ಯಡಿಯೂರಪ್ಪನವರ ಪಾಪದ ಕೆಲಸಗಳನ್ನು ಬೊಮ್ಮಾಯಿ ಮುಂದುವರಿಸಲೇಬೇಕಾಗಿದೆ : ಸಿದ್ದರಾಮಯ್ಯ
Team Udayavani, Aug 2, 2021, 3:00 PM IST
ಕಲಘಟಗಿ: ಬಳ್ಳಾರಿ ಹಾಗೂ ಈ ಭಾಗಗಳಲ್ಲಿನ ಬಡವರ ಹಾಗೂ ಶೋಷಿತರ ಪರವಾಗಿ ಸರಕಾರ ಮಾಡಬೇಕಾದ ಕೆಲಸ- ಕಾರ್ಯಗಳನ್ನು ಸ್ವಂತ ಹಣದಿಂದ ಮಾಡುತ್ತ ಜನಪ್ರಿಯತೆ ಹೊಂದಿರುವ ಸಂತೋಷ ಲಾಡ್ ತನಗೆ ಆಪ್ತಮಿತ್ರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಉತ್ತರ ಕನ್ನಡ ಜಿಲ್ಲೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ರವಿವಾರ ಸಂಜೆ ತೆರಳುವ ಮಾರ್ಗಮಧ್ಯೆ ಸಂತೋಷ ಲಾಡ್ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದರು. ಲಾಡ್ ಹೇಗೆ ಚುನಾವಣೆಯಲ್ಲಿ ಸೋತ ಎಂಬುದು ಪ್ರಶ್ನಾರ್ಥಕವಾಗಿದೆ. ಲಾಡ್‌ನ ಜಾತಿ ಬಡವರ ಜಾತಿ. ಸ್ವಂತ ಹಣದಿಂದ ಮತಕ್ಷೇತ್ರದ ಕಲಘಟಗಿ ಮತ್ತು ಅಳ್ನಾವರದಲ್ಲಿ ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ಮನೆ ಮನೆಗೆ ಉಚಿತವಾಗಿ ಅಕ್ಕಿ ನೀಡಿರುವುದಲ್ಲದೇ ಉಚಿತವಾಗಿ ಊಟ-ಉಪಾಹಾರ ನೀಡುವ ಕ್ಯಾಂಟೀನ್ ಆರಂಭಿಸಿದ್ದಾನೆ. ಉಚಿತ ಕೊಳವೆ ಬಾವಿ, ಉಚಿತ ಮದುವೆ ಮಾಡಿ ಜನಾನುರಾಗಿಯಾಗಿದ್ದಾನೆ ಎಂದರು.
ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಟಿಕೆಟ್ ಲಾಡ್ ಅವರಿಗೆ ನೀಡಬೇಕು ಎಂಬ ಕಾರ್ಯಕರ್ತರ ಘೋಷಣೆಗೆ ಉತ್ತರಿಸಿದ ಅವರು, ನಾವು ಯಾವುದೇ ಕ್ಷೇತ್ರದಲ್ಲಿಯೂ ಮುಂದಿನ ಅಭ್ಯರ್ಥಿ ಹೆಸರನ್ನು ಘೋಷಿಸಬಾರದೆಂದು ನಿರ್ಧರಿಸಿದ್ದೇವೆ. ಆದರೆ ಲಾಡ್ ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಒಬ್ಬರು ಎಂದು ಸ್ಪಷ್ಟವಾಗಿ ಹೇಳುತ್ತೇನೆ ಎಂದರು.
ಯಡಿಯೂರಪ್ಪನವರು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಮುಖ್ಯಮಂತ್ರಿ ಯಾಗಿದ್ದಾರೆ. ಆದರೆ ಪಾಪ ಅವರ ಪಕ್ಷದವರು ಬಲಾತ್ಕಾರದಿಂದ ಅವರನ್ನು ಮನೆಗೆ ಕಳಿಸಿದ್ದಾರೆ. ಬೊಮ್ಮಾಯಿಯವರು ಯಡಿಯೂರಪ್ಪನವರ ಕೃಪೆಯಿಂದಲೇ ಸಿಎಂ ಆಗಿದ್ದು, ಅದರ ಮರ್ಜಿಗಾಗಿ ಯಡಿಯೂರಪ್ಪನವರ ಪಾಪದ ಕೆಲಸಗಳನ್ನು ಮುಂದುವರಿಸಲೇಬೇಕಾಗಿದೆ ಎಂದರು.
ಸಿದ್ದರಾಮಯ್ಯನವರು ಲಾಡ್ ಅವರ ಮನೆಗೆ ಬರುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ಕಲಘಟಗಿ ಮತ್ತು ಅಳ್ನಾವರ ಭಾಗದಿಂದ ಸಹಸ್ರಾರು ಜನರು ತಂಡೋಪತಂಡವಾಗಿ ಆಗಮಿಸಿದ್ದರು. ಸಿದ್ದರಾಮಯ್ಯನವರು ಬರುತ್ತಿದ್ದಂತೆಯೇ ಅವರಿಗೆ ಹೂಮಳೆಯಿಂದ ಭವ್ಯವಾದ ಸ್ವಾಗತ ನೀಡಲಾಯಿತು. ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ, ದೇವಕಿ ಯೋಗಾನಂದ, ಅನಿಲಕುಮಾರ ಪಾಟೀಲ, ಅಲ್ತಾಫ ಕಿತ್ತೂರ, ರಾಜಶೇಖರ ಮೆಣಸಿನಕಾಯಿ, ಮಂಜುನಾಥಗೌಡ ಮುರಳ್ಳಿ, ಕುಮಾರ ಖಂಡೇಕರ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.