ಬಸ್ ಸಂಚಾರ ಹೆಚ್ಚಿದರೂ ಆದಾಯ ಅಷ್ಟಕಷ್ಟೆ
ಶೇ.70 ಬಸ್‌ಗಳ ಸಂಚಾರ ,ಅರ್ಧದಷ್ಟೂ ತಲುಪದ ಗಳಿಕೆ
Team Udayavani, Nov 3, 2020, 1:31 PM IST
ಸಾಮದರ್ಭಿಕ ಚಿತ್ರ
ಹುಬ್ಬಳ್ಳಿ: ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಿದ ನಂತರ ಜನಜೀವನ ಸಹಜ ಸ್ಥಿತಿಗೆ ಮರಳಿದರೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಎಲ್ಲಾ ಅನುಸೂಚಿಗಳನ್ನು ಕಾರ್ಯಾಚರಣೆಗೊಳಿಸಲು ಸಾಧ್ಯವಾಗುತ್ತಿಲ್ಲ. ಶೇ.70 ಬಸ್‌ಗಳುಸಂಚಾರಗೊಳ್ಳುತ್ತಿದ್ದು, ಸಾರಿಗೆ ಆದಾಯ ಮಾತ್ರ ಕೋವಿಡ್-19 ಪೂರ್ವದಲ್ಲಿದ್ದ ಆದಾಯದ ಅರ್ಧದಷ್ಟು ತಲುಪಿಲ್ಲ.
ಆರ್ಥಿಕ ಸಂಕಷ್ಟದಲ್ಲಿ ನಲುಗುತ್ತಿದ್ದ ವಾಯವ್ಯ ಸಾರಿಗೆ ಸಂಸ್ಥೆಗೆ ಕೋವಿಡ್-19 ಚೇತರಿಸಿಕೊಳ್ಳಲಾಗದಂತಹ ಪೆಟ್ಟು ನೀಡಿದೆ. ಹಂತ ಹಂತವಾಗಿ ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದರೂ ಸಾರಿಗೆ ಸಂಸ್ಥೆ ಚೇತರಿಸಿಕೊಳ್ಳದಂತಹ ಪರಿಸ್ಥಿತಿಗೆ ತಲುಪಿದೆ. ಕಳೆದ ಐದು ತಿಂಗಳಿನಿಂದ ಹಂತ ಹಂತವಾಗಿ ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಗಿದೆ. ಇತ್ತೀಚೆಗಷ್ಟೇ ಅಂತಾರಾಜ್ಯ ಬಸ್‌ಗಳ ಸಂಚಾರ ಆರಂಭಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಸಂಸ್ಥೆ ವ್ಯಾಪ್ತಿಯ 9 ವಿಭಾಗಗಳಿಂದ ಶೇ.70 ಬಸ್‌ಗಳಕಾರ್ಯಚರಣೆಗೊಳಿಸಲಾಗುತ್ತಿದೆ. ಆದರೆ ಸಾರಿಗೆಆದಾಯ ಮಾತ್ರ ಶೇ.50 ದಾಟಿಲ್ಲ. ಇದು ಸಂಸ್ಥೆಗೆ ದೊಡ್ಡ ಹಿನ್ನಡೆಯಾಗಿ ಪರಿಣಿಮಿಸಿದೆ.
