11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ


Team Udayavani, Mar 26, 2017, 2:22 PM IST

hub5.jpg

ಧಾರವಾಡ: (ಡಾ|ಎಂ. ಎಂ.ಕಲಬುರ್ಗಿ ವೇದಿಕೆ) ಈಗಿನ ಅಭದ್ರತೆಯ ವಾತಾವರಣದಲ್ಲಿ ಬದುಕಿರುವ ಕವಿ-ಸಾಹಿತಿಗಳು ತಮ್ಮ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ  ಚಿಂತಿಸಬೇಕಿದೆ ಎಂದು ಸಾಹಿತಿ ಡಾ| ಬಸವರಾಜ ಸಾದರ ಹೇಳಿದರು. 

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಈ ಚಿಂತೆಯೇ ನುಣುಚಿಕೊಳ್ಳುವ ಉಪಾಯವೂ ಆಗಬಾರದು. ನ್ಯಾಯಾಲಯದ ನ್ಯಾಯದೇವತೆಯ ತಕ್ಕಡಿಯ ಪ್ರತಿಮೆ ನಮ್ಮ ಸಾಹಿತಿಗಳಿಗೆ ಮಾರ್ಗದರ್ಶಿ ಪ್ರತಿಮೆಯಾಗಬೇಕು ಎಂದರು. 

ಖ್ಯಾತ ಸಂಶೋಧಕ ಡಾ|ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ 2 ವರ್ಷಗಳೇ ಕಳೆದರೂ ಹಂತಕರ ಪತ್ತೆ ಇಲ್ಲ. ಇದು ನಾಚಿಕೆಯ ಸಂಗತಿ. ಅದರಲ್ಲೂ ಈ ಬಗ್ಗೆ ಪ್ರಶ್ನಿಸುವ ಧ್ವನಿ ಈ ಭಾಗದಲ್ಲಿ ತಗ್ಗಿ ಹೋಗಿದೆ. ಈ ಮೂಲಕ ಸಾಹಿತಿಗಳಿಗೆ ಅಭದ್ರತೆ ಕಾಡುತ್ತಿದ್ದು, ಇಂತಹ ಸಂದಿಗª ಸ್ಥಿತಿಯಲ್ಲಿ ಇದನ್ನು ನಿಭಾಯಿಸುವ ಬಗ್ಗೆ ಸಾಹಿತ್ಯ ವಲಯ ಚಿಂತನೆ ಮಾಡಬೇಕಿದೆ ಎಂದರು. 

ಸಾಹಿತಿಯೊಬ್ಬನ ಸಾಮಾಜಿಕ ಕಾಳಜಿ ನೇರವಾದ ಕ್ರಾಂತಿಯನ್ನುಮಾಡಲಿಕ್ಕಿಲ್ಲ. ಆದರೆ ಆತನ  ಬರಹದ ಓದಿನಿಂದ ಸಹೃದಯದಲ್ಲಿ ಜಾಗೃತವಾಗಬಹುದಾದ ಮಾನವ ಸಂವೇದನೆಯಲ್ಲಿ ಬದಲಾವಣೆಯ ತುಡಿತ ಮೊಳಕೆ ಒಡೆಯುವುದು ಖಚಿತ.

ಸಮಾಜ ವಿರೋಧಿ ವ್ಯಕ್ತಿ- ಶಕ್ತಿಗಳನ್ನು, ಸ್ಥಾಪಿತ ಅಧಿಕಾರ ಶಾಹಿಯನ್ನು, ಸ್ಥಾವರ ವ್ಯವಸ್ಥೆಯನ್ನು ಕೆಣಕಿ ವೈಚಾರಿಕ ನೆಲೆಯಲ್ಲಿ ಪ್ರತಿಭಟಿಸಿ ಬರೆಯುವ ಸಾಹಿತಿಯ ತುಡಿತ ಓದುಗನ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಬಲ್ಲುದು ಎಂದರು. 

