ಪೂರ್ಣ ಜ್ಞಾನ ಪಡೆಯುವುದೇ ಶಿಕ್ಷಣ
Team Udayavani, Jun 8, 2018, 4:57 PM IST
ಧಾರವಾಡ: ಶಿಕ್ಷಣ ಇಂದಿನ ಅನಿವಾರ್ಯವಾಗಿದ್ದು, ಪರಿಪೂರ್ಣ ಜ್ಞಾನ ಪಡೆಯುವುದೇ ಶಿಕ್ಷಣವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿಯ ಮೃತ್ಯುಂಜಯ ನಗರದಲ್ಲಿ ಜೆಎಸ್ ಎಸ್ ಶಿಕ್ಷಣ ಸಂಸ್ಥೆ ನೂತನವಾಗಿ ಪ್ರಾರಂಭಿಸಿದ ಪದವಿ ಪೂರ್ವ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ನೀಡುವುದರ ಜೊತೆಗೆ ಶ್ರದ್ಧೆಯಿಂದ ದುಡಿಯುವ ಮನೋಭಾವದಿಂದ ಶಿಕ್ಷಣ ಸಂಸ್ಥೆಗಳು ಹೆಸರು ಗಳಿಸಲು ಸಾಧ್ಯವಿದೆ ಎಂದರು. ಮುರುಘಾಮಠದ ಪೂಜ್ಯರ ಆಶೀರ್ವಾದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಮೇಲೆ ಸದಾಕಾಲ ಇದ್ದೇ ಇದೆ. ಇದರೊಂದಿಗೆ ಸಂಸ್ಥೆಯ ಬೆಳವಣಿಗೆಯಲ್ಲಿ ವಜ್ರಕುಮಾರ ಅವರ ಸೇವೆ ಶ್ಲಾಘನೀಯ. ದಾನಿಗಳಾದ ದಾಸನಕೊಪ್ಪ ಅವರು ಭೂಮಿ ನೀಡಿದ್ದು. ಈ ಭಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆಯಲು ಅನುಕೂಲವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕಳೆದ 45 ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಧಾರವಾಡಕ್ಕೆ ಆಗಮಿಸಿ ಆರ್ಥಿಕವಾಗಿ ದುರ್ಬಲವಾಗಿದ್ದ ಜನತಾ ಶಿಕ್ಷಣ ಸಮಿತಿಯನ್ನು ತೆಗೆದುಕೊಳ್ಳುವ ಪೂರ್ವದಲ್ಲಿ ಮುರುಘಾಮಠಕ್ಕೆ ಆಗಮಿಸಿ, ಮಹಾಂತಪ್ಪಗಳ ದರ್ಶನ ಪಡೆದದ್ದು ಒಂದು ಯೋಗಾಯೋಗ ಎಂದರು. ಇದೇ ಸಂದರ್ಭದಲ್ಲಿ ಗ್ರಂಥಾಲಯ ಭವನದ ದಾನಿಗಳಾದ ಅಕ್ಕಮಹಾದೇವಿ ಕವಳಿ ಅವರನ್ನು ಸನ್ಮಾನಿಸಲಾಯಿತು. ಡಾ|ನ. ವಜ್ರಕುಮಾರ ಪ್ರಾಸ್ತಾವಿಕ ಮಾತನಾಡಿದರು.ಡಾ|ಯಶೋವರ್ಮ, ಜೀವಂಧರಕುಮಾರ, ಕೆಮೂ¤ರ ಇದ್ದರು. ಡಾ|ಅಜಿತ ಪ್ರಸಾದ ಸ್ವಾಗತಿಸಿದರು. ಡಾ| ಜಿನದತ್ತ ಹಡಗಲಿ ನಿರೂಪಿಸಿದರು. ಮಹಾವೀರ ಉಪಾಧ್ಯೆ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.