ರಾಜ್ಯ ಸರಕಾರಿ ನೌಕರರ ಜಿಲ್ಲಾ ಘಟಕಕ್ಕೆ ಚುನಾವಣೆ
•62ರಲ್ಲಿ 48 ಸ್ಥಾನಕ್ಕೆ ಅವಿರೋಧ ಆಯ್ಕೆ •14 ಸ್ಥಾನಕ್ಕಾಗಿ 10 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ •2019-2024ರ ಅವಧಿಗಾಗಿ ಆಯ್ಕೆ
Team Udayavani, Jun 14, 2019, 11:00 AM IST
ಧಾರವಾಡ: ಚುನಾವಣೆಯಲ್ಲಿ ಆಯ್ಕೆಗೊಂಡವರ ಸಂಭ್ರಮ.
ಧಾರವಾಡ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಇಲಾಖಾವಾರು 2019-2024ರ ಅವಧಿಗಾಗಿ ಗುರುವಾರ ಶಾಂತಿಯುತ ಚುನಾವಣೆ ನಡೆಯಿತು.
ನಗರದ ಜಿಲ್ಲಾ ನೌಕರರ ಭವನದಲ್ಲಿ ಬೆಳಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರ ನೌಕರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಜಿಲ್ಲಾ ಘಟಕದ ವ್ಯಾಪ್ತಿಯಲ್ಲಿ 62 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ಈ ಪೈಕಿ 48 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿವೆ. ಉಳಿದ 14 ಸ್ಥಾನಗಳಿಗೆ ಚುನಾವಣೆ ಜರುಗಿತು. ನೌಕರರ ಭವನದಲ್ಲಿ ನಿರ್ಮಿಸಲಾಗಿದ್ದ ಒಟ್ಟು 10 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಅದೇ ಮತಗಟ್ಟೆಗಳಲ್ಲಿ ಮತ ಎಣಿಕೆ ಕಾರ್ಯ ಜರುಗಿ ಫಲಿತಾಂಶ ಪ್ರಕಟಗೊಂಡಿದೆ.
ಗೆದ್ದವರು: ಲೋಕೋಪಯೋಗಿ ಇಲಾಖೆ-ಬಿ.ಎಸ್. ಪಾಟೀಲ; ಪಶುಸಂಗೋಪನೆ-ಕೆ.ಎಂ. ಇಜಾರಿ; ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ-ದೇವಿದಾಸ ಶಾಂತಿಕರ, ಎ.ಎ. ಅಳವಂಡಿ, ಆರ್.ಇ. ಕೊಟಬಾಗಿ; ಸರಕಾರಿ ಕಿರಿಯ ಕಾಲೇಜುಗಳು-ಸಿ.ಬಿ. ವಜ್ರಮಟ್ಟ; ನೀರಾವರಿ ಇಲಾಖೆ-ರವಿಕುಮಾರ; ಸರಕಾರಿ ಮುದ್ರಣಾಲಯ-ಎಸ್.ಎಚ್. ಶಿವರಾಜ; ಅರಣ್ಯ-ಭರತೇಶ ಮುಗದಮ್ಮ; ಪ್ರಾಥಮಿಕ ಶಾಲೆಗಳು(ಧಾರವಾಡ ಶಹರ)-ರಮೇಶ ಲಿಂಗದಾಳ, ಪಿ.ಎಫ್. ಗುಡೇನಕಟ್ಟಿ; ಪ್ರಾಥಮಿಕ ಶಾಲೆಗಳು(ಧಾರವಾಡ ಗ್ರಾಮೀಣ)-ಸಿ.ವೈ. ತಿಗಡಿ, ಎಸ್.ಎಸ್. ಗಟ್ಟಿ; ಜಿಲ್ಲಾಸ್ಪತ್ರೆ-ರಾಜೇಶ ಕೋನರಡ್ಡಿ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆ: ಕೃಷಿ ಇಲಾಖೆ-ರಾಜಶೇಖರ ಬಾಣದ, ಎ.ಎ. ಪೋಲಿಸ್‌ಪಾಟೀಲ; ಕಂದಾಯ ಇಲಾಖೆ-ಕುಮಾರ ಪಡೆಪ್ಪನವರ, ಎಂ.ಜಿ. ಸೊಲಗಿ, ಕೆ. ಶ್ರೀಧರ; ತಾಂತ್ರಿಕ, ಭೋಧಕೇತರ ಶಿಕ್ಷಣ ಇಲಾಖೆ-ಗಿರೀಶ ಚೌಡಕಿ; ಆಹಾರ ಮತ್ತು ನಾಗರಿಕ ಸರಬರಾಜು-ಎನ್.ಜಿ. ಹಿರೇಮಠ; ಆರ್ಥಿಕ ಮತ್ತು ಸಾಂಖ್ಯೀಕ ಇಲಾಖೆ-ಆರ್.ಎಮ್. ಕಂಟೆಪ್ಪಗೌಡರ; ವಾಣಿಜ್ಯ ತೆರಿಗೆ ಇಲಾಖೆ-ಎಸ್.ಎಸ್. ಸೊಪ್ಪಿನ, ಎನ್.ಜಿ ಸುಬ್ಟಾಪುರಮಠ; ಸಹಕಾರ ಇಲಾಖೆ-ಎ.ಕೆ. ಜೋಶಿ; ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಇಲಾಖೆ-ಪ್ರತಿಭಾ ಡಿ. ರಾಣೆ; ಜಿಪಂ ಎಂಜಿನಿಯರಿಂಗ್-ಸುಜಾತಾ ಬಡ್ಡಿ; ಜಿಪಂ-ಸಂಗಮೇಶ ಬಾವಿಕಟ್ಟಿ ಆಯ್ಕೆ ಆಗಿದ್ದಾರೆ.