ಮಾನವೀಯ ಸಂವೇದನೆಗಳೇ ಸತ್ತು ಹೋಗುತ್ತಿರುವ ವರ್ತಮಾನದ ವ್ಯಾವಹಾರಿಕ ಹಾಗೂ ಗ್ರಾಹಕ ಸಂಸ್ಕೃತಿಯು, ಸಂಕುಚಿತ ಮತ್ತು ಸ್ವಾರ್ಥದ ಮಾನವ ಬೆಳೆಯನ್ನು ಪೊಗದಸ್ತಾಗಿ ಬೆಳೆಯುತ್ತಿದೆ. ಇಂತಹದರಲ್ಲಿ ಮಾನವರಲ್ಲಿ ಮೊದಲು ಮಾನವೀಯ ಸಂವೇದನೆಗಳನ್ನು ಜಾಗೃತ ಗೊಳಿಸುವುದು ಅಗತ್ಯವಿದ್ದು, ಇದು ಬರಹಗಾರನ ಆದ್ಯತೆಯ ಕೆಲಸವಾಗಬೇಕು ಎಂದು ಸಲಹೆ ನೀಡಿದರು. 

ಕನ್ನಡ ಕುಲಂ ಗೆಲ್ಗೆ: ಸಮ್ಮೇಳನದ ಆಶಯ ನುಡಿಗಳನ್ನಾಡಿದ ಸಾಹಿತಿ ಡಾ| ಶಾಂತಿನಾಥ ದಿಬ್ಬದ, ಉತ್ತಮ ಕನ್ನಡ ಸಾಹಿತ್ಯ ಕೃತಿಗಳಗೆ ಯಾವುದೇ ಜಾತಿ-ಕುಲ-ಗೋತ್ರ ಹಾಗೂ ಕಟ್ಟು ಪಾಡುಗಳಿಲ್ಲ. ಇಂಥ ಸಾಹಿತ್ಯದಿಂದ ಸಮಾಜದ ಅಂಕು- ಡೊಂಕು, ಸಮಸ್ಯೆ ತಿದ್ದುವ ಕೆಲಸ ಆಗಬೇಕು. 

ಉದಾರೀಕರಣ, ಆಧುನಿಕರಣ ಭರಾಟೆಯಲ್ಲಿ ಕನ್ನಡಕ್ಕೆ ಆಗುವ ಅನ್ಯಾಯ ತಡೆಯಬೇಕು ಎಂದರು. ಒಂದು ಕಾಲದಲ್ಲಿ ಸಾಹಿತ್ಯ ಕೇವಲ ಮನರಂಜನೆ ಆಗಿತ್ತು. ಇದೀಗ ಸಾಹಿತಿಗಳ ಸಂಖ್ಯೆ ಹೆಚ್ಚಿದರೆ ಸಾಲದು. ಸ್ವಂತಿಕೆ, ಸತ್ವ, ಜೀವನ ಮೌಲ್ಯಗಳನ್ನು, ಹೆಚ್ಚಿಸಬೇಕು. ಸಮಾಜ ಅಂಕು ಡೊಂಕು ತಿದ್ದುವ ನಿಟ್ಟಿನಲ್ಲಿ ಸಾಹಿತ್ಯ ಕೆಲಸ ಮಾಡಬೇಕು.

ಮನರಂಜನೆಯ ಜೊತೆಗೆ ಈಗ ಶಿಕ್ಷಣ ಅದು ಮೌಲಿಕ ಶಿಕ್ಷಣ ಜ್ಞಾನ ನೀಡುವಲ್ಲಿ ಸಾಹಿತ್ಯ ಕೆಲಸ ಮಾಡಬೇಕು. ಇದರಿಂದ ಓರ್ವ ಸಾಹಿತಿ, ವೈಚಾರಿಕ, ಮನಸ್ಸು ಮಾಡಿದರೆ ಅಲ್ಪವಾದರೂ ಸಮಾಜ ತಿದ್ದಬಹುದು ಎಂದರು. ಕಸಾಪ ಧ್ವಜ ಹಸ್ತಾಂತರಿಸಿದ ಹಿಂದಿನ ಸಮ್ಮೇಳನಾಧ್ಯಕ್ಷ ಡಾ|ರಾಜೇಂದ್ರ ಚೆನ್ನಿ ಮಾತನಾಡಿ, ಸಮುದಾಯದ ಸಂಕಷ್ಟಗಳು ಕನ್ನಡ ವ್ಯಾಪ್ತಿಯಲ್ಲಿ ಮೂಡ ಬರಬೇಕಿದೆ.

