ಸವಾಯಿ ಗಂಧರ್ವ ಕಲಾಭವನ ಉದ್ಘಾಟನೆಗೆ ವಿದ್ಯುತ್ ಶಾಕ್?
Team Udayavani, Jun 7, 2018, 4:57 PM IST
ಹುಬ್ಬಳ್ಳಿ: ಕಳೆದ ಆರು ವರ್ಷಗಳಿಂದ ನವೀಕರಣದ ಹಣೆಪಟ್ಟಿ ಕಟ್ಟಿಕೊಂಡ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನ ಸಾರ್ವಜನಿಕ ಬಳಕೆಗೆ ಇಲ್ಲವಾಗಿದೆ. ಭವನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಪಾಲಿಕೆ ಹಾಗೂ ಹೆಸ್ಕಾಂ ಅಧಿಕಾರಿಗಳ ಸಮನ್ವಯತೆ ಕೊರತೆ ಹಾಗೂ ವಿಳಂಬ ನೀತಿಯಿಂದ ಉದ್ಘಾಟನಾ ಭಾಗ್ಯ ಇಲ್ಲದಂತಾಗಿದೆ.
ನವೀಕರಣಕ್ಕಾಗಿ 2013ರಿಂದಲೇ ಭವನದ ಸಾರ್ವಜನಿಕ ಬಳಕೆ ಸ್ಥಗಿತಗೊಳಿಸಲಾಗಿತ್ತು. ಅಂದಾಜು 4 ಕೋಟಿ ರೂ.ವೆಚ್ಚದಲ್ಲಿ ನವೀಕರಣಗೊಳ್ಳುತ್ತಿರುವ ಭವನಕ್ಕೆ ವಿದ್ಯುತ್ ಸಂಪರ್ಕದ ಕಾರ್ಯವೇ ಉದ್ಘಾಟನೆಗೆ ಬಹುತೇಕ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ.
ಭವನದಲ್ಲಿ ಈಗಾಗಲೇ 475 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 6 ವಿವಿಐಪಿ ಆಸನಗಳು, 10 ವಿಐಪಿ ಆಸನಗಳನ್ನು ತರಿಸಲಾಗಿದೆ. ಇನ್ನುಳಿದಂತೆ ಭವನದಲ್ಲಿ ಕೇಂದ್ರೀಕೃತ ಹವಾ ನಿಯಂತ್ರಿತ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಇದಕ್ಕೆ ಬೇಕಾದ ಅಗತ್ಯ ಸಲಕರಣೆಗಳು ಬಂದಿದ್ದು ಅಳವಡಿಸಬೇಕಿದೆ. 200 ಕೆವಿ ಜನರೇಟರ್ ಬಂದಿದ್ದು ಅದರ ಅಳವಡಿಕೆ ಕೂಡಾ ಮಾಡಬೇಕಿದೆ.
ಭವನದಲ್ಲಿ ಕೆಳಭಾಗದಲ್ಲಿ 5 ಕೊಠಡಿಗಳು, ಮೇಲ್ಭಾಗದಲ್ಲಿ 1 ದೊಡ್ಡ ಹಾಲ್ ಹಾಗೂ 1ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಕೆಳಭಾಗದ ಎರಡು ಕೊಠಡಿಗಳು ಡೆಸ್ರಿಂಗ್ ಕೊಠಡಿಗಳಾಗಿದ್ದು, ಒಂದು ವಿವಿಐಪಿ ಕೊಠಡಿ ಇದೆ. ಕಲಾಭವನ ನವೀಕರಣಕ್ಕಾಗಿ ರಾಜ್ಯ ಸರಕಾರ ಪಾಲಿಕೆಗೆ ನೀಡುವ ವಿಶೇಷ ಅನುದಾನದಲ್ಲಿ 2ನೇ 100 ಕೋಟಿ ರೂ. ಅನುದಾನದಲ್ಲಿ 1.75 ಕೋಟಿ ಹಾಗೂ 3ನೇ 100 ಕೋಟಿ ರೂ. ಅನುದಾನದಲ್ಲಿ 1.5 ಕೋಟಿ ರೂ. ನೀಡಲಾಗಿದೆ. ಆರಂಭದಲ್ಲಿ ಕೆಲಸ ವಹಿಸಿಕೊಂಡಿದ್ದ ನಿರ್ಮಿತಿ ಕೇಂದ್ರ ತನ್ನ ಪಾಲಿನ ಕಾಮಗಾರಿ ಮುಕ್ತಾಯಗೊಳಿಸಿದೆ. ಬೆಂಗಳೂರಿನ ಕಲರ್ ವೈಬ್ರೇಷನ್ ಸಂಸ್ಥೆ ನಂತರದ ಕಾಮಗಾರಿ ಕೈಗೆತ್ತಿಕೊಂಡು ಆಸನ, ಹವಾ ನಿಯಂತ್ರಿತ ವ್ಯವಸ್ಥೆ, ಪ್ಲೋರಿಂಗ್, ಪ್ಲಾಸ್ಟರಿಂಗ್ ಹಾಗೂ ವಿದ್ಯುತ್ ಸೌಲಭ್ಯ ಅಳವಡಿಕೆ ಕಾರ್ಯ ನಡೆಸಬೇಕಿದೆ. ಇದರಲ್ಲಿ ಈಗಾಗಲೇ ಆಸನ ವ್ಯವಸ್ಥೆ ಹಾಗೂ ಸೌಂಡ್ ಸಿಸ್ಟಮ್ ವ್ಯವಸ್ಥೆ ಮಾಡಿದ್ದು, ಹವಾ ನಿಯಂತ್ರಿತ ಅಳವಡಿಸುವ ಕೆಲಸ ಬಾಕಿ ಇದೆ.
