ಕಲ್ಕತ್ತಾ ಬೀಡಾ ತಿನ್ನೋದೇ ಬೇಡಾ!
ಉತ್ಪಾದನೆ-ಪೂರೈಕೆ ಕೊರತೆ ಹಿನ್ನೆಲೆ , ಗಗನಮುಖಿ ಎಲೆ ಬೆಲೆ, ಒಂದಕ್ಕೆ 10-15 ರೂ.
Team Udayavani, Feb 24, 2021, 3:16 PM IST
ಹುಬ್ಬಳ್ಳಿ: ಕಲ್ಕತ್ತಾ ಎಲೆಗೆ ಚಿನ್ನದ ಬೆಲೆ ಬಂದಿದೆ. ಅತಿವೃಷ್ಟಿ, ಪ್ರವಾಹ ಹಾಗೂ ರೋಗಬಾಧೆಯಿಂದಾಗಿ ಕಲ್ಕತ್ತಾ ಎಲೆ ಬೆಲೆ ಗಗನಮುಖೀಯಾಗಿದ್ದು, ಕಲ್ಕತ್ತಾ ಪಾನ್ ಪ್ರಿಯರ ಜೇಬು ಬಿಸಿಯಾಗುವಂತೆ ಮಾಡಿದೆ.
ಕಲ್ಕತ್ತಾ ಎಲೆಗಳ ಉತ್ಪಾದನೆ ಕುಂಠಿತವಾಗಿದ್ದರಿಂದ ಪೂರೈಕೆಯ ಕೊರತೆ ಎದುರಾಗಿದೆ. ಈ ಹಿಂದೆ 2-3 ರೂ.ಗೆ ಒಂದು ಎಲೆ ಸಿಗುತ್ತಿತ್ತು. ಇದೀಗ 10-15 ರೂ. ಆಗಿದೆ. ಇದರಿಂದಾಗಿ ಸಹಜವಾಗಿ ಪಾನ್ ಗಳ ಬೆಲೆಯೂ 5ರಿಂದ 8 ರೂ. ವರೆಗೆ ಹೆಚ್ಚಾಗಿದೆ. ಮೇ ವೇಳೆ ಸುರಿದ ಅಪಾರ ಮಳೆಯಿಂದಾಗಿ ಎಲೆತೋಟಗಳೇ ಕೊಚ್ಚಿಕೊಂಡು ಹೋಗಿದ್ದು, ಅಳಿದುಳಿದ ಎಲೆ ಬೆಳೆಗೆ ರೋಗ ಕಾಣಿಸಿಕೊಂಡಿದ್ದರಿಂದ ಕಲ್ಕತ್ತಾ ಎಲೆಗಳ ಫಸಲು ನಿರೀಕ್ಷಿತವಾಗಿ ಇಲ್ಲವಾಗಿದೆ.
ಹುಬ್ಬಳ್ಳಿ ನಗರವೊಂದಕ್ಕೆ ನಿತ್ಯ 50 ಸಾವಿರಕ್ಕೂ ಹೆಚ್ಚು ಕಲ್ಕತ್ತಾ ಎಲೆಗಳು ಪೂರೈಕೆ ಆಗುತ್ತಿತ್ತು. ಇದೀಗ ಕೇವಲ 15ರಿಂದ 20 ಸಾವಿರ ಎಲೆಗಳು ಮಾತ್ರ ಬರುತ್ತಿವೆ. ಇದರಿಂದ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಕೆಲವೊಂದುಪಾನ್‌ಶಾಪ್‌ಗಳ ಮಾಲೀಕರು ದರ ಏರಿಕೆಯಿಂದಾಗಿ ಎಲೆಗಳ ಖರೀದಿಗೂ ಹಿಂದೇಟು ಹಾಕುತ್ತಿದ್ದಾರೆ. ಕಲ್ಕತ್ತಾ ಎಲೆಗಳ ದರ ಹೆಚ್ಚಳದಿಂದಾಗಿ ಬಹುತೇಕ ಪಾನ್ ಶಾಪ್‌ನವರು ಅಂಬಾಡಿ ಎಲೆ, ಗುಟ್ಕಾ,ಪಾನ್ ಮಸಾಲಾ, ಇನ್ನಿತರ ವಸ್ತುಗಳ ಮಾರಾಟಮಾಡುತ್ತಿದ್ದಾರೆ. ಕಲ್ಕತ್ತಾ ಎಲೆ ದರ ಹೆಚ್ಚಳದಿಂದ ಪಾನ್ ತಿನ್ನುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂಬುದು ಪಾನ್ ಶಾಪ್‌ನವರ ಅನಿಸಿಕೆ.
