ಕೃಷಿ ಉತ್ಪನ್ನ ಖರೀದಿಗಿನ್ನು ಇ-ಪಾವತಿ ಕಡ್ಡಾಯ


Team Udayavani, Jul 12, 2017, 12:41 PM IST

hub5.jpg

ಹುಬ್ಬಳ್ಳಿ: ಕೃಷಿ ಉತ್ಪನ್ನಗಳ ಖರೀದಿಗೆ ಕಡ್ಡಾಯವಾಗಿ ಇ-ಪಾವತಿ ಮೂಲಕ ಹಣ ನೀಡಿಕೆ ವ್ಯವಸ್ಥೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಇಲ್ಲಿನ ಅಮರಗೋಳದ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಜು.24ರಿಂದ ಜಾರಿಗೊಳಿಸಲು ಯೋಜಿಸಲಾಗಿದೆ. 

ಪ್ರಸ್ತುತ ರಾಜ್ಯದ ಬಹುತೇಕ ಎಪಿಎಂಸಿಗಳಲ್ಲಿ ವ್ಯಾಪಾರಸ್ಥರು ರೈತರಿಂದ ಖರೀದಿಸುವ ಕೃಷಿ ಉತ್ಪನ್ನಗಳಿಗೆ ಶೇ.40ರಷ್ಟು ನಗದು ರೂಪದಲ್ಲಿ ಹಣ ನೀಡಿದರೆ, ಶೇ.50ರಷ್ಟು ಚೆಕ್‌ ಹಾಗೂ ಶೇ.10ರಷ್ಟು ಆರ್‌ಟಿಜಿಎಸ್‌, ಎನ್‌ಇಎಫ್‌ಟಿ ಸೇರಿದಂತೆ 10 ವಿವಿಧ ಬಗೆಯಲ್ಲಿ ಹಣ ಪಾವತಿಸುತ್ತಿದ್ದಾರೆ. ಕೃಷಿ ಉತ್ಪನ್ನಗಳ ಖರೀದಿ ವಹಿವಾಟು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇ-ಪಾವತಿ ವ್ಯವಸ್ಥೆ ಜಾರಿಗೆ ಸರಕಾರ ಮುಂದಾಗಿದೆ. 

ವ್ಯಾಪಾರಸ್ಥರು ರೈತರಿಂದ ಕೃಷಿ ಉತ್ಪನ್ನ ಖರೀದಿಸುವ ಮುನ್ನ ಅವರಿಗೆ ಮುಂಗಡವಾಗಿ ಹಣ ಕೊಟ್ಟಿದ್ದರೆ ಅಂತಹವರು ಲೇವಾ-ದೇವಿ ಪರವಾನಗಿ (ಮನಿ ಲ್ಯಾಂಡಿಂಗ್‌ ಲೆಸನ್ಸ್‌) ಸಂಖ್ಯೆ ಸಮೂದಿಸಬೇಕಾಗುತ್ತದೆ. ಆದರೆ ವ್ಯಾಪಾರಸ್ಥರು ಇದರಿಂದ ತಪ್ಪಿಸಿಕೊಳ್ಳಲು ರೈತರಿಂದ ಉತ್ಪನ್ನ ಖರೀದಿಸಿದ ಮೇಲೆ ಮುಂಗಡವಾಗಿ ನೀಡಿದ ಹಣ ಕಡಿತಗೊಳಿಸಿ ಉಳಿದ ಹಣಕ್ಕೆ ಚೆಕ್‌ ಅಥವಾ ಆರ್‌ಟಿಜಿಎಸ್‌ ಮೂಲಕ ನೀಡುತ್ತಿದ್ದಾರೆ. 

ಇಂತಹ ಕ್ರಮಗಳಿಂದ ಎಪಿಎಂಸಿ ಸೆಸ್‌ ಹಾಗೂ ಕರದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದ್ದು, ಅನ್ಯ ಮಾರ್ಗದಲ್ಲಿ ಸಾಗುವಂತಹ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಕೃಷಿ ಉತ್ಪನ್ನಗಳ ಖರೀದಿಗೆ ಇ-ಪಾವತಿ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ರೈತರಿಂದ ಖರೀದಿಸಿದ ದರಕ್ಕೆ ಅಷ್ಟು ಹಣವನ್ನು ಇ-ಪಾವತಿ ಮೂಲಕ ರೈತರ ಖಾತೆಗೆ ಜಮಾ ಮಾಡಬೇಕಿದೆ. 