ಅಬಕಾರಿ ಇಲಾಖೆ-ವಿನಯ ಮೂಶಣ್ಣವರ; ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ-ಆನಂದ ಪಾಟೀಲ; ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ರಾಜಕುಮಾರ ಶಿರೋಳ; ಮೀನುಗಾರಿಕೆ ಇಲಾಖೆ-ದೇವರಾಜ ಐರಣಿ; ಮಾನಸಿಕ ಆಸ್ಪತ್ರೆ-ಯೋಗೇಶಕುಮಾರ; ಆಯುಷ್ಯ ಮತ್ತು ಇಎಸ್‌ಐ-ಹನಮಂತ ಮೇಟಿ; ತೋಟಗಾರಿಕೆ ಇಲಾಖೆ-ಶಿವಾನಂದ ಪಾಟೀಲ; ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ-ಶಿವಾಜಿ ಜೋಗಣ್ಣವರ; ವಾರ್ತಾ ಮತ್ತು ಪ್ರವಾಸೋದ್ಯಮ-ಸುರೇಶ ಹಿರೇಮಠ; ಯುವಜನ ಸೇವೆ, ಗ್ರಂಥಾಲಯ-ಅಡಿವೆಪ್ಪ ಗಾಯಕವಾಡ; ಕರ್ನಾಟಕ ಸರ್ಕಾರಿ ವಿಮಾ ಇಲಾಖೆ-ಲಕ್ಷ್ಮಣ ರಜಪೂತ;, ಪ್ರೌಢಶಾಲೆಗಳು-ಎಫ್.ವಿ. ಮಂಜಣ್ಣವರ, ಎಚ್.ಬಿ. ದಳವಾಯಿ; ಪದವಿ ಕಾಲೇಜುಗಳು-ವೈ.ಬಿ. ಕಟ್ಟೇಕರ; ಮಾರುಕಟ್ಟೆ ಎಪಿಎಂಸಿ-ಶ್ರೀಧರ ಮಣ್ಣೂರ; ಗಣಿ ಮತ್ತು ಭೂವಿಜ್ಞಾನ ಅಂತರ್ಜಲ-ಆರ್.ಎಂ. ಹಿರೇಗೌಡರ ಆಯ್ಕೆಗೊಂಡಿದ್ದಾರೆ.
ಮೋಟಾರು ವಾಹನ(ಆರ್‌ಟಿಒ) ಇಲಾಖೆ-ಶಿವಾನಂದ ತುಪ್ಪದ; ಪೊಲೀಸ್ ಆಡಳಿತ, ಗೃಹ ರಕ್ಷಕ-ಎಂ.ಎಂ. ಗಿಡಗಂಟಿ; ರೇಷ್ಮೆ ಇಲಾಖೆ-ಎಂ.ಪಿ ಹುಡೇದ; ರಾಜ್ಯ ಲೆಕ್ಕಪತ್ರ ಇಲಾಖೆ-ಎನ್.ಜಿ ಸರಾಫ್; ಭೂಮಾಪನ ಕಂದಾಯ ವ್ಯವಸ್ಥೆ-ಎಸ್.ಎಫ್ ಸಿದ್ಧನಗೌಡರ; ಎನ್‌ಸಿಸಿ ಮತ್ತು ಕಾರಾಗೃಹ-ವಿ.ಬಿ. ಕುರುಬೆಟ್; ಮುಂದ್ರಾಂಕಗಳ ನೋಂದಣಿ-ಸುರೇಶ ಕುರ್ತಕೋಟಿ; ಸಣ್ಣ ಉಳಿತಾಯ, ಖಜಾನೆ ಇಲಾಖೆ-ಅಮಿತಕುಮಾರ ಕಲ್ಯಾಣಶೆಟ್ಟರ; ಕಾರ್ಮಿಕ ಕಾರ್ಖಾನೆಗಳು, ಬಾಯ್ಲರ-ಭುವನೇಶ್ವರಿದೇವಿ ಕೋಟಿಮಠ; ನಗರ ಯೋಜನೆ, ನಗರ ಮಾಪನ-ಎಸ್.ಜಿ. ಐರಣಿ; ಉದ್ಯೋಗ ಮತ್ತು ತರಬೇತಿ ಇಲಾಖೆ-ಮಂಜುನಾಥ ಯಡಳ್ಳಿ; ಧಾರ್ಮಿಕ ದತ್ತಿ ಕಾನೂನು ಮಾಪನಾಶಾಸ್ತ್ರ, ಜಿಲ್ಲಾ ತರಬೇತಿ ಕೇಂದ್ರ-ಬಸವರಾಜ ಕುರಿಯವರ; ನ್ಯಾಯಾಂಗ ಇಲಾಖೆ-ಗಜಾನನ ಕಟಗಿ, ಶಿವಾನಂದ ಅಕ್ಕೋಜಿ; ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್-ನಾಗೇಶ ಬ್ಯಾಲಾಳ; ಅಲ್ಪಸಂಖ್ಯಾತರ ಇಲಾಖೆ-ಡಾ| ಅಬ್ದುಲ್ರಶೀದ ಮಿರ್ಜಣ್ಣವರ; ಲೋಕಾಯುಕ್ತ ಇಲಾಖೆ-ಶಿವಶಂಕರ ವಾಲೀಕಾರ; ಇತರೆ/ಉಚ್ಚ ನ್ಯಾಯಾಲಯ-ಮಂಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.