ವಾಣಿಜ್ಯೋದ್ಯಮಿ ಮದನ ದೇಸಾಯಿ ಇನ್ನಿಲ್ಲ
Team Udayavani, May 15, 2017, 3:24 PM IST
ಹುಬ್ಬಳ್ಳಿ: ನಗರದ ಖ್ಯಾತ ಉದ್ಯಮಿ, ದೇಸಾಯಿ ಆ್ಯಂಡ್ ಕಂಪನಿ ಸಮೂಹ ಸಂಸ್ಥೆಗಳ ಪಾಲುದಾರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಮದನ ಬಿಂದೂರಾವ್ ದೇಸಾಯಿ (70) ಶನಿವಾರ ಮಧ್ಯರಾತ್ರಿ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೌಟುಂಬಿಕ ಸಮಾರಂಭವೊಂದಕ್ಕೆ ಕೊಯಮತ್ತೂರಿಗೆ ತೆರಳಿದ್ದ ಮದನ ದೇಸಾಯಿ ಅವರು ಅಲ್ಲಿಯೇ ಅಸ್ವಸ್ಥರಾಗಿ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಸಹೋದರರು, ಅಪಾರ ಬಂಧು-ಬಳಗವಿದ್ದಾರೆ. 1947ರ ಅಕ್ಟೋಬರ್ 18ರಂದು ಜನಿಸಿದ್ದ ಮದನ ದೇಸಾಯಿ ಅವರು, ದೇಸಾಯಿ ಗ್ರುಪ್ ಕನ್ಸರ್ನ್ಸ್ದ ಮಸ್ಸೇ ಫರ್ಗುಸನ್ ಟ್ರಾಕ್ಟರ್ಸ್,
-ಬಜಾಜ್ ಟೆಂಪೊ ಮತ್ತು ಭಾರತ ಗ್ಯಾಸ್‌ನಲ್ಲಿ ಹಾಗೂ ಡೊವ್ ಗ್ಲೋಬಲ್ ಕಾರ್ಪೋರೇಶನ್, ಇಂಪೋರ್ಟ್ ಎಕ್ಸಪೋರ್ಟ್ ಲೆಸನ್ಸ್ ಪಾಲುದಾರರಾಗಿದ್ದರಲ್ಲದೆ, ವಿವಿಧ ಬ್ಯಾಂಕ್ ಹಾಗೂ ಹಣಕಾಸು ಕಂಪೆನಿಗಳಿಗೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಕೌಸಾಳಿ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ಲಯನ್ಸ್ ಜಿಲ್ಲಾ ಗವರ್ನರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
ಅಂತ್ಯಕ್ರಿಯೆ: ಮದನ ದೇಸಾಯಿ ಅವರ ಪಾರ್ಥಿವ ಶರೀರವನ್ನು ಕೊಯಿಮತ್ತೂರಿನಿಂದ ರವಿವಾರ ಸಂಜೆ 4:00 ಗಂಟೆ ಸುಮಾರಿಗೆ ಅವರ ಇಲ್ಲಿನ ದೇಸಾಯಿ ವೃತ್ತದಲ್ಲಿರುವ ನಿವಾಸಕ್ಕೆ ತರಲಾಯಿತು. ಕೇಂದ್ರ ಸಚಿವ ಎಚ್. ಅನಂತಕುಮಾರ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ,
-ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ವಿಧಾನಸಭೆ ಸದಸ್ಯ ಪ್ರಸಾದ ಅಬ್ಬಯ್ಯ, ಮಹಾಪೌರ ಡಿ.ಕೆ. ಚವ್ಹಾಣ, ವಾಣಿಜ್ಯೋದ್ಯಮ ಸಂಸ್ಥೆ ಸದಸ್ಯರು ಸೇರಿದಂತೆ ಆರ್‌ಎಸ್‌ಎಸ್, ಬಿಜೆಪಿ ಮುಖಂಡರು ಅಂತಿಮ ದರ್ಶನ ಪಡೆದರು. ಅನಂತರ ಕೇಶ್ವಾಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಸಂತಾಪ: ಮದನ ದೇಸಾಯಿ ಅವರ ನಿಧನಕ್ಕೆ ಸಂಸದ ಪ್ರಹ್ಲಾದ ಜೋಶಿ, ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್.ಪಾಟೀಲ, ಕಾಂಗ್ರೆಸ್ ಮುಖಂಡ ಎ.ಎಂ.ಹಿಂಡಸಗೇರಿ ಸಂತಾಪ ಸೂಚಿಸಿದ್ದಾರೆ.
ಶ್ರದ್ಧಾಂಜಲಿ ಸಭೆ: ಮದನ ದೇಸಾಯಿ ಅವರ ನಿಧನಕ್ಕೆ ಲ್ಯಾಮಿಂಗ್ಟನ್ ಶಾಲಾ ಸುಧಾರಣಾ ಸಮಿತಿ ಶ್ರದ್ಧಾಂಜಲಿ ಸಲ್ಲಿಸಿತು. ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರು ಮದನ ದೇಸಾಯಿ ಅವರ ಅಗಲಿಕೆಯಿಂದ ಸಮಾಜಕ್ಕೆ ಹಾನಿಯಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಕೆ.ಎಂ. ಪೈಕೋಟಿ, ಕಾರ್ಯದರ್ಶಿ ಡಾ| ಬಿ.ಎಲ್. ಪಾಟೀಲ, ಖಜಾಂಚಿ ದಿನೇಶ ಶೆಟ್ಟಿ, ಆಡಳಿತಾಧಿಕಾರಿ ಎಂ.ಬಿ. ನಾತು, ಮುರಳಿ ಕರ್ಜಗಿ, ವಾಸುದೇವ ಪಾಟೀಲ, ಶಶಿ ಸಾಲಿ ಮೊದಲಾದವರು ಸಂತಾಪ ಸೂಚಿಸಿ, ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ದೇವರಲ್ಲಿ ಪ್ರಾರ್ಥಿಸಿ ಮೌನ ಆಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.