ಈ ನಿಟ್ಟಿನಲ್ಲಿ ರೈತರು ಸಹ ಎಪಿಎಂಸಿಯಲ್ಲಿ ತಮ್ಮ ಹೆಸರು ನೋಂದಾಯಿಸಬೇಕಾಗುತ್ತದೆ. ಕೃಷಿ ಉತ್ಪನ್ನಗಳ ಖರೀದಿಗೆ ಇ-ಪಾವತಿ ಕಡ್ಡಾಯ ಜಾರಿ ಕುರಿತಾಗಿ ಎಪಿಎಂಸಿ ಆಡಳಿತ ಮಂಡಳಿ ಈಗಾಗಲೇ ವ್ಯಾಪಾರಸ್ಥರೊಂದಿಗೆ ಸಮಾಲೋಚಿಸಿದ್ದು, ವ್ಯಾಪಾರಸ್ಥರು ವಹಿವಾಟಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕೇವಲ ಹುಬ್ಬಳ್ಳಿ ಮಾತ್ರ ಈ ವ್ಯವಸ್ಥೆ ಜಾರಿ ಬದಲು ರಾಜ್ಯದ ಎಲ್ಲ ಎಪಿಎಂಸಿಗಳಲ್ಲೂ ಇದನ್ನು ಜಾರಿಗೊಳಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಇ-ಪಾವತಿ ಜಾರಿ ನಿಟ್ಟಿನಲ್ಲಿ ಐಸಿಐಸಿಐ ಬ್ಯಾಂಕ್‌ ನಲ್ಲಿ ಎಲ್ಲ 1218 ವ್ಯಾಪಾರಸ್ಥರ ವರ್ಚುವಲ್‌ ಖಾತೆಯನ್ನು ತೆರೆಯಲಾಗಿದೆ. ಈ ಕುರಿತು ಬ್ಯಾಂಕ್‌ ಹಾಗೂ ವ್ಯಾಪಾರಸ್ಥರ ನಡುವೆ ಹಲವು ಬಾರಿ ಸಭೆಗಳು ನಡೆದಿವೆ. ಆದರೆ ವ್ಯಾಪಾರಸ್ಥರು ಮಾತ್ರ ಇ-ಪೇಮೆಂಟ್‌ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಿ ನಮ್ಮ ಮೇಲೆ ಮಾತ್ರ ಪ್ರಯೋಗ ಮಾಡಬೇಡಿ ಎಂಬ ಆಕ್ಷೇಪ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ವ್ಯಾಪಾರಸ್ಥರ ಆಕ್ಷೇಪದ ನಡುವೆಯೂ ಜು.24ರಂದು ಇ-ಪಾವತಿ ವ್ಯವಸ್ಥೆ ಜಾರಿಗೆ ಎಪಿಎಂಸಿ ಮುಂದಾಗಿದೆ.

ರೈತರಿಗೆ ಉಚಿತ ನೋಂದಣಿ: ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಲು ಕಡ್ಡಾಯವಾಗಿ ತಮ್ಮ ಹೆಸರು ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ. ಅದಕ್ಕಾಗಿ ಎಪಿಎಂಸಿ ಉಚಿತವಾಗಿ ರೈತ ನೋಂದಣಿ ಮಾಡುತ್ತಿದೆ.

 ಒಮ್ಮೆ ರೈತರು ಯಾವುದೇ ಎಪಿಎಂಸಿಯಲ್ಲೂ ತಮ್ಮ ಹೆಸರು ನೋಂದಣಿ ಮಾಡಿದರೆ ಅದರ ಸದುಪಯೋಗ ರಾಜ್ಯಾದ್ಯಂತ ಅನ್ವಯಿಸುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ರಾಜ್ಯಾದ್ಯಂತ ಯಾವುದೇ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ತಮ್ಮ ಉತ್ಪನ್ನಗಳಿಗೆ ಯಾವ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರೆಯುತ್ತದೆಯೋ ಅಲ್ಲಿ ಮಾರಾಟ ಮಾಡಬಹುದಾಗಿದೆ. 

ರೈತರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಲು ವಿಳಾಸ ಪುರಾವೆಯ ದಾಖಲೆಗಳಾದ ಆಧಾರ್‌, ಮತದಾರರ ಗುರುತಿನ ಚೀಟಿ, ಪಡಿತರ ಕಾರ್ಡ್‌, ವಾಹನ ಚಾಲನಾ ಪರವಾನಗಿ ಪತ್ರ, ವಿಸಾ ಸೇರಿದಂತೆ ಯಾವುದಾದರೂ ಒಂದು ಅಗತ್ಯ ದಾಖಲೆ ಒದಗಿಸಬೇಕಾಗುತ್ತದೆ. ಜೊತೆಗೆ ಐಪಿಎಸ್‌ಸಿ ಕೋಡ್‌ (ಸಂಕೇತ) ಇರುವ ಬ್ಯಾಂಕ್‌ ಖಾತೆಯ ಸಂಖ್ಯೆ, ದೂರವಾಣಿ ಇಲ್ಲವೆ ಮೊಬೈಲ್‌ ಸಂಖ್ಯೆ ನೀಡಬೇಕಾಗುತ್ತದೆ.

ಸದ್ಯ ಇವೆಲ್ಲದಕ್ಕೆ ಲಿಂಕ್‌ ಮಾಡಲು ಆಧಾರ ಕಾರ್ಡ್‌ ಸಹ ಕಡ್ಡಾಯವಾಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ 64,420 ರೈತ ಮತದಾರರು ಇದ್ದಾರೆ. ಅವರಲ್ಲಿ ಈಗಾಗಲೇ 37,526 ರೈತರು ಮಾತ್ರ ರೈತ ನೋಂದಣಿ ಮಾಡಿಸಿಕೊಂಡಿದ್ದಾರೆ. 

* ಶಿವಶಂಕರ ಕಂಠಿ 

ಟಾಪ್ ನ್ಯೂಸ್

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.