ಸಮಗ್ರ ತ್ಯಾಜ್ಯ ನಿರ್ವಹಣಾ ಯೋಜನೆಗೆ ಗ್ರಹಣ
Team Udayavani, Jul 17, 2019, 9:36 AM IST
ಹುಬ್ಬಳ್ಳಿ: ಬೆಂಗೇರಿಯಲ್ಲಿ ಅರ್ಧಕ್ಕೆ ನಿಂತಿರುವ ಕಾಂಪ್ಯಾಕ್ಟ್ ಸ್ಟೇಶನ್ ನಿರ್ಮಾಣ.
ಹುಬ್ಬಳ್ಳಿ: ಮಹಾನಗರ ಪಾಲಿಕೆ ರೂಪಿಸಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಯೋಜನೆಗೆ ಆರಂಭಿಕ ಹಿನ್ನಡೆಯಾಗಿದೆ. ಕಾಂಪ್ಯಾಕ್ಟ್ ಸ್ಟೇಶನ್ ನಿರ್ಮಾಣಕ್ಕೆ ಜನರ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೆಲವೆಡೆ ಜನಪ್ರತಿನಿಧಿಗಳೂ ಧ್ವನಿಗೂಡಿಸಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಮಹಾನಗರದ ಘನತ್ಯಾಜ್ಯ ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಸಮಗ್ರ ಘನತ್ಯಾಜ್ಯ ವಿಲೇವಾರಿ ಯೋಜನೆ ರೂಪಿಸಿದೆ. ಹುಬ್ಬಳ್ಳಿಯಲ್ಲಿ 4 ಹಾಗೂ ಧಾರವಾಡದಲ್ಲಿ 2 ಕಾಂಪ್ಯಾಕ್ಟ್ ಸ್ಟೇಶನ್ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಸ್ಟೇಶನ್‌ಗಳಲ್ಲಿರುವ ಕಂಟೇನರ್‌ಗಳಿಗೆ ಕಸ ಸುರಿಯುವುದರಿಂದ ಎಲ್ಲ ಟಿಪ್ಪರ್‌ಗಳು ಅಂಚಟಗೇರಿ ಕಸಮಡ್ಡಿಗೆ ಹೋಗುವ ಅಗತ್ಯವಿಲ್ಲ. ಇದರಿಂದ ಸಮಯ ಹಾಗೂ ಇಂಧನ ಉಳಿಯುತ್ತದೆ ಎಂಬುದು ಯೋಜನೆ ಪ್ರಮುಖ ಉದ್ದೇಶವಾಗಿದೆ.
ಜನ-ಪ್ರತಿನಿಧಿಗಳ ವಿರೋಧ: ಜನರ ವಿರೋಧಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಧ್ವನಿಗೂಡಿಸುತ್ತಿರುವುದು ಪಾಲಿಕೆ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ಪಾಲಿಕೆ ಚುನಾವಣೆ ಹತ್ತಿರವಾಗುತ್ತಿದ್ದು, ಯಾವ ಸದಸ್ಯರು ಯೋಜನೆ ಪರವಾಗಿ ಮಾತನಾಡುತ್ತಿಲ್ಲ. ಜನರಿಗೆ ಬೇಡವಾದರೆ ಯಾಕೆ ಈ ಯೋಜನೆ ಎನ್ನುವ ಮನಸ್ಥಿತಿಗೆ ಪಾಲಿಕೆ ಕೆಲ ಮಾಜಿ ಸದಸ್ಯರು ಬಂದಂತಿದೆ. ಮೇಲಿಂದ ಮೇಲೆ ಆಗುತ್ತಿರುವ ಪಾಲಿಕೆ ಆಯುಕ್ತರ ವರ್ಗಾವಣೆಯೂ ಯೋಜನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
2018ರ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಕಾಂಪ್ಯಾಕ್ಟ್ ಸ್ಟೇಷನ್ ಪೂರ್ಣಗೊಂಡಿತ್ತು. ಇದರ ಆಧಾರದ ಮೇಲೆ 2019 ಜೂನ್ ಅಂತ್ಯಕ್ಕೆ ಎಲ್ಲ ಸ್ಟೇಷನ್‌ಗಳು ಪೂರ್ಣಗೊಂಡು ಕಾರ್ಯಾರಂಭವಾಗಲಿವೆ ಎನ್ನುವ ನಿರೀಕ್ಷೆ ಇತ್ತು. ಆದರೆ ಜನರ ತೀವ್ರ ವಿರೋಧದಿಂದ ಅಸಾಧ್ಯ ಎನ್ನುವಂತಾಗಿದೆ. ಸಾಕಷ್ಟು ಬಾರಿ ಸ್ಥಳೀಯರನ್ನು ಮನವೊಲಿಸುವ ಕಾರ್ಯವಾಗಿದ್ದು, ಯಾವುದಕ್ಕೂ ಒಪ್ಪದ ಹಿನ್ನೆಲೆಯಲ್ಲಿ ಕೊನೆಯ ಅಸ್ತ್ರವಾಗಿ ಪೊಲೀಸರ ನೆರವಿನೊಂದಿಗೆ ಯೋಜನೆ ಅನುಷ್ಠಾನ ಅನಿವಾರ್ಯ ಎನ್ನುವ ಅಭಿಪ್ರಾಯ ಅಧಿಕಾರಿಗಳದ್ದಾಗಿದೆ.
ಕಾಂಪ್ಯಾಕ್ಟ್ ಸ್ಟೇಶನ್ ನಿರ್ಮಾಣ ಮಾಡುವುದರಿಂದ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಟಿಪ್ಪರ್‌ನಿಂದ ನೇರವಾಗಿ ದೊಡ್ಡ ಕಂಟೇನರ್‌ಗೆ ಹಾಕಿ ಅಲ್ಲಿಂದ ಅಂಚಟಗೇರಿ ಕಸಮಡ್ಡಿಗೆ ಸಾಗಿಸುವುದರಿಂದ ಕಸ ಹಾಕುವ ಪ್ರಶ್ನೆಯಿಲ್ಲ. ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದರಿಂದ ವಾಸನೆ ಸೇರಿದಂತೆ ಯಾವ ಸಮಸ್ಯೆ ಇರುವುದಿಲ್ಲ. ಮಹಾನಗರ ಅಭಿವೃದ್ಧಿಗೆ ಜನರು ಸಹಕಾರ ನೀಡಬೇಕು.• ಆರ್. ವಿಜಯಕುಮಾರ, ಕಾರ್ಯನಿರ್ವಾಹಕ ಎಂಜಿನಿಯರ್, ಘನತ್ಯಾಜ್ಯ ನಿರ್ವಹಣೆ
ಜನನಿಬಿಡ ಪ್ರದೇಶದಲ್ಲಿ ಸ್ಟೇಶನ್ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಪಾಲಿಕೆ ಅಧಿಕಾರಿಗಳು ಹೇಳಿದಂತೆ ನಡೆದುಕೊಳ್ಳುವುದಿಲ್ಲ. ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ನಗರದ ಹೊರೆಗೆ ಸ್ಟೇಶನ್ ನಿರ್ಮಿಸಿರುವುದು ಸೂಕ್ತ.• ಪರಮೇಶಪ್ಪ ಸಿಂದಗಿ,ಬೆಂಗೇರಿ ನಿವಾಸಿ
•ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.