ತುಂಬಿದ ಹೆಚ್ಚುವರಿ ಹಣ ಮೇ ತಿಂಗಳ ಬಿಲ್‌ನಲ್ಲಿ ಹೊಂದಾಣಿಕೆ
Team Udayavani, May 22, 2020, 8:33 AM IST
ಹುಬ್ಬಳ್ಳಿ: ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಏಪ್ರಿಲ್ ತಿಂಗಳಲ್ಲಿ ಹಿಂದಿನ ಮೂರು ತಿಂಗಳ ಬಳಕೆಯ ಸರಾಸರಿ ಆಧಾರದ ಮೇಲೆ ವಿದ್ಯುತ್ ಬಿಲ್ ನೀಡಿದ್ದು, ಹೆಚ್ಚುವರಿಯಾಗಿ ತುಂಬಿದ ಹಣವನ್ನು ಮೇ ತಿಂಗಳ ಬಿಲ್‌ನಲ್ಲಿ ಕಡಿಮೆಗೊಳಿಸಲಾಗಿದೆ ಎಂದು ಹೆಸ್ಕಾಂ ಸ್ಪಷ್ಟಪಡಿಸಿದೆ.
ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಏಪ್ರಿಲ್ ತಿಂಗಳಲ್ಲಿ ಹಿಂದಿನ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಲ್ ನೀಡಲಾಗಿತ್ತು. ಆದರೆ ಮೇ ತಿಂಗಳ ಬಿಲ್‌ನ್ನು ಮೀಟರ್ ಓದಿ ನೀಡಿರುತ್ತಾರೆ. ಹೀಗಾಗಿ ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ ಪಾವತಿಸಿದ್ದಲ್ಲಿ ಮೇ ತಿಂಗಳ ಬಿಲ್‌ನಲ್ಲಿ ಕಡಿಮೆಗೊಳಿಸಿ ನೀಡಲಾಗಿದೆ. ಒಂದು ವೇಳೆ ಪಾವತಿ ಮಾಡಿರದಿದ್ದರೆ ಬಾಕಿ ಎಂದು ತೋರಿಸಿ ಸರಾಸರಿ ಮೇರೆಗೆ ನೀಡಿದ ಬಿಲ್‌ನ ಮೊತ್ತ ಕಳೆದು ರೀಡಿಂಗ್ ಬಿಲ್ ನೀಡಲಾಗಿದೆ. ಹೀಗಾಗಿ ಬಿಲ್‌ನಲ್ಲಿ ಯಾವುದೇ ಲೋಪಗಳು ಇರಲ್ಲ. ಲಾಕ್‌ಡೌನ್ ಅವಧಿ ಬೇಸಿಗೆ ಕಾಲವಾಗಿರುವುದರಿಂದ ಗ್ರಾಹಕರು ಮನೆಯಲ್ಲಿ ಲೈಟ್, ಫ್ಯಾನ್, ಕಂಪ್ಯೂಟರ್, ಟಿವಿ ಮತ್ತು ಹವಾನಿಯಂತ್ರಣ ವ್ಯವಸ್ಥೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿರುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಗೃಹ ವಿದ್ಯುತ್ ಬಳಕೆಯು ಸಾಮಾನ್ಯ ದಿನಗಳಿಗಿಂತ ಶೇ. 25-40 ಹೆಚ್ಚಾಗಿರುವುದು ಹಿಂದಿನ ವರ್ಷದ ಬಳಕೆಯ ದಾಖಲೆಗಳಿಂದ ತಿಳಿದು ಬಂದಿದೆ.
ಬಿಲ್‌ಗಳ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ತಮ್ಮ ವ್ಯಾಪ್ತಿಯ ಉಪವಿಭಾಗ ವ್ಯಾಪ್ತಿ ಅಧಿಕಾರಿಗಳನ್ನು ಸಂಪರ್ಕಿಸಿ ಇತ್ಯರ್ಥ ಪಡಿಸಿಕೊಳ್ಳಬೇಕು. ಪ್ರತಿ ಕಂದಾಯ ಉಪವಿಭಾಗದಲ್ಲಿ 2-3 ಸಿಬ್ಬಂದಿ ಇರುವ ಸೌಜನ್ಯ ಕೌಂಟರ್ ಗಳನ್ನು ತೆರೆಯಲಾಗಿದೆ. ಮೀಟರ್ ರೀಡಿಂಗ್ ತಪ್ಪುಗಳಿಂದ ಹಾಗೂ ಇನ್ನಿತರೆ ಕಾರಣಗಳಿಂದ ಬಿಲ್ ತಪ್ಪಾಗಿರುವುದು ಕಂಡು ಬಂದಲ್ಲಿ ಸರಿಪಡಿಸಿ ಪರಿಷ್ಕೃತ ಬಿಲ್ ನೀಡಲಾಗುವುದು. ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ಬಿಲ್ ಸರಿಪಡಿಸಿ ಪುನರ್ ವಿತರಿಸಲಾಗುವುದು. ಒಂದು ವೇಳೆ ನೀಡಿದ ವಿವರಣೆ ಸಮಂಜಸವೆನಿಸದಿದ್ದಲ್ಲಿ ತಮ್ಮ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)ರವರಿಗೆ ಅಥವಾ ವೃತ್ತ ಕಚೇರಿ ಅ ಧೀಕ್ಷಕ ಇಂಜಿನಿಯರ್ (ವಿ)ರವರ ಕಚೇರಿಗೆ ಭೇಟಿ ನೀಡಿ ಇತ್ಯರ್ಥಪಡಿಸಿಕೊಳ್ಳಬಹುದು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಉದ್ದೇಶ ಹೊಂದಿದ್ದು, ಗ್ರಾಹಕರು ಸಕಾಲಕ್ಕೆ ವಿದ್ಯುತ್ ಬಳಕೆ ಬಿಲ್ ಅನ್ನು ಪಾವತಿಸುವಂತೆ, ಗ್ರಾಹಕರಿಗೆ ಅನಗತ್ಯವಾಗಿ ಹೆಚ್ಚು ವಿದ್ಯುತ್ ಬಿಲ್ ನೀಡುತ್ತಿಲ್ಲ ಎಂದು ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.