ಮದ್ಯ ಸೇವಿಸಿ ಲಾರಿ ಚಾಲನೆ; ಚಾಲಕ ಪೊಲೀಸ್ ವಶಕ್ಕೆ
Team Udayavani, Jun 18, 2019, 1:33 PM IST
ಹುಬ್ಬಳ್ಳಿ: ಲಾರಿಯನ್ನು ಸಂಚಾರಿ ಪೊಲೀಸರೇ ಚಾಲನೆ ಮಾಡಿಕೊಂಡು ಹೋದರು.
ಹುಬ್ಬಳ್ಳಿ: ಮದ್ಯ ಸೇವಿಸಿ ಲಾರಿ ಚಾಲನೆ ಮಾಡುತ್ತಿದ್ದ್ದ ಚಾಲಕನು ಕರ್ತವ್ಯದಲ್ಲಿದ್ದ ಮಹಿಳಾ ಸಂಚಾರ ಪೇದೆ ಮಾತು ಕೇಳದೆ ಮುನ್ನುಗ್ಗಿದ್ದಲ್ಲದೆ, ಕೋರ್ಟ್ ವೃತ್ತದಲ್ಲಿ ಎರಡು ಬಾರಿ ರೌಂಡ್ ಚಲಾಯಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.
ಬಾಗಲಕೋಟೆ ತಾಲೂಕು ರಾಮತಾಳ ಗ್ರಾಮದ ಯಮನೂರ ಕೆ. ಗೌಡರ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಚನ್ನಮ್ಮ ವೃತ್ತದಿಂದ ಕ್ಲಬ್ ರಸ್ತ್ತೆ ಮಾರ್ಗವಾಗಿ ಬಾಗಲಕೋಟೆಗೆ ಹೊರಟಿದ್ದ. ಆದರೆ ದೇಸಾಯಿ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗ ಬಂದ್ ಆಗಿದೆ. ಕರ್ತವ್ಯದಲ್ಲಿದ್ದ ಮಹಿಳಾ ಸಂಚಾರ ಪೇದೆಯೊಬ್ಬರು ರಸ್ತೆ ಬಂದ್ ಆಗಿದೆ. ಸಾಯಿ ಮಂದಿರ ಮಾರ್ಗವಾಗಿ ಹೋಗಬೇಕು ಎಂದು ಹೇಳಿದರೂ ಕೇಳದೆ, ನೀವೆಲ್ಲ ರಸ್ತೆ ಬಂದ್ ಮಾಡಿಕೊಂಡರೆ ನಾವು ಹೋಗೋದು ಹೇಗೆ. ನಾನು ಹೀಗೆಯೇ ಹೋಗುತ್ತೇನೆ ಎಂದು ಕ್ಲಬ್ ರಸ್ತೆ ಮುಖಾಂತರ ಹೋಗಲುಮುಂದಾಗಿದ್ದಾನೆ. ಮತ್ತೆ ಮಹಿಳಾ ಪೇದೆಯು ವಾಹನ ತಡೆದಾಗ ಅಲ್ಲಿಯೇ ಕೋರ್ಟ್ ವೃತ್ತದಲ್ಲಿ ಲಾರಿಯನ್ನು ಎರಡು ರೌಂಡ್ ಸುತ್ತಾಡಿಸಿದ್ದಾನೆ. ಆಗ ಸ್ಥಳಕ್ಕೆ ಇನ್ನಿತರೆ ಸಂಚಾರ ಠಾಣೆ ಪೊಲೀಸರು ಆಗಮಿಸಿ ಆತನನ್ನು ತಡೆದಾಗ ಮದ್ಯ ಸೇವಿಸಿದ್ದು ಗೊತ್ತಾಗಿದೆ. ನಂತರ ಅವನನ್ನು ವಶಕ್ಕೆ ಪಡೆದು, ಲಾರಿಯನ್ನು ಹಿರಿಯ ಸಂಚಾರ ಪೇದೆ ಚಲವಾದಿ ಅವರು ಪೂರ್ವ ಸಂಚಾರ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಪೂರ್ವ ಸಂಚಾರ ಠಾಣೆಯಲ್ಲಿ ಯಮನೂರ ವಿರುದ್ಧ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್
Bantwala: ಮೆಲ್ಕಾರ್-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ
By Election: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ: ಸಲ್ಲಿಕೆಯಾಗದ ನಾಮಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.