ನೈಸರ್ಗಿಕ ಸಂಪನ್ಮೂಲ ದುರುಪಯೋಗ ಸಲ್ಲ
Team Udayavani, Apr 24, 2018, 5:04 PM IST
ಹುಬ್ಬಳ್ಳಿ: ಸ್ವಯಂಘೋಷಿತ ಬುದ್ಧಿಜೀವಿ ಮನುಷ್ಯನ ದುರಾಸೆಯಿಂದ ನೈಸರ್ಗಿಕ ಸಂಪನ್ಮೂಲಗಳ ದುರುಪಯೋಗವಾಗುತ್ತಿದೆ ಎಂದು ಅಗಸ್ತ್ಯ ವಿಜ್ಞಾನ ಕೇಂದ್ರದ ಮುಖ್ಯಸ್ಥ ಗುರು ಮದ್ನಳ್ಳಿ ವಿಷಾದ ವ್ಯಕ್ತಪಡಿಸಿದರು. ನಗರದ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದಿಂದ ವಿಶ್ವ ಭೂ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವಿಗಳ ಪೋಷಣೆಗೆ ಅಗತ್ಯವಿರುವುದೆಲ್ಲವೂ ಭೂಗ್ರಹದ ಮೇಲಿದೆ. ಮನುಕುಲ, ಜೀವಸಂಕುಲದ ಒಳಿತಿಗಾಗಿ ಸಂಪನ್ಮೂಲಗಳು ಬಳಕೆಯಾಗಬೇಕಿದೆ. ಭೂಮಿಯನ್ನು ಪ್ರದೂಷಣೆಯಿಂದ ರಕ್ಷಿಸಿ ಸಸಿನೆಟ್ಟು ಮರವಾಗಿ ಬೆಳೆಸಿ ಅಧಿಕ ಭೂ ತಾಪಮಾನದಿಂದ ಭೂಮಿ ರಕ್ಷಿಸುವ ಅನಿವಾರ್ಯತೆ ಇದೆ ಎಂದರು. ಚಿಗುರು ಉಚಿತ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ನಗರದ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಸಂಚರಿಸಿ ಪರಿಸರ ಕಾಳಜಿ ಕುರಿತು ಅರಿವು ಮೂಡಿಸಿದರು.
ಸಾರ್ವಜನಿಕರು ಹಾಗೂ ಕಾರ್ಮಿಕರ ಕೈಗೆ ಹಸಿರು ಬ್ಯಾಂಡ್ ಕಟ್ಟಿ, ಸಸಿಗಳನ್ನು ವಿತರಿಸಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ವಿಜ್ಞಾನ ಕೇಂದ್ರದಲ್ಲಿ ವಿಶ್ವ ಭೂದಿನ ನಿಮಿತ್ತ ಹಾಗೂ ಪರಿಸರ ರಕ್ಷಣೆ ಕುರಿತು ಪಿಪಿಟಿ ಪ್ರದರ್ಶಿಸಿ ವಿವರಿಸಲಾಯಿತು. ಕಾರ್ಯಕ್ರಮದಲ್ಲಿ ಮಂಜುನಾಥ ಜಾನಣ್ಣವರ, ಫಕ್ಕೀರೇಶ್ವರ ಮಡಿವಾಳರ, ಶಂಕರ ಕುರುಬರ, ಹನುಮಂತಪ್ಪ ಬಿ., ಶಶಿಕಲಾ ಗೌರಿ, ನಿವೇದಿತಾ ಜವಳಿಮಠ, ಸುಜಯ ಭೋಜಕರ, ನಿಂಗನಗೌಡ ಸತ್ತಿಗೌಡ್ರ, ಪುಂಡಲೀಕ ದೇವರಮನಿ, ದೀಪ್ತಿ ಗಾಯಕವಾಡ, ಬಸವರಾಜ ಮುದಗಲ್ಲ, ನಾರಾಯಣ ಚವ್ಹಾಣ, ಹನ್ನಿಫಾ ಗೋಟೇಗಾರ, ಜ್ಯೋತಿ ಕಾಪರೆ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.