ಇನ್ನುಳಿದಂತೆ ಹೊರಾಂಗಣ ಕಾಮಗಾರಿ ಪಡೆದಿರುವ ಸ್ಥಳೀಯ ಎಸ್‌ಜಿಐ ಸಂಸ್ಥೆಯು ಫೇವರ್ ಕಾಮಗಾರಿ, ಗೇಟ್ ಅಳವಡಿಸುವ ಕಾಮಗಾರಿ ಸೇರಿದಂತೆ ಎಲ್ಲ ಕಾಮಗಾರಿ ಭರದಿಂದ ಮಾಡುತ್ತಿದೆ. ಫೇವರ್ ಕಾಮಗಾರಿ ಕೊನೆ ಹಂತದಲ್ಲಿದ್ದು ಗೇಟ್ ಅಳವಡಿಸುವ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎನ್ನುತ್ತಾರೆ ಸಿಬ್ಬಂದಿ.
ಕತ್ತಲಲ್ಲೇ ಉದ್ಘಾಟಿಸುತ್ತೇವೆ
ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಕಲಾಭವನದ ಕಾಮಗಾರಿ ಎಲ್ಲವೂ ಮುಕ್ತಾಯಗೊಂಡಿದ್ದು ಉದ್ಘಾಟನೆಗೆ ಸಿದ್ಧಗೊಂಡಿದೆ. ಆದರೆ ಪಾಲಿಕೆ ಅಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಇದುವರೆಗೂ ಭವನಕ್ಕೆ ವಿದ್ಯುತ್ ಅಳವಡಿಸುವ ಕೆಲಸ ಮಾಡಿಲ್ಲ. ಈ ಕುರಿತು ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅಂತಿಮವಾಗಿ ಅಧಿಕಾರಿಗಳಿಗೆ ಕತ್ತಲಲ್ಲೇ ಭವನ ಉದ್ಘಾಟಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡಲಾಗಿದೆ.
ವೀರಣ್ಣ ಸವಡಿ, ಪಾಲಿಕೆ ಸದಸ್ಯ
ಹೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ
ಈಗಾಗಲೇ ಸವಾಯಿ ಗಂಧರ್ವ ಕಲಾ ಭವನದ ಎಲ್ಲ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಮುಖ್ಯವಾಗಿ ವಿದ್ಯುತ್ ಕನೆಕ್ಷನ್ ಆಗಬೇಕಿದ್ದು ಈ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೇಳಿಕೊಳ್ಳಲಾಗುವುದು. ಅತೀ ಶೀಘ್ರದಲ್ಲೇ ಭವನದ ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು.
ಇಬ್ರಾಹಿಂ ಮೈಗೂರ, ಹು-ಧಾ
ಮಹಾನಗರ ಪಾಲಿಕೆ ಆಯುಕ್ತ
ಭವನದ ಹೊರಭಾಗದ ಅಲ್ಪ ಸ್ವಲ್ಪ ಕೆಲಸ ಬಾಕಿ ಉಳಿದಿದ್ದು ಫೇವರಸ್ ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಒಂದು ಭಾಗದ ಗೇಟ್ ಅಳವಡಿಕೆ ಬಾಕಿ ಇದ್ದು ಕೂಡಲೇ ಆ ಕೆಲಸ ಮಾಡಲಾಗುವುದು.
ಶಿವಯೋಗಿ ವಾಳದ,
ಸೈಟ್ ಇಂಜನಿಯರ್
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.