ಅಡಿಕೆಯೂ ಬಲುತುಟ್ಟಿ :
ಒಂದೆಡೆ ಕಲ್ಕತ್ತಾ ಎಲೆ ದರ ಗಗನಮುಖೀಯಾಗಿದ್ದರೆ, ಇನ್ನೊಂದೆಡೆ ಅಡಿಕೆ ದರ ಹೆಚ್ಚಳವೂ ಬೀಡಾ ಪ್ರಿಯರ ಜೇಬನ್ನು ಬಿಸಿ ಮಾಡುತ್ತಿದೆ. ಬಹುತೇಕ ಪಾನ್ ಶಾಪ್‌ಗಳಲ್ಲಿ ರೂಪಾಯಿ, 2 ರೂಪಾಯಿಗೆ ಅಡಿಕೆ ನೀಡುವುದನ್ನೇ ಬಂದ್ ಮಾಡಿದ್ದಾರೆ. ಪಾನ್‌ಗೆ ಬಳಸುವ ಇತರ ಎಲ್ಲ ವಸ್ತುಗಳ ಬೆಲೆಯೂ ಬಹು ಏರಿಕೆಯಾಗಿದ್ದು, ಸಹಜವಾಗಿಗ್ರಾಹಕರ ಮೇಲೆ ಬೀಳುತ್ತಿದೆ.ಹೀಗಾಗಿ ಪಾನ್ ತಿನ್ನುವವರ ಸಂಖ್ಯೆ ಗಣನೀಯವಾಗಿ ತಗ್ಗಿದೆ.
ಡ್ಯಾಮೇಜ್ ಎಲೆಗಳು : ಈ ಹಿಂದೆ ರೈಲ್ವೆ ಮೂಲಕ ಕಲ್ಕತ್ತಾ ಎಲೆಗಳು ಆಗಮಿಸುತ್ತಿದ್ದವು. ರೈಲು ಸಂಪರ್ಕ ಸರಿಯಾಗಿ ಇರದೇ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆಆಗಮಿಸಿ ಅಲ್ಲಿಂದ ಟ್ರಾನ್ಸ್‌ಪೋರ್ಟ್ ಮೂಲಕ ನಗರಕ್ಕೆ ಆಗಮಿಸುತ್ತಿವೆ. ಬರುವ ಎಲೆಗಳು ಡ್ಯಾಮೇಜ್ ಆಗಿರುತ್ತವೆ. ಅದೆಲ್ಲವನ್ನು ತೆಗೆದು ಎಲೆಗಳ ಮಾರಾಟ ಮಾಡಬೇಕಾಗಿದೆ. ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುದು ಹಲವು ವ್ಯಾಪಾರಿಗಳ ಅಳಲು.
ಕಳೆದ ಬಾರಿ ಆದ ಪ್ರವಾಹದಿಂದ ಇಡೀ ಎಲೆ ತೋಟಗಳು ಕೊಚ್ಚಿಕೊಂಡು ಹೋಗಿದ್ದು, ಬೆಲೆ ಏರಿಕೆಯಾಗಿದೆ. ಎಲೆಗಳ ಸರಬರಾಜು ಸಹ ಆಗುತ್ತಿಲ್ಲ, ಬರುವ ಎಲೆಗಳಲ್ಲೂ ಡ್ಯಾಮೇಜ್ ಬರುತ್ತಿದ್ದು ಎಲ್ಲವನ್ನು ಸರಿಪಡಿಸಿಕೊಂಡು ಪಾನ್ ಶಾಪ್‌ಗಳಿಗೆ ನೀಡಿದರಾಯಿತು ಎನ್ನುವಷ್ಟರಲ್ಲಿಯೇ ಬೆಲೆ ಏರಿಕೆಯಿಂದ ಪಾನ್ ಶಾಪ್ ಮಳಿಗೆಯವರು ಎಲೆಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಇಳಿಕೆ ಯಾವಾಗ ಎನ್ನುವ ಚಿಂತೆ ಕಾಡುತ್ತಿದೆ. – ವಾಯಿದ್ ಶೇಖ್, ಕಲ್ಕತ್ತಾ ಎಲೆ ಸರಬರಾಜುದಾರ
ಕಲ್ಕತ್ತಾ ಪಾನ್ ತಿನ್ನಲೆಂದು ನಮ್ಮ ಅಂಗಡಿಗೆ ಬರುತ್ತಾರೆ. ಆದರೆ ಎಲೆಗಳ ಅಭಾವದಿಂದ ಜನರನ್ನು ಮರಳಿ ಕಳುಹಿಸುವಂತಾಗಿದೆ. ಬೆಲೆ ಏರಿಕೆ ಬಿಸಿ ಸಹ ತಟ್ಟಿದ್ದು, ಬೇಕಾದಷ್ಟು ಎಲೆಗಳ ಸರಬರಾಜು ಆಗುತ್ತಿಲ್ಲ. ಲಾಕ್ ಡೌನ್ ಮುನ್ನ 1 ಸಾವಿರಕ್ಕೂ ಹೆಚ್ಚು ಕಲ್ಕತ್ತಾ ಎಲೆ ಖರೀದಿ ಮಾಡಲಾಗುತ್ತಿತ್ತು. ಇದೀಗ 600 ಎಲೆ ಖರೀದಿ ಮಾಡಲಾಗುತ್ತಿದೆ. ಪಾನ್‌ಗಳ ದರವನ್ನೂ ಏರಿಕೆ ಮಾಡಲಾಗಿದೆ. –ಆರೂಣ ರಶೀದ್, ಪೀರಾ ಪಾನ್ ಶಾಪ್ ಮಾಲೀಕ
-ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.