಅಲ್ಲವೆಂದು ವರ್ತಕರ ಕ್ಷೇತ್ರದ ಚನ್ನಬಸಪ್ಪ ಹೊಸಮನಿ, ಎಪಿಎಂಸಿ ನಿರ್ದೇಶಕ ಸುರೇಶ ಕಿರೇಸೂರ ಹೇಳಿದರು. 

ಇ-ಪಾವತಿ ಜಾಗೃತಿಗೆ ತಂಡ ರಚನೆ: ಇ-ಪಾವತಿ ಜಾರಿ ಕುರಿತು ರೈತರಿಗೆ ಮಾಹಿತಿ ನೀಡಲು ಹಾಗೂ ಅವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಪಿಎಂಸಿ ಆಡಳಿತ ಮಂಡಳಿಯು ಏಳು ತಂಡಗಳನ್ನು ರಚಿಸಿದೆ. ಪ್ರತಿ ತಂಡದಲ್ಲಿ ಉಪ ನಿರ್ದೇಶಕ ಸೇರಿದಂತೆ ಐದು ಜನರು ಇರುತ್ತಾರೆ. ಒಂದೊಂದು ತಂಡವು ಆಯಾ ಕ್ಷೇತ್ರದ ಎಪಿಎಂಸಿ ಸದಸ್ಯರ ನೇತೃತ್ವದಲ್ಲಿ 2 ಕ್ಷೇತ್ರಗಳಲ್ಲಿ ಸಂಚರಿಸಿ ಜಾಗೃತಿ ಮೂಡಲಿಸಲಿದೆ.   

ಟಾಪ್ ನ್ಯೂಸ್

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಬೈರಪ್ಪ

Dharwad: ತತ್ವಶಾಸ್ತ್ರವೇ ನನ್ನ ಕಾದಂಬರಿಗಳ ಮೂಲಸೆಲೆ: ಎಸ್.ಎಲ್.ಭೈರಪ್ಪ

basavaraj

Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

mutalik (2)

B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.