ಇ-ಕ್ಷಣಕ್ಕೆ ಗ್ರಾಮೀಣದಲ್ಲಿ ಚಾಲನೆ


Team Udayavani, Jan 14, 2020, 10:30 AM IST

huballi-tdy-1

ಹುಬ್ಬಳ್ಳಿ: ಆದಾಯ, ಜಾತಿ, ರಹವಾಸಿ ಪ್ರಮಾಣ ಪತ್ರ ಪಡೆಯಲು ಇನ್ನು ಸರತಿಯಲ್ಲಿ ನಿಂತು ದಿನಗಟ್ಟಲೆ ಕಾಯುವ ಸ್ಥಿತಿ ಇಲ್ಲ. ಅರ್ಜಿ ಸಲ್ಲಿಸಿದ ನಂತರ 7 ದಿನ, 21 ದಿನ ಕಾಯಬೇಕಿಲ್ಲ. ಅರ್ಜಿ ಸಲ್ಲಿಸಿದ ಕ್ಷಣಾರ್ಧದಲ್ಲಿ ಈ ಎಲ್ಲ ದಾಖಲೆಗಳು ಕೈಗೆ ಸಿಗಲಿವೆ.

ಸಾರ್ವಜನಿಕರಿಗೆ ಶಿಕ್ಷಣ, ಉದ್ಯೋಗ, ಸರಕಾರದ ಯೋಜನೆಗಳನ್ನು ಪಡೆಯಲು ಬೇಕಾದ ಜಾತಿ, ಆದಾಯ ಹಾಗೂ ರಹವಾಸಿ ಪ್ರಮಾಣ ಪತ್ರಗಳಿಗೆ ಹಿಂದೆ ಅಟಲ್‌ ಜೀ ಜನಸ್ನೇಹಿ ಕೇಂದ್ರದಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅದು ಬರುವವರೆಗೆ ಕಾಯುವ ಸ್ಥಿತಿ ಇತ್ತು. ಆದರೆ, ಸರಕಾರದಿಂದ ಜಾರಿ ಮಾಡಿರುವ “ಇ-ಕ್ಷಣ’ ಯೋಜನೆಯಿಂದಾಗಿ ಕ್ಷಣಾರ್ಧದಲ್ಲಿ ಫಲಾನುಭವಿಗಳ ಕೈಗೆ ಸಿಗಲಿದೆ.

ಗ್ರಾಮೀಣ ಶೇ. 100 ಸಾಧನೆ: ಇ-ಕ್ಷಣ ಜಾರಿ ಮಾಡುವ ಉದ್ದೇಶದಿಂದ ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ಹಾಗೂ ಶಹರ ತಾಲೂಕಿನಡಿ ರಹವಾಸಿಗಳ ಎಲ್ಲ ದಾಖಲಾತಿಗಳನ್ನು ಕಲೆ ಹಾಕಲಾಗುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ ಹುಬ್ಬಳ್ಳಿ ಗ್ರಾಮೀಣ ಭಾಗದ 46 ಹಳ್ಳಿಗಳ 32,757 ಕುಟುಂಬಗಳ ದಾಖಲಾತಿ ಕಲೆ ಹಾಕಬೇಕಾಗಿದ್ದು, ಮೊದಲ ಹಂತದಲ್ಲಿ (16-11-2017ರಲ್ಲಿ) ಶೇ. 86.61ರಷ್ಟು ಅಂದರೆ 29,323 ಕುಟುಂಬಗಳ ದಾಖಲಾತಿ ಕಲೆ ಹಾಕಲಾಗಿದೆ. ಎರಡನೇ ಹಂತದಲ್ಲಿ (31-07-2019ರಲ್ಲಿ) ಇನ್ನುಳಿದ ಎಲ್ಲ ಕುಟುಂಬಗಳ ದಾಖಲಾತಿ ಕಲೆ ಹಾಕುವ ಮೂಲಕ ಹುಬ್ಬಳ್ಳಿ ಗ್ರಾಮೀಣ ತಾಲೂಕು ಇ-ಕ್ಷಣ ಯೋಜನೆಗೆ ಶೇ.100 ದಾಖಲಾತಿ ಕಲೆ ಹಾಕಿದೆ. ಗ್ರಾಮೀಣ ಭಾಗದ ಜನರಿಗೆ ಕ್ಷಣಾರ್ಧದಲ್ಲಿ ದಾಖಲಾತಿ ವಿತರಣೆಗೆ ಕ್ರಮ ತೆಗೆದುಕೊಂಡಿದೆ.

