ಶೋಷಣೆಗಳೇ ಕೃಷಿ ಸಂಕಷ್ಟಕ್ಕೆ ಕಾರಣ
Team Udayavani, Mar 26, 2017, 1:21 PM IST
ಧಾರವಾಡ: ಮಣ್ಣಿನ ಪೋಷಣೆ ಬದಲು ಅಧಿಕ ಇಳುವಳಿ ನೆಪದಲ್ಲಿ ಮಣ್ಣಿನ ಶೋಷಣೆಗಿಳಿದಿರುವುದೇ ಇಂದಿನ ಕೃಷಿ ಸಮಸ್ಯೆ-ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಹಾರಾಷ್ಟ್ರದ ಕನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಾವಯವ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಗೆ ಏನೆಲ್ಲ ಪೋಷಕಾಂಶ ಬೇಕು ಎಂದು ಕೇಳುತ್ತಿಲ್ಲ. ನಮಗಿಚ್ಚೆ ಬಂದ ರೀತಿಯಲ್ಲಿ ರಸಗೊಬ್ಬರ, ಕ್ರಿಮಿನಾಶಕ ಬಳಕೆ ಮಾಡುತ್ತಿದ್ದೇವೆ. ಒಂದು ರೀತಿಯಲ್ಲಿ ಭೂಮಿಯನ್ನು ಬೆದರಿಸಿ ಅದರಿಂದ ಫಸಲು ಪಡೆಯುವ ಯತ್ನಕ್ಕೆ ಮುಂದಾಗಿದ್ದೇವೆ. ಭೂಮಿಗೆ ನೀಡಿದ ರಸಗೊಬ್ಬರ ಕೇವಲ 80 ಗಂಟೆಗಳಲ್ಲಿ ವಿಷವಾಗಿ ಪರಿವರ್ತನೆಗೊಳ್ಳುತ್ತದೆ ಎಂದರು.
ದೇಶದಲ್ಲಿ ಸುಮಾರು 329 ದಶಲಕ್ಷ ಹೆಕ್ಟೇರ್ ಭೂಮಿಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಭೂಮಿಯಲ್ಲಿ ಸಾಗುವಳಿ ಮಾಡಲಾಗುತ್ತಿದೆ. ದೇಶದ ಜನಸಂಖ್ಯೆ 128 ಕೋಟಿಗೆ ಹೆಚ್ಚಿದೆ. ಆದರೆ, ಭೂಮಿ ಇರುವಷ್ಟೇ ಇದೆ. ಅದರಲ್ಲಿಯೇ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮಾರ್ಗ, ಸರೋವರಗಳು, ಕಾಲುವೆ, ಉದ್ಯಮ, ನಗರೀಕರಣ, ಹಳ್ಳಿಗಳ ಬೆಳವಣಿಗೆ ಮೂಲಕ ಸಾಗುವಳಿ ಭೂಮಿ ಕುಸಿದಿದೆ.
ಭೂಮಿಯಲ್ಲಿನ ಜೀವಾಣುಗಳು, ರೈತಮಿತ್ರ ಕೀಟಗಳು ನಾಶ ಮಾಡಿದ್ದೇವೆ. ದೇಸಿ ಹಸುವಿನ ಒಂದು ಗ್ರಾಂ ಸಗಣಿಯಲ್ಲಿ ಸುಮಾರು 200 ಕೋಟಿ ಜೀವಾಣುಗಳಿಗೆ ಅದು ಕಲ್ಚರ್ ಆಗಲಿದೆ. ಮುಖ್ಯವಾಗಿ ಸಾವಯವ ಕೃಷಿಗೆ ಪ್ರೇರಣೆ ಹೆಚ್ಚಬೇಕಿದೆ ಎಂದರು. ಕೊಲ್ಲಾಪುರ ಜಿಲ್ಲೆಯ ಸುಮಾರು 47 ಹಳ್ಳಿಗಳಲ್ಲಿ 2,500 ಎಕರೆ ಜಮೀನಿನಲ್ಲಿ ರೈತರು ಸಾವಯವ ಕೃಷಿ ಮಾಡಲು ಮುಂದಾಗಿದ್ದಾರೆ.