ಜನಪರ ಸಂಸ್ಕೃತಿ ಮಾಧ್ಯಮ ಕಾಣೆಯಾಗಿ, ಜನಪ್ರಿಯ ಮಾಧ್ಯಮ ಪ್ರಭಾವಗಳು ಅಪಪ್ರಚಾರ ನಡೆಸಿವೆ. ಕಲಬುರ್ಗಿ ಹತ್ಯೆಯಲ್ಲಿ ಮಾಧ್ಯಮದ ಪಾತ್ರವಿದೆ ಎಂಬ ನೋವು ವ್ಯಕ್ತಪಡಿಸಿದ ಅವರು, ಪ್ರಭುತ್ವದ ಬೆದರಿಕೆಗೆ ವಿಚಲಿತರಾಗದೆ ನೈತಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಅಂದಾಗ ಕಲ್ಯಾಣ ಸಮಾಜ ಕಟ್ಟಬಹುದು ಎಂದರು. 

ಐರ”ಸಂಗ’ ಕವಿ: ಅಧ್ಯಕ್ಷತೆ ವಹಿಸಿದ್ದ ಕವಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಕೌತಕ ಮೂಡಿಸುವುದು ಕವಿಯ ಕೆಲಸ. ಅದು ಕವಿಯ ನಿತ್ಯದ ಕಾಯಕವಾಗಬೇಕು. ಇದನ್ನು ಉಳಿಸಿಕೊಂಡಿದ್ದು,ಕೆ.ಎಸ್‌.ನರಸಿಂಹಸ್ವಾಮಿ ಬಿಟ್ಟರೆ, ವಿ.ಸಿ.ಐರಸಿಂಗ ಅವರು ಮಾತ್ರ.

ಬಾನುಲಿ ಕವಿಯಾದ ಇವರು, 87ರ ಚಿರಯುವಕ. ಇಂಥ ಇಳಿ ವಯಸ್ಸಿನಲ್ಲಿ ಪ್ರೇಮ ಕತೆಗಳನ್ನು ಬರೆಯುವ ಅವರ ಅಭಿರುಚಿ ಭತ್ತಲಾರದಜೀವಸೆಲೆ.ಇಂಥ ವ್ಯಕ್ತಿಯ ಸರಳತೆ ಅಳವಡಿಸಿಕೊಳ್ಳಬೇಕು ಎಂದರು. ಇದಕ್ಕೂ ಮುನ್ನ ಕಸಾಪದ  ನೂತನ ಕಟ್ಟಡವನ್ನು ಸಚಿವ ವಿನಯ ಕುಲಕರ್ಣಿ ಉದ್ಘಾಟಿಸಿದರು. ಈ ವೇಳೆ ಬಯಲು ರಂಗಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. 

ಸಾಹಿತಿಗಳಾದ ರಾಘವೇಂದ್ರ ಪಾಟೀಲ, ಡಾ|ಮಲ್ಲಿಕಾರ್ಜುನ ಹಿರೇಮಠ, ಡಾ| ಎಚ್‌.ಎಂ. ಬಿಳಗಿ, ಕಸಾಪ ಜಿಲ್ಲಾಧ್ಯಕ್ಷ ಡಾ|ಲಿಂಗರಾಜ ಅಂಗಡಿ, ಪೊÅ|ಕೆ. ಎಸ್‌.ಕೌಜಲಗಿ, ಡಾ|ಜಿನದತ್ತ  ಹಡಗಲಿ, ಪೊÅ|ಎಸ್‌.ಎಸ್‌ .ದೊಡಮನಿ ಇದ್ದರು. ನಂತರ ವೀರೇಶ ಬಡಿಗೇರ ಸಂಗಡಿಗರಿಂದ ತತ್ವಪದ ಹಾಗೂ ಲಾವಣಿ ಪದಗಳ ಕಾರ್ಯಕ್ರಮ ನಡೆದವು.   

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.