ಶಹರ ದಾಖಲಾತಿ ಪ್ರಗತಿಯಲ್ಲಿ: ಕಳೆದ ಎರಡು-ಮೂರು ತಿಂಗಳಿಂದ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಲಾಗಿದ್ದು, ಈಗಾಗಲೇ ಸುಮಾರು 38 ಸಾವಿರ ಜನರ ಮಾಹಿತಿ ಸಂಗ್ರಹ ಮಾಡಲಾಗಿದೆ. ಶಹರ ಮಟ್ಟದಲ್ಲಿ ಪಡಿತರ ಚೀಟಿ ಆಧಾರದ ಮೇಲೆ ಸುಮಾರು 4,83,299 ಜನ ಇದ್ದು, ಇವರ ಮಾಹಿತಿ ಕಲೆ ಹಾಕುವ ಕಾರ್ಯ ನಡೆಯುತ್ತಿದೆ. ಶಹರದಲ್ಲಿರುವ 67 ವಾರ್ಡ್‌ಗಳಲ್ಲಿ ಈಗಾಗಲೇ ದಾಖಲಾತಿ ಕಲೆ ಹಾಕುವ ಕೆಲಸ ನಡೆಯುತ್ತಿದ್ದು, ಅದಕ್ಕಾಗಿ 36 ಗ್ರಾಮಲೆಕ್ಕಾಧಿಕಾರಿ ಹಾಗೂ 36 ಜನ ಬಿಲ್‌ ಕಲೆಕ್ಟರ್‌ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರತಿ ಕುಟುಂಬದ ಮಾಹಿತಿ: ಇ-ಕ್ಷಣ ಯೋಜನೆಯಡಿ ಆದಾಯ, ಜಾತಿ, ರಹವಾಸಿ ದಾಖಲೆಗಳನ್ನು ಪಡೆಯಲು ಈಗಾಗಲೇ ಕುಟುಂಬಗಳ ದಾಖಲಾತಿ ಕಲೆ ಹಾಕಿದ್ದು, ಬೇಕಾದವರು ದಾಖಲಾತಿಗಳನ್ನು ಪಡೆಯಬಹುದಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಯಾರ ಹೆಸರ ಮೇಲೆ ದಾಖಲಾತಿಗಳು ಬೇಕಾಗಿರುವುದೋ ಅವರ ಹೆಸರ ಮೇಲೆ ಕ್ಲಿಕ್‌ ಮಾಡಿದಾಗ ದಾಖಲಾತಿಗಳು ಬರುತ್ತವೆ.

ಪಡಿತರ ಚೀಟಿ ಸಮಸ್ಯೆ: ಗ್ರಾಮೀಣ ಭಾಗದಲ್ಲಿ ಕೆಲವೊಂದು ಕಡೆ ಪಡಿತರ ಚೀಟಿ ಸಮಸ್ಯೆಗಳಿದ್ದು, ಕೆಲವೊಂದು ದಾಖಲಾತಿಗಳು ಕಲೆ ಹಾಕಲುಸಾಧ್ಯವಾಗಿಲ್ಲ. ನಂತರದ ದಿನಗಳಲ್ಲಿ ಅವುಗಳನ್ನು ಕಲೆ ಹಾಕುವ ಮೂಲಕ ಇ-ಕ್ಷಣಕ್ಕೆ ಜೋಡಣೆ ಮಾಡಲಾಗುತ್ತದೆ.

ಸಿಎಎ-ಎನ್‌ಆರ್‌ಸಿಯಿಂದ ಹಿನ್ನಡೆ :  ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಎನ್‌ಆರ್‌ಸಿ ಜಾರಿ ಕುರಿತು ಎದ್ದಿರುವ ಗೊಂದಲದಿಂದ ಮಾಹಿತಿ ಕಲೆ ಹಾಕುವವರಿಗೆ ಹಿನ್ನಡೆಯಾಗುತ್ತಿದೆ. ಇ-ಕ್ಷಣ ಮಾಹಿತಿಗೆ ಬೇಕಾದ ದಾಖಲಾತಿಗಳು ಹಾಗೂ ಮಾಹಿತಿ ಪಡೆಯಲು ಸಿಬ್ಬಂದಿ ಮನೆಗಳಿಗೆ ತೆರಳಿದರೆ ಸಾರ್ವಜನಿಕರು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

25 ರೂ.ಗೆ ದಾಖಲಾತಿ :  ಇ-ಕ್ಷಣ ಯೋಜನೆಯಡಿ ಆಲ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿಕೊಂಡು ದಾಖಲಾತಿಗಳನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದು. ಇ-ಕ್ಷಣ ಯೋಜನೆಯಡಿ ಆರಂಭದಲ್ಲಿ 15 ರೂ.ಗೆ ದಾಖಲಾತಿಗಳು ಸಿಗುತ್ತಿದ್ದವು, ಆದರೆ ಇದೀಗ ದರವನ್ನು 25 ರೂ.ಗೆ ಏರಿಕೆ ಮಾಡಲಾಗಿದೆ.

ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಇ-ಕ್ಷಣ ಮಾಹಿತಿ ಎಲ್ಲವೂ ಸಂಗ್ರಹ ಮಾಡಲಾಗಿದ್ದು, ಶೇ.100 ಗುರಿ ಸಾಧಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಕ್ಷಣಾರ್ಧದಲ್ಲಿ ದಾಖಲಾತಿಗಳನ್ನು ನೀಡಲು ಅನುಕೂಲವಾಗಿದೆ.  –ಪ್ರಕಾಶ ನಾಶಿ, ಗ್ರಾಮೀಣ ತಹಶೀಲ್ದಾರ್‌

 

 -ಬಸವರಾಜ ಹೂಗಾರ

ಟಾಪ್ ನ್ಯೂಸ್

Khnadre-Toxic

Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ

Sports

Sports; ‘ಟಾಪ್‌’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?

Nikhil-CPY

Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ

Voter-list

Voter List: ಕರಡು ಮತದಾರರ ಪಟ್ಟಿ ಪ್ರಕಟ: 221 ಕ್ಷೇತ್ರಗಳಲ್ಲಿ 5.44 ಕೋಟಿ ಮತದಾರರು

Karnataka: “ಹಲ್ಮಿಡಿ’ ಶಾಸನದ ಕಲ್ಲಿನ ಪ್ರತಿಕೃತಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಷ್ಠಾಪನೆ

Karnataka: “ಹಲ್ಮಿಡಿ’ ಶಾಸನದ ಕಲ್ಲಿನ ಪ್ರತಿಕೃತಿ ಎಲ್ಲ ಜಿಲ್ಲೆಗಳಲ್ಲಿ ಪ್ರತಿಷ್ಠಾಪನೆ

Dina Bhavishya

Daily Horoscope; ಶಾರೀರಿಕ ಶ್ರಮ ಮಾಡುವವರಿಗೆ ಆರೋಗ್ಯದ ಸಮಸ್ಯೆ, ಅಪವಾದದ ಭಯ

BYV-Hasan

Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್‌: ಬಿ.ವೈ.ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾವ ಕಾರಣಕ್ಕೂ ರೈತರ ಜಮೀನು ಮುಟ್ಟಲ್ಲ: ಜಮೀರ್‌ ಅಹ್ಮದ್

Waqf Land Issue; ಯಾವ ಕಾರಣಕ್ಕೂ ರೈತರ ಜಮೀನು ಮುಟ್ಟಲ್ಲ: ಜಮೀರ್‌ ಅಹ್ಮದ್

ವಕ್ಫ್ ಕಾನೂನು ತೆಗೆದು ಹಾಕುವುದೇ ಸೂಕ್ತ: ಸಚಿವ ಜೋಶಿ

Waqf Land Issue: ವಕ್ಫ್ ಕಾನೂನು ತೆಗೆದು ಹಾಕುವುದೇ ಸೂಕ್ತ: ಸಚಿವ ಜೋಶಿ

Hubballi: ವಕ್ಫ್ ಗೊಂದಲ ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ: ಶೆಟ್ಟರ್

Hubballi: ವಕ್ಫ್ ಗೊಂದಲ ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ: ಶೆಟ್ಟರ್

Aravind-Bellad

Waqf: ರೈತರ ಭೂಮಿ ಕಬಳಿಸಲು ವಕ್ಫ್ ಗೆ ಕಾಂಗ್ರೆಸ್‌ ಕುಮ್ಮಕ್ಕು: ಅರವಿಂದ್‌ ಬೆಲ್ಲದ

BJP: ಹೈಕಮಾಂಡ್‌ ಸೂಚಿಸಿರುವ ಅಭ್ಯರ್ಥಿ ಪರ ಕೆಲಸ: ನಿರಾಣಿ

BJP: ಹೈಕಮಾಂಡ್‌ ಸೂಚಿಸಿರುವ ಅಭ್ಯರ್ಥಿ ಪರ ಕೆಲಸ: ನಿರಾಣಿ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Khnadre-Toxic

Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ

Sports

Sports; ‘ಟಾಪ್‌’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?

Nikhil-CPY

Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ

Voter-list

Voter List: ಕರಡು ಮತದಾರರ ಪಟ್ಟಿ ಪ್ರಕಟ: 221 ಕ್ಷೇತ್ರಗಳಲ್ಲಿ 5.44 ಕೋಟಿ ಮತದಾರರು

Kumbra

Mangaluru: ಉಪಕರಣಗಳ ಸಹಿತ ಮೊಬೈಲ್‌ ಟವರ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.