ವಸ್ತು ಸ್ಥಿತಿ ಹೇಗಿದೆ?: ಕೋವಿಡ್-19 ಪೂರ್ವದಲ್ಲಿವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ 9 ವಿಭಾಗಗಳು,51 ಘಟಕಗಳಿಂದ ನಿತ್ಯ ಸರಾಸರಿ 4660 ಅನುಸೂಚಿಗಳುಕಾರ್ಯಚರಣೆಗೊಳ್ಳುತ್ತಿದ್ದವು. ಆದರೆ 2020 ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ 3720 ಅನುಸೂಚಿಗಳು ಮಾತ್ರ ಕಾರ್ಯಾಚರಣೆಗೊಳ್ಳುತ್ತಿವೆ.ಪ್ರಯಾಣಿಕರ ಕೊರತೆಯಿಂದ ಸುಮಾರು900 ಅನುಸೂಚಿಗಳಲ್ಲಿ ಬಸ್‌ಗಳನ್ನು ಓಡಿಸಲುಅಧಿಕಾರಿಗಳಿಗೆ ಧೈರ್ಯವಿಲ್ಲದಂತಾಗಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ಬಸ್‌ಗಳನ್ನು ರಸ್ತೆಗಿಳಿಸಿದ್ದರೂಕೆಲ ಮಾರ್ಗಗಳಲ್ಲಿ ನಿರೀಕ್ಷಿತ ಸಾರಿಗೆ ಆದಾಯ ಬಾರದಿರುವುದು ಮತ್ತಷ್ಟು ನಷ್ಟಕ್ಕೆ ಕಾರಣವಾಗಿದೆ.
ಕೋವಿಡ್-19 ಪೂರ್ವದಲ್ಲಿ ಪ್ರತಿನಿತ್ಯ 5ರಿಂದ 5.5 ಕೋಟಿ ರೂ. ಸಾರಿಗೆ ಆದಾಯವಿತ್ತು. ಆದರೆಶೇ.70 ಬಸ್‌ಗಳ ಸಂಚಾರ ಮಾಡುತ್ತಿದ್ದರೂ ಆದಾಯಮಾತ್ರ 2.5 ಕೋಟಿ ರೂ. ದಾಟುತ್ತಿಲ್ಲ. ಬೆಂಗಳೂರು ಸೇರಿದಂತೆ ಕೆಲ ಮಾರ್ಗಗಳಲ್ಲಿ ಮಾತ್ರ ಬಸ್‌ಗಳಿಗೆ ಬೇಡಿಕೆಯಿದೆ. ಇನ್ನೂ ಕೆಲ ನಗರಗಳಿಗೆ ಹಿಂದಿನಷ್ಟು ಬಸ್‌ಗಳನ್ನು ಬಿಡಲು ಪ್ರಯಾಣಿಕರ ಕೊರತೆಯಿದೆ. ಹೀಗಾಗಿ ಮುಂಗಡ ಟಿಕೆಟ್ ಬುಕಿಂಗ್‌ಗೆ ಒಂದೊಂದು ಮಾರ್ಗದಲ್ಲಿ ಆರೇಳು ಬಸ್‌ಗಳನ್ನು ನೀಡಿ ಸಂಜೆ ವೇಳೆಗೆ ಐದಾರು ಬಸ್‌ಗಳು ರದ್ದಾಗುತ್ತಿವೆ. ಪ್ರತಿ ತಿಂಗಳು ಕನಿಷ್ಠ 25-30 ಲಕ್ಷ ರೂ. ಒಪ್ಪಂದದ ಮೇರೆಗೆ (ಬಾಡಿಗೆ) ಬಸ್‌ಗಳ ಪಡೆಯುವುದರಿಂದ ಆದಾಯವಿತ್ತು ಆದರೆ ಇದೀಗ ಅದು ಶೂನ್ಯಕ್ಕೆ ತಲುಪಿದೆ.