ಅದೇಷ್ಟೋ ಜನರು ಕೃಷಿಯ ಕನಿಷ್ಠ ಅನುಭವ ಇಲ್ಲದೆ ಕೃಷಿ ಕುರಿತು ಪುಸ್ತಕ ಬರೆಯುವ, ಗಂಟೆಗಟ್ಟಲೇ ಭಾಷಣ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಅಂಥವರನ್ನು ನಂಬಿ ರೈತರು ಸಂಕಷ್ಟ ಪಡುವುದು ಬೇಡ ಎಂದರು. ಶಿರಸಿಯ ಶಶಿಭೂಷಣ ಹೆಗಡೆ ಮಾತನಾಡಿ, ದೇಶದಲ್ಲಿ 17-18ನೇ ಶತಮಾನದವರೆಗೂ ಸಾವಯವ ಕೃಷಿ ಇತ್ತು.
ಹಸಿರು ಕ್ರಾಂತಿಯ ನಂತರದಲ್ಲಿ ಇದು ಕುಸಿಯುತ್ತ ಬಂದಿದೆ. ಅಮೆರಿಕಾದಲ್ಲಿ ಪ್ರತಿ ಕುಟುಂಬ ಸಾವಯವ ಉತ್ಪನ್ನಗಳಿಗಾಗಿ ಸುಮಾರು 300 ಡಾಲರ್ ವೆಚ್ಚ ಮಾಡಲಾಗುತ್ತಿದೆ. ಭಾರತದಲ್ಲಿ ಬೆಳೆಯುವ ಒಟ್ಟು ಸಾವಯವ ಉತ್ಪನ್ನಗಳಲ್ಲಿ ಶೇ.15ರಷ್ಟು ಪ್ರಮಾಣ ಮಾತ್ರ ದೃಢೀಕರಣ ಪಡೆಯುತ್ತಿದೆ. ಶೇ.16ರಷ್ಟು ರೈತರು ಸಾವಯವ ಕೃಷಿ ಅಳವಡಿಸಿಕೊಂಡಿದ್ದರೆ, ಶೇ.97ರಷ್ಟು ರೈತರಿಗೆ ಸಾವಯವ ಅರಿವು ಇದೆ.
ಶೇ.95ರಷ್ಟು ಗ್ರಾಹಕರು ಸಾವಯವ ಉತ್ಪನ್ನಗಳ ಮಹತ್ವದ ಅರಿವು ಇದೆ ಎಂದರು. ಧಾರವಾಡ ಕೃವಿವಿಯ ಡಾ| ಬಿ.ಎಸ್. ಜನಗೌಡರ ಅಧ್ಯಕ್ಷತೆ ವಹಿಸಿ, ಕೃಷಿ ವಿಶ್ವವಿದ್ಯಾಲಯದಿಂದ ಸಾವಯವ ಕೃಷಿ ಮೇಳ ಆಯೋಜನೆ ರಾಜ್ಯದಲ್ಲಿ ಇದೇ ಮೊದಲು. ಸಾವಯವ ನೀತಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಇದೆ. ವಿದೇಶಗಳಲ್ಲಿ ಸಾವಯವ ಕೃಷಿ ಉತ್ಪನ್ನಗಳಿಗೆ ಹೆಚ್ಚು ಮೌಲ್ಯ-ಬೆಲೆ ಇದೆ.
ಪ್ರಧಾನಿ ನರೇಂದ್ರ ಮೋದಿಯವರು ಸಾವಯವ ಕೃಷಿ ಉತ್ತೇಜನಕ್ಕೆ ಸುಮಾರು 500 ಕೋಟಿ ರೂ.ಗಳ ಅನುದಾನ ಘೋಷಿಸಿದ್ದಾರೆ. ಇದರಿಂದ ಇನ್ನಷ್ಟು ಉತ್ತೇಜನ ದೊರೆಯಲಿದೆ ಎಂದರು. ಡಾ| ವಿ.ಐ. ಬೆಣಗಿ ಮಾತನಾಡಿದರು. ಡಾ| ಎನ್.ಕೆ. ಬಿರಾದಾರ, ಛಾಯಾ ಬಡಿಗೇರ, ಕೃಷಿ ಜಂಟಿ ನಿರ್ದೇಶಕ ರುದ್ರೇಶ ಇದ್ದರು. ಎಲ್.ಎಚ್. ಮಲ್ಲಿಗವಾಡ ಸ್ವಾಗತಿಸಿದರು. ಎಸ್.ಎ.ಗದ್ದನಕೇರಿ ನಿರೂಪಿಸಿದರು. ವಿವಿಧ ಜಿಲ್ಲೆಗಳ ಸಾವಯವ ಉತ್ಪಾದಕರು ಮೇಳದಲ್ಲಿ ತಮ್ಮ ಉತ್ಪನ್ನಳಗೊಂದಿಗೆ ಪಾಲ್ಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.