ಕೈ ಕೊಟ್ಟ ಅಂತಾರಾಜ್ಯ ಸಾರಿಗೆ: ವಾಯವ್ಯ ಸಾರಿಗೆ ವ್ಯಾಪ್ತಿಯ ಬೆಳಗಾವಿ, ಚಿಕ್ಕೋಡಿ, ಧಾರವಾಡ, ಹುಬ್ಬಳ್ಳಿ ಹಾಗೂ ಬಾಗಲಕೋಟೆ ವಿಭಾಗಗಳಿಗೆ ಮಹಾರಾಷ್ಟ್ರದಮಾರ್ಗಗಳು ಹೆಚ್ಚು ಆದಾಯ ತರುವಂತಹವಾಗಿದೆ. ಅಂತಾರಾಜ್ಯ ಬಸ್‌ಗಳ ಕಾರ್ಯಾಚರಣೆಗೆ ಅವಕಾಶನೀಡಿದಾಗ್ಯೂ ಕೂಡ ಕರ್ನಾಟಕ-ಮಹಾರಾಷ್ಟ್ರದನಡುವೆ ಸಂಚಾರ ಮಾಡುವ ಪ್ರಯಾಣಿಕರಸಂಖ್ಯೆಯಲ್ಲಿ ಸಾಕಷ್ಟು ಕುಸಿತ ಕಂಡಿದೆ. ಒಂದು ವಿಭಾಗದಿಂದ 12-15 ಬಸ್‌ಗಳು ಓಡಾಡುತ್ತಿದ್ದ ಜಾಗದಲ್ಲಿ 3-4 ಬಸ್‌ಗಳು ಮಾತ್ರ ಸಂಚಾರ ಮಾಡುತ್ತಿವೆ. ಲಾಭದ ಆದಾಯ ತರುವಂತಹ ಮಾರ್ಗಗಳೇ ಕೈ ಕೊಟ್ಟಿವೆ.
ದೀಪಾವಳಿ ಆದಾಯ ನಿರೀಕ್ಷೆ: ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಲ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ ಮಾಡುವುದರಿಂದ ಕನಿಷ್ಠ 3 ರಿಂದ 3.20 ಕೋಟಿ ರೂ. ಹೆಚ್ಚುವರಿ ಆದಾಯವಿರುತ್ತಿತ್ತು. ಇದರೊಂದಿಗೆ ಒಂದಿಷ್ಟು ಮೈಸೂರು ದಸರಾದಿಂದ ಹೆಚ್ಚುವರಿ ಆದಾಯ ನಿರೀಕ್ಷೆ ಮಾಡಲಾಗುತ್ತಿತ್ತು. ಮೈಸೂರು ದಸರಾ ಹಬ್ಬಕ್ಕೂ ಒಂದಿಷ್ಟು ನಿರ್ಬಂಧಗಳನ್ನು ಹೇರಿರುವುದರಿಂದಈ ಆದಾಯವೂ ಖೋತಾ ಆಗಿದೆ. ಜನರ ಮನಸ್ಥಿತಿ ನೋಡಿದರೆ ಈ ದೀಪಾವಳಿ ಹೆಚ್ಚುವರಿಆದಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎನ್ನುವುದುಅಧಿಕಾರಿಗಳು ಅಭಿಪ್ರಾಯವಾಗಿದೆ.
ಜನರ ಬೇಡಿಕೆಗೆ ತಕ್ಕಂತೆ ಬಸ್ ಗಳನ್ನು ಹೆಚ್ಚಿಸಲಾಗುತ್ತಿದೆ. ಬಸ್‌ಗಳ ಕಾರ್ಯಾಚರಣೆ ಹೆಚ್ಚಾಗುತ್ತಿದೆಯಾದರೂ ನಿರೀಕ್ಷೆಗೆ ಇನ್ನೂ ಸಾರಿಗೆ ಆದಾಯ ತಲುಪಿಲ್ಲ. ದೀಪಾವಳಿಗೆ ಹೆಚ್ಚುವರಿ ಕಾರ್ಯಾಚರಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಜನರ ಬೇಡಿಕೆಗೆ ತಕ್ಕಂತೆ ಅಗತ್ಯ ಮಾರ್ಗಗಳಲ್ಲಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುವುದು.–ನಿತಿನ ಹೆಗಡೆ, ಮುಖ್ಯ ಸಂಚಾರಿ ವ್ಯವಸ್ಥಾಪಕ
–ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.